ಸಾಧನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ ನರೇಂದ್ರ ವರ್ಮಾ

0
170

ಶಹಾಬಾದ: ಸಾಧನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ.ಆದರೆ ಸಾಧಿಸುವ ಛಲ ಇದ್ದರೇ ಜೀವನದಲ್ಲಿ ಏನಾದರೂ ಆಗಬಹುದು ಎಂಬುದಕ್ಕೆ ಅನೇಕ ಮಹಾನ್ ವ್ಯಕ್ತಿಗಳ ಪರಿಶ್ರಮವೇ ಸಾಕ್ಷಿ ಎಂದು ನಗರದ ಉದ್ಯಮಿ ನರೇಂದ್ರ ವರ್ಮಾ ಹೇಳಿದರು.

ಅವರು ರವಿವಾರ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅರಿವಿನ ಮನೆ ತರಬೇತಿ ಕೇಂದ್ರದ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ, ನಿರಂತರ ಅಭ್ಯಾಸ ಬಹಳ ಎತ್ತರಕ್ಕೆ ನಿಮ್ಮನ್ನು ತಂದು ನಿಲ್ಲಿಸುತ್ತದೆ.ತಂದೆ-ತಾಯಿಗಳ ಆಸೆ-ಆಕಾಂಕ್ಷೆಗಳನ್ನು ಪೂರೈಸುವ ಮಕ್ಕಳಾಗಿ ಹೊರತು ಅವರ ಆಸೆಗಳನ್ನು ಮುರಿಯುವಂತ ಕೆಲಸ ಆಗದಿರಲಿ.ನಿಮ್ಮ ಸಾಧನೆಗೆ, ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಆ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.

ಅತಿಥಿಗಳಾಗಿ ಕನಕಪ್ಪ ದಂಡಗುಲಕರ್ ಮಾತನಾಡಿ,ಸಮಯದ ಪರಿಪಾಲನೆ, ಸತತ ಅಧ್ಯಯನ ಹಾಗೂ ಪರಿಶ್ರಮದ ಮೂಲಕವೇ ಏನಾದರೂ ಸಾಧಿಸಬಹುದು.ಈ ಅರಿವಿನ ಮನೆ ತರಬೇತಿ ಕೇಂದ್ರ ಎರಡು ದಶಕಗಳಿಂದ ನಿರಂತರವಾಗಿ ಜ್ಞಾನ ದಾಸೋಹ ನೀಡುತ್ತ ಬಂದಿದೆ.ಆದರೆ ಇಂದು ತನ್ನದೇ ಕಟ್ಟ ಹೊಂದುವ ಮೂಲಕ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ವಿದ್ಯಾ ಮಂದಿರವಾಗಿರುವುದು ಸಂತೋಷ ವಿಷಯ ಎಂದರು.

ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಸ್ಪಷ್ಟ ಗುರಿ, ಸಾಧಿಸುವ ಛಲ ಇದ್ದಾಗಲೂ ಸೋಲು ಕಾಣುತ್ತೆವೆ. ಎಡವಿದಾಗ ಕೈಚೆಲ್ಲದೇ ಮರಳಿ ಯತ್ನ ಮಾಡಬೇಕು.ಹಿಂದೆ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ತಿದ್ದುಕೊಳ್ಳಬೇಕಲ್ಲದೇ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅದಮ್ಯ ಬಯಕೆಯೊಂದಿಗೆ ಪರೀಕ್ಷೆಗೆ ಸಿದ್ಧರಾದರೇ ಸಾಧನೆ ತಾನಾಗಿ ಒಲಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರಗಿ ದಾಮೋದರ ರಘೋಜಿ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ.ಕೆ.ಕಣ್ಣಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಅರಿವಿನ ಮನೆ ತರಬೇತಿ ಕೇಂದ್ರದ ಅಧ್ಯಕ್ಷ ರಮೇಶ ಜೋಗದನಕರ್ ವೇದಿಕೆಯ ಮೇಲಿದ್ದರು.

ಉಪನ್ಯಾಸಕ ಗಿರಿರಾಜ.ಜಿ.ಪವಾರ ನಿರೂಪಿಸಿದರು, ಕಲಬುರಗಿ ಗ್ರಾಮೀಣ ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಸ್ವಾಗತಿಸಿದರು,ಕುಮಾರಿ ಅಲ್‍ವಿನಾ ವಂದಿಸಿದರು.

ಇದೇ ಸಂದರ್ಭದಲ್ಲಿ ತರಬೇತಿ ಕೇಂದ್ರದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here