ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯ: ಡಾ. ಶಿವರಂಜನ ಸತ್ಯಂಪೇಟೆ

0
38

ಆಳಂದ: ಮೂಡನಂಬಿಕೆ, ಅಜ್ಞಾನದಿಂದ ಮಕ್ಕಳನ್ನು ಮುಕ್ತಗೊಳಿಸಲು ಶಾಲಾ ಹಂತದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದು ಅವಶ್ಯಕವಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಪಟ್ಟಣದ ಜಯಪ್ರಕಾಶ ನಾರಾಯಣ ಪ್ರೌಢ ಶಾಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲ್ಲೂಕು ಸಮಿತಿಯಿಂದ ಏರ್ಪಡಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ ರಾಜಶ್ರೀ ಅಕ್ಕನವರು ಮಾತನಾಡಿ ವಿಜ್ಞಾನದಿಂದ ಜಗತ್ತು ಪ್ರಗತಿ ಕಾಣುತ್ತಿದೆ, ಆದರೆ ವಿಜ್ಞಾನದ ಬಳಕೆಗೆ ವಿವೇಕವು ಮುಖ್ಯವಾಗಿದ್ದು, ವಿಜ್ಞಾನವು ನಮ್ಮ ಪ್ರಕೃತಿ ಹಾಗೂ ಬದುಕಿಗೆ ಮಾರಕವಾಗದಂತೆ ಎಚ್ಚರವಹಿಸಲು ತಿಳಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ, ನಿವೃತ್ತ ಮುಖ್ಯಶಿಕ್ಷಕ ಶರಣಪ್ಪ ಘಂಟೆ ಮಾತನಾಡಿದರು. ಪರಿಷತ್ತಿನ ತಾಲ್ಲೂಕಾಧ್ಯಕ್ಷ ಎಲ್ ಎಸ್ ಬೀದಿ ಅಧ್ಯಕ್ಷತೆವಹಿಸಿದರು. ಬಾಬುರಾವ ಮಡ್ಡೆ, ಪ್ರಭಾಕರ ಸಲಗರ, ಸಂಜಯ ಪಾಟೀಲ, ಶರಣಬಸಪ್ಪ ಇಟಗಿ, ಶಿವಪುತ್ರಪ್ಪ ಅಲ್ಲಿ, ಅಪ್ಪಾಸಾಹೇಬ ತೀರ್ಥ, ಡಿ.ಎಂ.ಪಾಟೀಲ, ಶರಣಬಸಪ್ಪ ಪರೇಣಿ, ದತ್ತಾತ್ರೇಯ ಬಿರಾದಾರ ಉಪಸ್ಥಿತರಿದ್ದರು.

ತಾಲ್ಲೂಕಿನ ವಿವಿಧ ಶಾಲೆ ವಿಜ್ಞಾನ ಶಿಕ್ಷಕರಾದ ವಿಠಲ ಪೊದ್ದಾರ, ಕೇಶವಮೂರ್ತಿ ದೇಸಾಯಿ, ಸುರೇಖಾ ಸ್ವಾಮಿ, ರಾಜಕುಮಾರ ಚಲುವಾದಿ, ಗುರುಲಿಂಗಯ್ಯ ಅಳ್ಳಿಮಠ, ಗುರುಲಿಂಗಪ್ಪ ಬಳಬಟ್ಟಿ, ಮಹೇಜ್ ಜೆ ಅನ್ಸಾರಿ, ಮಾಯಾದೇವಿ ಚಿಚಕೋಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವಿವೇಕ ವರ್ಧಿನಿ ಶಾಲಾ ಮಕ್ಕಳಿಂದ ವಿಜ್ಞಾನ ಮಾದರಿ ಪ್ರದರ್ಶನ, ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಪ್ರಮೋಧ ಪಂಚಾಳ ನಿರೂಪಿಸಿದರೆ, ಸತೀಶ ಕೊಗನೂರೆ ಸ್ವಾಗತಿಸಿದರು. ಅಪ್ಪಾಸಾಹೇಬ ತೀರ್ಥ ವಂದಿಸಿದರು.

ಸಂಬುದ್ಧ ಪದವಿ ಕಾಲೇಜು: ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ವಿಜ್ಞಾನ ದಿನಾಚರಣೆ ನಡೆಯಿತು. ಸಮತಾ ಆರ್ಯವೇದಿಕ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಅಕ್ಕಿ ವಿಶೇಷ ಉಪನ್ಯಾಸ ನೀಡಿದರು. ಮಹಾದೇವಪ್ಪ ಪಾಟೀಲ, ವೈಷ್ಣವಿ ಹಾರಕ ಮಾತನಾಡಿದರು.

ಪ್ರಾಂಶುಪಾಲ ಸಂಜಯ ಪಾಟೀಲ ಅಧ್ಯಕ್ಷತೆವಹಿಸಿದರು. ಶರಣು ಪರೇಣಿ, ಬಾಬುರಾವ ಚಿಕಣಿ, ಜಗದೀಶ ಮುಲಗೆ, ಸಿದ್ಧಾರ್ಥ ಹಸೂರೆ, ಮಹಾದೇವಿ ಮುನ್ನೋಳ್ಳಿ, ವಿಜಯಲಕ್ಷ್ಮಿ ಪಟ್ಟೆ, ಸನಾ ಬಂಗರಗಿ, ಶಹಗುಪ್ತಾ ನಾಜ್ ಉಪಸ್ಥಿತರಿದ್ದರು. ವಿಜ್ಞಾನ ರಂಗೋಲಿ, ರಸಪ್ರಶ್ನೆ, ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಆದರ್ಶ ಶಾಲೆ: ಪಟ್ಟಣದ ಅದರ್ಶ ಅಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯಶಿಕ್ತರ ಸೂರ್ಯಕಾಂತ ಕಾಂಬಳೆ ಅಧ್ಯಕ್ಷತೆವಹಿಸಿದರು. ಮಲ್ಲಿಕಾರ್ಜುನ ಪಾಟೀಲ, ಸಿದ್ಧಾರ್ಥ ಹನೂರೆ ಮಾತನಾಡಿದರು. ಸಿದ್ಧಣ್ಣಾ ಸ್ವಾಮಿ, ಸಿದ್ಧಣ್ಣಾ ಮಾಹಿ, ಪಲ್ಲವಿ, ಸೀಮಂತನಿ, ರಾಜಶೇಖರ ಪಾಟೀಲ, ಮೋಹನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here