ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಬೃಹತ್ ರಸ್ತಾ ರೋಕೋ ಚಳುವಳಿ

0
50

ಶಹಾಬಾದ: ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿ ವತಿಯಿಂದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಅವರ ನೇತೃತ್ವದಲ್ಲಿ ಎರಡನೇ ಹಂತದ ರಸ್ತಾ ರೋಕೋ ಚಳುವಳಿ ನಡೆಯಿತು.

ಬೆಳಿಗ್ಗೆ 10:30 ಗಂಟೆಗೆ ಪ್ರಾರಂಭವಾದ ಚಳುವಳಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಸುಮಾರು 2 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆದ ಕಾರಣ ಸಂಚಾರ ವ್ಯವಸ್ಥೆ ಕಡಿತಗೊಂಡು ನೂರಾರು ವಾಹನಗಳು ರಸ್ತೆಯ ಮೇಲೆ ನಿಂತಿದ್ದವು. ವಾಹನಗಳ ದಟ್ಟಣೆ ತಡೆಯಲು ಪೊಲೀಸರು ಹರಸಾಹಸಪಟ್ಟರು.

Contact Your\'s Advertisement; 9902492681

ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿಯ ಮುಖ್ಯಸ್ಥರಾದ ಮತ್ತು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಹಲವು ವರ್ಷಗಳಿಂದ ಇಲ್ಲಿನ ಜನರಿಗೆ ಹಗೆಟ್ಟ ರಸ್ತೆಯಿಂದ ರೋಸಿ ಹೋಗಿದ್ದರು.ಧೂಳಿನಿಂದ, ತಗ್ಗುಗಳಿಂದ ಮಳೆಗಾಲದಲ್ಲಿ ಕೆಸರಿನಿಂದ ಹೇಳಲಾರದಷ್ಟು ಸಂಕಟ ಪಡುತ್ತಿದ್ದರು.ಅದೆಷ್ಟೋ ಬಾರಿ ಜಿಲ್ಲಾಧಿಕಾರಿಗಳಿಗೆ, ಅಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಕೇವಲ ಸುಳ್ಳಿನ ಕಂತೆಗಳನ್ನೇ ಬಿಚ್ಚಿಡುವ ಮೂಲಕ ಜನರನ್ನು ಯಾಮಾರಿಸುತ್ತಿದ್ದರು.

ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಜನರ ಸಮಸ್ಯೆಯನ್ನು ಬಗೆಹರಿಸುವುದು ಅವರ ಆದ್ಯ ಕರ್ತವ್ಯ.ಆದರೆ ಅದನ್ನು ಮಾಡದೇ ಐದು ವರ್ಷ ಅವಧಿ ಮುಗಿಸಿದರು. ಮತ್ತೆ ಜನ ಅವರನ್ನು ತಿರಸ್ಕರಿಸದೇ ಆಯ್ಕೆ ಮಾಡಿ ಶಾಸಕರನ್ನಾಗಿ ಮಾಡಿದ್ದಾರೆ ಎಂದರೆ ಅವರಿಗೆ ಮೂಲಸೌಲಭ್ಯ ಒದಗಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ಅವರ ಕರ್ತವ್ಯ. ಪ್ರತಿ ದಿನ ಇಲ್ಲಿನ ಸಾರ್ವಜನಿಕರು, ಶಾಲಾ-ಮಕ್ಕಳು ಧೂಳಿನಲ್ಲಿಯೇ ತೆರಳುವಂತಾಗಿದೆ.ಪ್ರತಿ ದಿನ ಉಸಿರುವಗಟ್ಟುವ ವಾತಾವರಣದಿಂದ ಜನರು ಬೇಸತ್ತು ಹೋಗಿದ್ದಾರೆ.ಮಳೆ ಬಂದರೆ ಕೆಸರಿನ ಮಧ್ಯೆ ತೆರಳುವ ಪ್ರಸಂಗ.

ಒಟ್ಟಾರೆ ಸಿಸನ್ ರಸ್ತೆಯಾಗಿ ಮಾರ್ಪಡುತ್ತದೆ.ಯಾವುದೇ ರಸ್ತೆಗೂ ಹೋದರೂ ದೊಡ್ಡ ಹೊಂಡಗಳೇ ಕಾಣಸಿಗುತ್ತವೆ.ಇದಕ್ಕಾಗಿ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ವಾಡಿ ವೃತ್ತದಲ್ಲಿ ಬೃಹತ್ ಹೋರಾಟ ಕೈಗೊಂಡಾಗ, ಸ್ಥಳೀಯ ಶಾಸಕರು ಈಗಾಗಲೇ ಟೆಂಡರ್ ಆಗಿದ್ದು, 8 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.8 ದಿನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಪತ್ರಿಕೆ ಹೇಳಿದ್ದರು.ಈ ಬಾರಿ ಸಂಪೂರ್ಣ ಭರವಸೆ ನೀಡಿದರೇ ಮಾತ್ರ ಪ್ರತಿಭಟನೆ ಹಿಂದಕ್ಕೆ ಪಡೆಯುತ್ತಿವೆ.ಇಲ್ಲದಿದ್ದರೇ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹಾಗೂ ತಹಸೀಲ್ದಾರ ಅವರು ಟೆಂಡರ್ ಪ್ರತಿ ತೋರಿಸಿ ಈಗಾಗಲೇ ಟೆಂಡರ್ ಆಗಿದ್ದು 584.30 ಲಕ್ಷ ರೂ.ಅನುದಾನದಲ್ಲಿ ವಾಡಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ.ಇನ್ನೇನು ಎರಡು ದಿನದಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತೆವೆ,ಇದಕ್ಕೆ ತಾವೆಲ್ಲರೂ ಸಹಕರಿಸಬೇಕು.ಇದು ಆಶ್ವಾಸನೆ ಅಲ್ಲ.ಕೇವಲ ಎರಡು ದಿನ ಸಮಯವಾಕಾಶ ನೀಡಿ.ಕೆಲಸ ಪ್ರಾರಂಭವಾಗುತ್ತದೆ ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ.ಎಸ್.ಹೆಚ್, ಗುಂಡಮ್ಮ ಮಡಿವಾಳ, ರಾಘವೇಂದ್ರ.ಎಂ.ಜಿ,ಗಣಪತರಾವ ಮಾನೆ, ರಾಮಣ್ಣ ಇಬ್ರಾಹಿಂಪೂರ,ಅಬ್ದುಲ್ ಘನಿ ಸಾಬೀರ ಮಾತನಾಡಿದರು. ಪ್ರಮುಖರಾದ ನಾಗಣ್ಣ ರಾಂಪೂರೆ, ಪಿ.ಎಸ್.ಮೇತ್ರೆ, ಶರಣಗೌಡ ಪಾಟೀಲ,ಮಹ್ಮದ್ ಮಸ್ತಾನ,ನಾಗಪ್ಪ ರಾಯಚೂರಕರ್, ಮಹಾದೇವ ತರನಳ್ಳಿ, ಸ್ನೇಹಲ್ ಜಾಯಿ,ಬಸವರಾಜ ಮಯೂರ, ವಿಶ್ವರಾಜ ಫಿರೋಜಾಬಾದ, ಯಲ್ಲಾಲಿಂಗ ಹೈಯ್ಯಳಕರ್, ಮಲ್ಕಣ್ಣ ಮುದ್ದಾ, ನಿಂಗಣ್ಣ ಪೂಜಾರಿ, ಸಾಯಿಬಣ್ಣ ಗುಡುಬಾ,ರಾಯಪ್ಪ ಹುರಮುಂಜಿ,ಮಲ್ಲೇಶಿ ಭಜಂತ್ರಿ ಸೇರಿದಂತೆ ನೂರಾರು ಜನರು ಇದ್ದರು.

ಇನ್ನೂ ಮೂರು ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭ ಮಾಡದಿದ್ದರೇ, ಸ್ಥಳೀಯ ಶಾಸಕರಿಗೆ ಘೇರಾವ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿ ನಿರ್ಧರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here