ಕಲಬುರಗಿ: ಅಂಬೇಡ್ಕರ್ ಅವರು ಬರೆದ ಸಂವಿಧಾನ ಚಾಚು ತಪ್ಪದೇ ಶದ್ಧೆಯಿಂದ ಪರಿಪಾಲನೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಚುನಾವಣೆಯಲ್ಲಿ ಮೋದಿ ಸರ್ಕಾರ ಬರದಿದ್ದರೆ ದೇಶ ಮುಸ್ಲಿಂರ ಆಳ್ವಿಕೆಗೆ ಒಳಗಾಗಬೇಕಾಗುತ್ತದೆ ಎಂದು ಕೊಂಚುರು ಸವೀತಾನಂದ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ತಾಪುರ ಪಟ್ಟಣದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಯುವ ಬ್ರಿಗೇಡ್, ನಮೋ ಬ್ರಿಗೇಡ್ ಹಾಗೂ ಬಿಜೆಪಿ ಸಂಯುಕ್ತಾಶ್ರಯದಲ್ಲಿ ಜರುಗಿದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಗೆ ಬರವುದಕ್ಕೇ ಪೊಲೀಸರನ್ನು ಬಳಸಿಕೊಂಡು ತಡೆ ಹಿಡಿಯುವ ಕೆಲಸ ಆಯಿತು. ಜಿಲ್ಲೆ ಯಾರಪ್ಪನ ಆಸ್ತಿನೂ ಅಲ್ಲ, ಖರ್ಗೆ ಅವರು ಆಳ್ವಿಕೆ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಜಿಲ್ಲೆ ಅವರ ಅಸ್ತಿಯಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ಮಾಡಿದರು.
ನಿಮ್ಮ ಕೈಯಲ್ಲಿ ಅಧಿಕಾರ, ಮಂತ್ರಿಗಿರಿ, ಪೊಲೀಸ್ ಇಲಾಖೆಯ ಅಧಿಕಾರ ಇದೆ. ಅದೆಲ್ಲ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಎದುರು ಶೂನ್ಯ ಎಂದು ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಕ್ಷೇತ್ರಕ್ಕೆ ನಾನು ಬರಬಾರದೆ, ಇದೇನು ಅವರ ಸ್ವತಃ ಅಸ್ತಿಯಲ್ಲ, ಕೆಲವು ಬಾರಿ ನಾನು ಅವರಿಗೆ ಟ್ವಿಟರ್‍ನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಹಿಟ್ ಅಂಡ್ ರನ್ ವ್ಯಕ್ತಿ ಎಂದು ಸಚಿವರ ವಿರುದ್ಧ ವಾಗ್ದಾಳಿ ಮಾಡಿದರು.
ಡಾ. ಮಲ್ಲಿಕಾರ್ಜುನ್ ಖರ್ಗೆ ಜನರ ದುಡ್ಡನ್ನು ದುರುಪಯೋಗ ಮಾಡಿಕೊಂಡು ಕಲಬುರಗಿ ಇಎಸ್‍ಐ ಆಸ್ಪತ್ರೆಯ ವಿನ್ಯಾಸವನ್ನು ‘ಕರ್ಗೆ’ ಎಂದು ಮಾಡಿಕೊಂಡು ಅವರ ಸ್ವಂತ ಆಸ್ತಿ ಎಂದುಕೊಂಡಿದ್ದಾರೆ ಏನು ಎಂದು ಮತ್ತೆ ಪ್ರಶ್ನೆ ಮಾಡುವ ಮೂಲಕ ಖರ್ಗೆಯವರಿಗೆ ಕೆಣಕಿದರು.
ಬಡವರಿಗೆ ಮನೆ, ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ, ಅನೇಕ ರಸ್ತೆಗಳು, ಬ್ರಿಡ್ಜ್‍ಗಳ ನಿರ್ಮಾಣ, ಕಾರಿಡಾರ್, ದೇವಸ್ಥಾನಗಳ ನಿರ್ಮಾಣ ಸೇರಿದಂತೆ ಹಲವಾರು ಸಾಧನೆಗಳನ್ನು ಮೋದಿ ಸರಕಾರ ಮಾಡಿದೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ತನ್ನ ಪರಿವಾರಕ್ಕೆ ರಾಜಕೀಯ ಮಾಡುವುದು ಅದರೆ ನರೇಂದ್ರ ಮೋದಿಯವರು 140 ಕೋಟಿ ಜನ ತಮ್ಮ ಪರಿವಾರ ಎಂದು ಭಾವಿಸಿ ದೇಶದ ಜನರ ಉದ್ಧಾರಕ್ಕೇ ಕೆಲಸ ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರದ್ರೋಹಿ ಪಕ್ಷವನ್ನು ಬರುವ ಚುನಾವಣೆಯಲ್ಲಿ ಬುಡ ಸಮೇತ ಕಿತ್ತೊಗೆದು ಮತ್ತೆ ಮೋದಿಯ ಅವರನ್ನು ದೇಶದ ಪ್ರಧಾನಿಯನ್ನಾಗಿ ಅಯ್ಕೆ ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿ ನೂತನ ಮಂಡಲ ರವೀಂದ್ರ ಸಜ್ಜನಶೆಟ್ಟಿ, ಪ್ರಮುಖರಾದ ಸೋಮಶೇಖರ್ ಪಾಟೀಲ್ ಬೆಳಗುಂಪಿ, ಶರಣಪ್ಪ ತಳವಾರ್, ಚಂದ್ರಶೇಖರ್ ಅವಂಟಿ, ವಿಠಲ್ ವಾಲ್ಮೀಕಿ ನಾಯಕ್,ನಾಗರಾಜ್ ಭಂಕಲಗಿ, ಬಸವರಾಜ್ ಬೆಣ್ಣೂರಕರ್, ಮಲ್ಲಿಕಾರ್ಜುನ್ ಎಮ್ಮೇನೂರ್, ಕೋಟೇಶ್ವರ್ ರೆಷ್ಮೀ, ವೀರಣ್ಣ ಯಾರಿ, ಶಿವಕುಮಾರ್ ಸುಣಗಾರ್, ಗೋಪಾಲ್ ರಾಠೋಡ್,ನಾಗುಬಾಯಿ ಜಿತುರೇ, ಆನಂದ್ ಪಾಟೀಲ್ ನರಿಬೋಳಿ, ಅಂಬರೀಶ್ ಸುಲೇಗಾಂವ್, ಸಂತೋಷ್ ಹಾವೇರಿ, ಸಂತೋಷ್ ಅಲ್ಲೂರಕರ್, ರಾಜಶೇಖರ್ ಕಡ್ಲಿ, ಶ್ರೀಕಾಂತ್ ಸುಲೇಗಾಂವ್, ಮಹೇಶ್ ಬಾಳಿ ಮುಂತಾದವರು ಉಪಸ್ಥಿತರಿದ್ದರು.