ಅಲ್ಪಸಂಖ್ಯಾತರ ಬಜೆಟ್ ಮಂಡನೆಗೆ ಮೋದಿನ್ ಪಟೇಲ್ ಅಣಬಿ ಸರಕಾರಕ್ಕೆ ಅಭಿನಂದನೆ

0
20

ಕಲಬುರಗಿ: ಫೆಬ್ರವರಿ 16 ರಂದು 2024- 25 ನೇ ಸಾಲಿನ ನೀಡಿರುವ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಪರವಾಗಿ ಬಜೆಟ್ ಮಂಡನೆ ಮಾಡಿರುವುದಕ್ಕೆ ನಯ ಸವೆರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ಅವರು ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರಿಗೆ 2013ರ ಯೋಜನೆಗಳು ಮರು ಜಾರಿಗೊಳಿಸಬೇಕು.ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ರಾಜ್ಯದ ಸಚಿವರಿಗೆ, ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಶಾಸಕ ಅಲ್ಲಂಪ್ರಭು ಪಾಟೀಲ್ ಇವರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪಾಟೀಲರು ಅಲ್ಪಸಂಖ್ಯಾತರಿಗೆ ಈ ಯೋಜನೆಗಳು, ಕೊಡಬೇಕು. ಇದನ್ನು ಪರಿಗಣಿಸಿ ತಾವು ಯೋಜನೆಗಳು ಅನುಷ್ಠಾನಕ್ಕೆ ತರಬೇಕೆಂದು ಸಿ.ಎಂ ಅವರಿಗೆ ಹೇಳಿದರು.

Contact Your\'s Advertisement; 9902492681

ಈ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 3000 ಕೋಟಿ ರೂಪವನ್ನು ಮೀಸಲಾಡಲಾಗಿದೆ. ಮೌಲಾನ ಆಜಾದ್ ಮಾದರಿ ಶಾಲೆಯನ್ನು 25 ಪಿಯುಸಿ ಕಾಲೇಜುಗಳನ್ನು ಉನ್ನತಿಕರಿಸಲಾಗಿದೆ, 100 ಮೌಲಾನ ಅಜಾದ್ ಹೊಸ ಶಾಲೆಗಳನ್ನು ತೆರೆಯುವುದಕ್ಕೆ ಅನುಮತಿ ಕೊಡಲಾಗಿದೆ.

ಬಡವರ ಶೈಕ್ಷಣಿಕ ಪರಿಸ್ಥಿತಿಯನ್ನು ಸುಧಾರಿಸಲು ಬಲವಾದ ಹೆಜ್ಜೆ ಇಡಲಾಗಿದೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅದೀನದಲ್ಲಿ ಬರುವಂತ ಮಾದರಿ ಶಾಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 600 ಕೋಟಿಯನ್ನು ಕಟ್ಟಡಕ್ಕೆ ಮೀಸಲಿಡಲಾಗಿದೆ, ಉರ್ದು ಅಕಾಡೆಮಿ ಅಭಿವೃದ್ಧಿ ಮಾಡಲು 150 ಕೋಟಿಯನ್ನು ಮೀಸ ಇಡಲಾಗಿದೆ.

ಅಲ್ಪಸಂಖ್ಯಾತರ ನೇರ ಸಾಲ ಕೈಗಾರಿಕಾ ಉದ್ಯಮಕ್ಕೆ 400 ಕೋಟಿಯನ್ನು ಮೀಸಲಿಡಲಾಗಿದೆ, ಕರ್ನಾಟಕದ ಹಳೆಯ ಐತಿಹಾಸಿಕ ಕೋಟೆ ಕಟ್ಟಡಗಳನ್ನು ಹಳೆಯ ದರ್ಗಗಳನ್ನು ಅಭಿವೃದ್ಧಿ ಪಡಿಸಲು 200 ಕೋಟಿ ಹಣವನ್ನು ಮೀಸಲಾಡಲಾಗಿದೆ, ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಗೆ 190 ಕೋಟಿ ರೂಪಾಯಿ ಮೀಸಲಿಡಲಾಗಿದೆ, ಮಸ್ಜಿದ್ ಇಮಾಮ್ ಮತ್ತು ಮೌಜನ್ ಅವರಿಗೆ 84 ಕೋಟಿ ಮೀಸಲಾಡಲಾಗಿದೆ, ವಕ್ಫ್ ಆಸ್ತಿ ಸಂರಕ್ಷಣೆಗೆ 100 ಕೋಟಿ ಮೀಸಲಾಡಲಾಗಿದೆ, ವಿದ್ಯಾಸಿರಿ ಯೋಜನೆಗೆ 25 ಕೋಟಿ ಮೀಸಲಾಡಲಾಗಿದೆ, ಅಲ್ಪಸಂಖ್ಯಾತರಿಗೆ ಮಂಡಿಸಿರುವ ಬಜೆಟ್ ಆಶಾದಾಯಕವಾಗಿದೆ ಎಂದು ಮೋದಿನ ಪಟೇಲ ಅಣಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here