ಪಿಎಂ ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಸೆಂಟರ್‍ನ ಮೂರನೇ ವಾರ್ಷಿಕೋತ್ಸವ

0
16

ಕಲಬುರಗಿ:ಳ ನಗರದ ಶ್ರೀಮತಿ ಪೂರ್ಣಿಮಾ ಪಿಎಂ ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಸೆಂಟರ್‍ನ ಮೂರನೇ ವಾರ್ಷಿಕೋತ್ಸವದಲ್ಲಿ ಡಾ.ಪಿಎಂ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಕಲಬುರಗಿ: ಬಡವರಿಗಾಗಿ ನಿರಂತರ ಉಚಿತ ಸೇವೆ ನೀಡುತ್ತಿರುವ ಶ್ರೀಮತಿ ಪೂರ್ಣಿಮಾ ಪಿ. ಎಂ.ಬಿರಾದಾರ ಚಾರಿಟೇಬಲ್ ಡಯಾ ಲಿಸಿಸ್ ಸೆಂಟರ್‍ನ ಮೂಲ ಸೌಕರ್ಯ ಅಭಿವೃದ್ಧಿಗೆ 5 ಲಕ್ಷ ರೂ.ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿದರು.

Contact Your\'s Advertisement; 9902492681

ನಗರದ ಪೂರ್ಣಿಮಾ ಪಿಎಂ ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಸೆಂಟರ್ ವಾರ್ಷಿಕೋತ್ಸವದಲ್ಲಿ ಮೂರನೇ ಮಾತನಾಡಿದ ಅವರು, ಮೂರು ವರ್ಷಗಳಿಂದ ಉತ್ತಮ ಸೇವೆ ನೀಡಲಾಗುತ್ತಿದೆ. ಯಾವುದೇ ಕಾಪೆರ್Çರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ನಗರ ಪೆÇಲೀಸ್ ಕಮಿಷನರ ಚೇತನ್ ಆರ್, ಮಾತನಾಡಿ, ಜನರಲ್ಲಿ ಸೇವೆ ಮಾಡುವ ಎಲ್ಲರೂ ಬೆಳೆಸಿಕೊಳ್ಳಬೇಕು. 3 ವರ್ಷಗಳಿಂದ ಬಡವರಿಗೆ ಉಚಿತ ಡಯಾಲಿಸಿಸ್ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸ್ನೇಹಿತರು ಸೇರಿಕೊಂಡು ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಆದರೆ, ಇಲ್ಲಿ ನಿಜವಾಗಿಯೂ ಕೂಡ ಇಲ್ಲಿನ ಸ್ನೇಹಿತರ ಗುಂಪು ಸೇವೆಯ ಮೂಲಕ ಬದಲಾವಣೆ ಮಾಡುತ್ತಿದೆ. ಇದು ಹೀಗೆ ಮುಂದುವರಿಯಲಿ ಎಂದು ಹೇಳಿದರು.

ನಾಗನಹಳ್ಳಿ ಪೆÇಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಡಿ.ಕಿಶೋರ ಬಾಬು, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಟ್ರಸ್ಟ್ ಗೌರವಾಧ್ಯಕ್ಷ ಡಾ.ಪಿಎಂ ಬಿರಾದಾರ, ಅಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶರಣಗೌಡ ಯರಗಲ್, ಜಂಟಿ ಕಾರ್ಯದರ್ಶಿ ರಾಮಕೃಷ್ಣ ಬೋರಾಳಕರ್, ಉಪ ಮೇಯರ್ ಶಿವಾನಂದ ಪಿಸ್ತಿ, ಶಿವರಾಜ ಖೂಬಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here