ಪಾಲಿಕೆ ಅಧಿಕಾರಿಗಳ ಸಂಭಾಷಣೆಯಲ್ಲಿ ಡಾ. ಅಂಬೇಡ್ಕರ್ ಅವರಿಗೆ ಅವಹೇಳನ: ಮೂವರ ವಿರುದ್ಧ ಪ್ರಕರಣ ದಾಖಲು

0
146

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಕೆ.ಎ.ಎಸ್ ಅಧಿಕಾರಿಯಾಗಿರುವ ಬಿಜೆಪಿ ಶಾಸಕ ಶರಣು ಸಲಗರ್ ಅವರ ಪತ್ನಿ ಮತ್ತು ಪಾಲಿಕೆಯ ವ್ಯವಸ್ಥಾಪಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅಮಾನತು ಮಾಡಿ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ ಅವರು ಬ್ರಹ್ಮಪೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕ ಸರಕಾರ ರಾಜ್ಯದಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ ರವರು ಬರೆದಿರುವ ಸಂವಿಧಾನ ಜಾತಾ ಕಾರ್ಯಕ್ರಮದ ಮೂಲಕ ಇಡಿ ಸಂವಿಧಾನ ಅರಿವು ಮತ್ತು ಬಾಬಾ ಸಾಹೇಬ ಡಾ. ಬಿ.ಆರ್‌. ಅಂಬೇಡ್ಕರ ರವರ ಕೊಡುಗೆಯನ್ನು ಕರ್ನಾಟಕದ ಜನತೆಯ ಮನೆ ಮನೆಗೆ ತಲಪುವಂತೆ ಮಾಡುತ್ತಿದೆ. ಜಿಲ್ಲಾದ್ಯಂತ ಮತ್ತು ಮಹಾನಗರ ಪಾಲಿಕಯಿಂದ  ಪ್ರತಿಯೊಂದು ವಾರ್ಡಗಳಲ್ಲಿ ಸಂವಿಧಾನ ಜಾಗೃತಿ ಜಾತಾ ನಡೆಯುತ್ತಿದೆ.

Contact Your\'s Advertisement; 9902492681

ಆದರೆ ಪಾಲಿಕೆಯ ಮೂವರು ಅಧಿಕಾರಿಗಳ ದೂರವಾಣಿ ಸಂಭಾಷಣೆಯಲ್ಲಿ “ಮೇಡಂ ಅವರೆ ಮೇಡಂ ಅವರೆ ಅಂಬೇಡ್ಕರ್‌ ಅಷ್ಟು ವಿಚಾರ ಮಾಡ್ಯಾನೋ ಇಲ್ಲೋ ಗೊತ್ತಿಲ್ಲ ನಾವು ಅರ್ಜುನ ಅಷ್ಟು ವಿಚಾರ ಮಾಡ್ಯಾವ ಪಿಕೆಂದು ಅವ ಸಂವಿಧಾನ ಬರಿಲಾಕನು ಅಷ್ಟು ವಿಚಾರ ಮಾಡಿಲ್ಲಾ ಮಂಗಳೂರಿನವರು ಗುಲಬರ್ಗಾ ಅಂದರೆ ಇಡಿಯಟ್‌ ಸುಮ್ನೆ ಕೂಡು ಅಂತಾರೆ” ಎಂದು ಕಚೇರಿಯ ವ್ಯವಸ್ಥಾಪಕ ಅಂಬಾದಾಸ ಖತಾಲ, ಕರ ವಸೂಲಿಗಾರರಾದ ಅರ್ಜುನ ಗೋಳಾ ಹಾಗೂ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ ಮಹಿಳಾ ಕೆ.ಎ.ಎಸ್ ಅಧಿಕಾರಿ ನೆಡೆಸಿರುವ ಕಾಸ್ಟ್ಪರೇನ್ಸ್‌ ಕಾಲ್‌ ನಲ್ಲಿ ಹಾಸ್ಯಸ್ಪದವಾಗಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತಂದು, ಸಂವಿಧಾನ ಶಿಲ್ಪಿ ಅಂಬೇಡ್ಕರರವರಿಗೆ ಅವಮಾನ ತೋರಿದ್ದಾರೆ ಎಂದು ದೂರುನಲ್ಲಿ ತಿಳಿಸಿದ್ದಾರೆ.

ಮತನಾಡಿದ ಪಾಲಿಕೆ ವ್ಯಸ್ಥಾಪಕನ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಈ ಕೂಡಲೇ ಸೇವೆಯಿಂದ ವಜಾ ಮಾಡಬೇಕು ಆಗ್ರಹಿಸಿದ್ದಾರೆ. ಇನ್ನಿಬ್ಬರು ಅಧಿಕಾರಿ/ಸಿಬ್ಬಂದಿ ವರ್ಗದವರ ವಿರುದ್ದ ನಂ. 22/2024 ಕಲಂ 295 295(A) ಸಂಗಡ 34 ಐಪಿಸಿ ಮತ್ತು ಕಲಂ 3(1)(V) SC/ST PA ACT ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here