ಕಲ್ಯಾಣ ಕರ್ನಾಟಕದ‌ ಮೊದಲ ಫ್ಲೊಡ್ ಲೈಟ್ ಹೊಂದಿರುವ ಕ್ರಿಕೆಟ್ ಮೈದಾನ ಲೋಕಾರ್ಪಣೆ

0
221

ಕೆಬಿಎನ್ ಕ್ರಿಕೆಟ್ ಮೈದಾನ ಕಲ್ಯಾಣ ಕರ್ನಾಟಕ ಮೊದಲ ಖಾಸಗಿ ಮೈದಾನ: ಸೈಯದ್ ಶಾ ಖುಸ್ರೋ ಹುಸೈನಿ

ಕಲಬುರಗಿ: ಕಲ್ಯಾಣ ಕರ್ನಾಟಕ ಸುಪ್ರಸಿದ್ಧ ಖಾಜಾ ಬಂದಾ ನವಾಜ್ ಶಿಕ್ಷಣ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ನೂತನ ಕೆಬಿಎನ್ ಟ್ರೊಫ್ ಕ್ರಿಕೆಟ್ ಮೈದನಾದ ಫ್ಲೊಡ್ ಲೈಟ್ (ವಿದ್ಯುತ್ ದೀಪಗಳ ಮಹಾ ಕಂಬಾ) ಹೊಂದಿರುವ ಮೈದಾನವನ್ನು ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವ ವಿದ್ಯಾಲಯ ಕುಲಪತಿ ಡಾ. ಸೈಯದ್ ಶಾ ಖುಸ್ರೋ ಹುಸೈನಿ ಹಾಗೂ ಶ್ರೀ ಶರಣಬಸವ ಸಂಸ್ಥಾನದ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡ ಅಪ್ಪಾ ಅವರ ಅಂಮೃತ ಹಸ್ತಗಳಿಂದ ಜನಾರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕೆಬಿಎನ್ ವಿಶ್ವ ವಿದ್ಯಾಲಯ ಕುಲಪತಿಪಗಳಾದ ಡಾ. ಸೈಯದ್ ಶಾ ಖುಸ್ರೋ ಹುಸೈನಿ ಮಾತನಾಡಿ ಕಲ್ಯಾಣ ಕರ್ನಾಟಕ ಮೊಟಮೊದಲ ಖಾಸಗಿ ಕ್ರಿಕೆಟ್ ಮೈದಾನ ಜನಾರ್ಪಣೆಗೊಂಡಿರುವ ಐತಿಹಾಸಿಕ ದಿನವಾಗಿದೆ ಎಂದರು.

Contact Your\'s Advertisement; 9902492681

ಈ ಭಾಗದ ಕ್ರೀಡಾ ಪಟ್ಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಲು ಈ ಮೈದಾನ ಸಾಕ್ಷಿಯಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುತ್ತಿದ್ದು, ಆದರೂ ಮಾನಸಿಕವಾಗಿ ನಿಮ್ಮೊಂದಿಗೆ ನಾನು ಇರುವೆ ಎಂದು ಕ್ರಿಕೆಟ್ ಕ್ರೀಡಾಪಟ್ಟುಗಳಿಗೆ ಭರವಸೆ ನೀಡಿ ಪಂದ್ಯವನ್ನು ಉತ್ತಮವಾಗಿ ಆಡುವ ಮೂಲಕ ಕೀರ್ತಿ ತನ್ನಿ ಎಂದು ಕರೆ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಕೆಬಿಎನ್ ಶಿಕ್ಷಣ ಸಂಸ್ಥೆ ಹೆಮ್ಮೆ ಶಿಕ್ಷಣ ಸಂಸ್ಥೆಯಾಗಿದೆ. ಇದೀಗ ಮೊದಲ ಕ್ರಿಕೆಟ್ ಮೈದಾನ ಹೊಂದಿರುವ ಗರಿಮೆ ಹೆಚ್ಚಿಸಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕಿ ಕನೀಜ್ ಫಾತೀಮಾ ಮತನಾಡಿ ಇದೊಂದು ಅಭೂತ್ವಪೂರ್ವ ಘಳಿಗೆ. ಶ್ರಮಿಸಿದ ಪ್ರತಿದೊಂದು ಸಿಬ್ಬಂದಿಗಳಿಗೆ ಮತ್ತು ಕ್ರೀಡಾಪಟ್ಟುಗಳಿಗೆ ಅಭಿನಂದನೆ ವ್ಯಕ್ತಪಡಿಸಿದರು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಕಲಬುರಗಿಯಲ್ಲಿ ಇದೊಂದು ದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆಗೊಳ್ಳುವ ಮೂಲಕ ನಗರಕ್ಕೆ ಹಿರಿಮೆ ತಂದಿದೆ ಎಂದು ಬಣ್ಣಿಸಿದರು. ಕೆಬಿಎನ್ ವಿಶ್ವ ವಿದ್ಯಾಲಯದ ಉಪ ಕುಲಪತಿ ಮೊಹಮ್ಮದ್ ಅಲಿ ಅಲ್ ಹುಸೈನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಖಾಜಾ ಬಂದಾ ನವಾಜ್ ಕ್ರಿಕೆಟ್ ಅಕಾಡಮಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಅಝರೊದ್ದೀನ್ ಮಾತನಾಡಿ ನಾವು 6-7 ವರ್ಷಗಳ ಹಿಂದೆ ಕೆಬಿಎನ್.ಪಿಎಲ್ ಪಂದ್ಯಆರಂಭಿಸಿ ಈ ಕೆಲಸಕ್ಕೆ ಚಾಲನೆ ನೀಡಿದ್ದೇವು. ಇಂದು ದೊಡ್ಡದಾಗಿ ಬೆಳೆಯಲು ಡಾ. ಸೈಯದ್ ಶಾ ಖುಸ್ರೋ ಹುಸೈನಿ ಹಾಗೂ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರ ಪಾತ್ರ ಬಹುದೊಡ್ಡದಾಗಿದೆ ಅವರ ಶ್ರಮಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಈ ವೇಳೆ ಆಟಗಾರರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಜಮಲ್ ಗೋಲಾ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಕೆಬಿಎನ್ ವಿಶ್ವ ವಿದ್ಯಾಲಯದ ನಿರ್ದೇಶಕರಾದ ಸೈಯದ್ ಮುಸ್ತಾಫ್ ಅಲಿ ಅಲ್ ಹುಸೈನಿ, ಪಾಲಿಕೆ ಸದಸ್ಯ ಖುಸ್ರೋ ಜಾಗಿರದಾರ್. ಇಲಿಯಾಸ್ ಸೇಠ್ ಬಾಗಬಾನ್, ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here