ವಚನಗಳಲ್ಲಿ ವಿಜ್ಞಾನವಿದೆ: ಡಾ.ಶಿವರಂಜನ್ ಸತ್ಯಂಪೇಟೆ

0
174

ಕಲಬುರಗಿ: ವಚನಗಳಲ್ಲಿ ವಿಜ್ಞಾನ ,ವೈಚಾರಿಕ ,ವೈಜ್ನಾನಿಕ ವಿಚಾರಗಳು ಅಡಗಿವೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು(ರಿ) ಕಲಬುರಗಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಶಿವರಂಜನ್ ಸತ್ಯಂಪೇಟೆ ಅವರು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ವಿಜ್ಞಾನ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯಗಳ ವಿಜ್ಞಾನ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು .

ಮುಂದುವರೆದು ಮಾತನಾಡಿದ ಅವರು ಇಂದು ಪ್ರತಿಯೊಂದನ್ನು ಪರೀಕ್ಷಿಸಿ ನೋಡುವ ಕಾಲವಿದು ,ವಿಜ್ಞಾನ ಎಂದರೆ ತರ್ಕ ಹಾಗಾಗಿ ಯಾವುದನ್ನು ಸುಲಭವಾಗಿ ಒಪ್ಪಲಾಗದು ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಗಿರಿಜಾ ಸಿ.ಎಮ್. ನೆರವೇರಿಸಿದರು, ವೇದಿಕೆಯಲ್ಲಿ ಕ.ರಾ.ವೈ.ಸಂ ಪರಿಷತ್ತಿನ ಸಂಚಾಲಕರಾದ ಪರಮೇಶ್ವರ ಶೆಟಕಾರ ,ಪ್ರೊ.ವೀಣಾ ಹೆಚ್, ಉಮಾ ಆರ್ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡು ಪ್ರಾಸ್ತಾವಿಕವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು, ಡಾ.ಮಹೇಶ ಗಂವ್ಹಾರ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ.ಪ್ರೇಮಚಂದ್ ಚವ್ಹಾಣ ವಂದಿಸಿದರು .ಕಾರ್ಯಕ್ರಮದಲ್ಲಿ ಡಾ.ಮೋಹನರಾಜ್ ಪತ್ತಾರ,ಡಾ.ಶಿವರಾಜ ಗೌನಳ್ಳಿ,ಡಾ.ವೈಜನಾಥ ವರ್ಮಾ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಸುಮಾರು 14 ಮಹಾವಿದ್ಯಾಲಯಗಳ 80 ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ,ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು ,ಕರ್ನಾಟಕ ಒದವಿ ಮಹಾವಿದ್ಯಾಲಯ ಬೀದರ್ ನ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ,ವಿ.ಜಿ.ಮಹಾವಿದ್ಯಾಲಯ ದ್ವಿತೀಯ ಬಹುಮಾನ ಹಾಗೂ ತೃತೀಯ ಬಹುಮಾನವನ್ನು ಕರ್ನಾಟಕ ಕಾಲೇಜು ಬೀದರ್ ಹಾಗೂ ವಿ.ಜ.ಇ.ಕಾಲೇಜು ಕಲಬುರಗಿ ಪಡೆದುಕೊಂಡರು ಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ನಿರ್ಣಾಯಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಹೊನಗುಡಿಮಠ ಹಾಗೂ ಪ್ರೊ.ವಿಜಯಲಕ್ಷ್ಮಿ ಜಾನೆ ಆಗಮಿಸಿ ತೀರ್ಪು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here