ಕರ್ನಾಟಕ ಕಾನೂನು ಮಹಾವಿದ್ಯಾಲಯದಲ್ಲಿ ‘ಸಾಮಾಜಿಕ ನ್ಯಾಯ ದಿನಾಚರಣೆʼ

0
73

ಕಲಬುರಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕರ್ನಾಟಕ ಕಾನೂನು ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕರ್ನಾಟಕ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ʻಸಾಮಾಜಿಕ ನ್ಯಾಯ ದಿನಾಚರಣೆʼ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿಯ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಶ್ರೀನಿವಾಸ ನವಲೆಯವರು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು. ನವಲೆಯವರು ಮಾತನಾಡುತ್ತಾ ʻಸಾಮಾಜಿಕ ನ್ಯಾಯಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ನೊಂದ ಜನತೆಯ ಮನೆಬಾಗಿಲಿಗೆ ನೀಡುವ ನಿಟ್ಟಿನಲ್ಲಿ ಉಚಿತವಾಗಿ ಪರಿಣಿತ ವಕೀಲರನ್ನು ನೇಮಿಸುವದರೊಂದಿಗೆ ಹಾಗೂ ಉಚಿತ ಕಾನೂನು ಅರಿವು – ನೆರವು ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದ ದೊಡ್ಡ ದೊಡ್ಡ ನಗರಗಳವರೆಗೆ ಆಯೋಜನೆ ಮಾಡುತ್ತಾ ಶ್ರಮಿಸುತ್ತಿದ್ದು. ನೊಂದವರು ಕಾನೂನು ಸೇವೆ ಪ್ರಾಧಿಕಾರದಿಂದ ಉಚಿತ ಸೇವೆಯನ್ನು ಪಡೆಯಬೇಕಾಗಿ ಕೋರಿದರು.

Contact Your\'s Advertisement; 9902492681

ಉಪನ್ಯಾಸಕರಾಗಿ ಆಗಮಿಸಿದ ನ್ಯಾಯವಾದಿ ಹಾಗೂ ಮಹಾತ್ಮಗಾಂಧಿ ಗ್ರಾಹಕರ ಹಿತ ರಕ಼್ಷಣೆ ವೇದಿಕೆಯ ಕಾರ್ಯದರ್ಶಿಗಳಾದ ವೈಜನಾಥ. ಎಸ್‌ ಝಳಕಿ ಯವರು ಸಾಮಾಜಿಕ ನ್ಯಾಯ ದಿನಾಚರಣೆ ಕುರಿತು ವಿಶೇಷವಾದ ಉಪನ್ಯಾಸವನ್ನು ನೀಡುತ್ತಾ ʻ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಿಕೊಡುವಲ್ಲಿ ನ್ಯಾಯಾಲಯಗಳ, ನ್ಯಾಯವಾದಿಗಳ ಹಾಗೂ ಕಾನೂನು ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು. ನೊಂದವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಹಾಗೂ ಸಂವಿಧಾಂನದ ಆಶೋತ್ತರಗಳನ್ನು ಈಡೇರಿಸುವಲ್ಲಿ ಕಾನೂನು ವಿದ್ಯಾರ್ಥಿಗಳು ಹೆಚ್ಚಾಗಿ ಶ್ರಮಿಸಬೇಕಾಗಿದೆ ಎಂದರು.

ನ್ಯಾಯಾಲಯಗಳು ವಿಶೇಷ ಕಾಯ್ದೆಗಳಡಿ ನೊಂದ ಜನತೆಗೆ ಒದಗಿಸಿಕೊಟ್ಟ ಸಾಮಾಜಿಕ ನ್ಯಾಯದ ಕುರಿತು ಐತಿಹಾಸಿಕ ತೀರ್ಪುಗಳನ್ನು ಉಲ್ಲೇಖಿಸುತ್ತಾ ವಿವರವಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾನೂನು ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಜೆ. ಜೋಷೆಫ್‌ ಅವರು ವಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ನಿವೇದಿತಾ ಪಾಟೀಲ ನಿರ್ವಹಿಸಿದರು. ವಂದನಾರ್ಪಣೆಯನ್ನು ಶೀಲಾ ನೆಲ್ಲಗಿ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರಾದ ಎಚ್ ಕೆ. ಕುನ್ನೂರ, ಜಾವೇದ್‌ ಇಶ್ರತ್‌, ಈರಮ್ಮ ಎಚ್‌ ಔರಾದ್‌, ಆಯಶಾ ಜಬೀನ್‌, ಅನುರಾಧಾ, ಶೃತಿ ಕಾಂದೆ, ರಾಜು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here