ಕಲಬುರಗಿ: 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ತಾಲೂಕಿನ ಹೃದಯ ಭಾಗದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕಲ್ಲಪ್ಪ ಯಾದವ್ ಅವರ ವಿವಿ ಜೀನಿಯಸ್ ಅವಾರ್ಡ್ ಎಂಬ ಹೆಸರಿನಲ್ಲಿ ವಿದ್ಯಾ ವಿಕಾಸ್ ಪಿಯು ಸೈನ್ಸ್ ಕಾಲೇಜ್‍ನಲ್ಲಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ಸುಮಾರು 20 ಪ್ರೌಢ ಶಾಲೆಗಳಿಂದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಸಪ್ರಶ್ನೆಗಿಂತ ಮೊದಲು ವಿವಿ ಜೀನಿಯಸ್ ರಸಪ್ರಶ್ನೆ ಪೂರ್ವಭಾವಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಸುಮಾರು 45 ತಂಡಗಳು ಭಾಗವಹಿಸಿದ್ದವು ಭಾಗವಹಿಸಿದ ತಂಡಗಳಲ್ಲಿ ಅಗ್ರ ಶ್ರೇಣಿ ಗಳಿಸಿದ 10 ತಂಡಗಳನ್ನು ರಸಪ್ರಶ್ನೆಗೆ ಆಯ್ಕೆ ಮಾಡಲಾಯಿತು.
ಎಸ್ ಎಸ್ ಎಲ್ ಸಿ ಪಠ್ಯಕ್ರಮದ ಐದು ವಿಷಯಗಳ ಮೇಲೆ (ಹಿಂದಿ ಹೊರತುಪಡಿಸಿ) ನಡೆದ ಅರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಶ್ರೀ ನೂರಂದೇಶ್ವರ ಪ್ರೌಢಶಾಲೆ ಜೇವರ್ಗಿ ವಿದ್ಯಾರ್ಥಿಗಳಾದ ಸಂಜನಾ ಲಿಂಗಮ್ಮ ಹಾಗೂ ಮತ್ತು ಅಣ್ಣಮ್ಮ ಎಂಬ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದರೆ ಆದರ್ಶ ಶಾಲೆ ಚನ್ನೂರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರೆ ಶ್ರೀ ಮಹಾಲಕ್ಷ್ಮಿ ಪ್ರೌಢಶಾಲೆ ಜೀವರ್ಗಿ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದೆ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕಲ್ಲಪ್ಪ ಯಾದವ್, ಪ್ರಾಂಶುಪಾಲರಾದ ಶ್ರೀಶೈಲ್ ಜಿ, ಆದರ್ಶ ವಿದ್ಯಾಲಯದ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ್ ಹೂಗಾರ್ ಹಾಗೂ ನೂರಂದೇಶ್ವರ ಶಾಲೆಯ ಮುಖ್ಯ ಗುರುಗಳಾದ ಮಹದೇವಯ್ಯ ಸ್ಥಾವರಮಠ, ಮಹಾಲಕ್ಷ್ಮಿ ಶಾಲೆಯ ಮುಖ್ಯ ಗುರುಗಳಾದ ಮಡಿವಾಳಪ್ಪ, ಶಿಕ್ಷಕರಾದ ನಿರಂಜನ್ ಊರಿನಾಳ, ಗುರುಸ್ವಾಮಿ ಗದಗಿಮಠ, ಅಶೋಕ್ ಪಾಟೀಲ್ ಗವನಳ್ಳಿ, ಬಸವರಾಜ್ ಪಾಟೀಲ್ ಗೌನಳ್ಳಿ, ಗುರು ಶಾಂತಪ್ಪ ಸಿಕೆದ್ ಕೊಳಕೂರ್ ಸೇರಿದಂತೆ ಕಾಲೇಜಿನ ಸಹಶಿಕ್ಷಕರು ಪಾಲ್ಗೊಂಡಿದ್ದರು.