ಕಲಬುರಗಿ: ಸಂವಿಧಾನದ ನೆರವಿನಿಂದ ಅಧಿಕಾರ ಪಡೆದು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಸದಾ ಹೇಳುವ ಬಿಜೆಪಿಗರಿಗೆ ಸಂವಿಧಾನ ಎಂಬುದು ಎಲ್ಲರ ಸಮಾನ ಹಕ್ಕುಗಳನ್ನು ಕಾಪಾಡುವ ಮಹಾಶಕ್ತಿ ಎಂದು ತಿಳಿದಿದೆ ಎಂದು ಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶಿವಾನಂದ ಆರ್ ಕಿಳ್ಳಿ ಹೇಳಿದರು
ಎಲ್ಲರ ಹಕ್ಕುಗಳನ್ನು ಕಾಪಾಡದೇ ಎಲ್ಲರನ್ನೂ ಮೇಲು ಕೀಳಿನ ದೃಷ್ಟಿಯಲ್ಲೇ ಉಳಿಸಬೇಕು ಎನ್ನುವ ಮನುವಾದಿ ಮನಸ್ಥಿತಿ ಉಳ್ಳ ಇಂತವರು ಎಂದಾದರೂ ಎಲ್ಲರ ಸಮಾನ ಹಕ್ಕುಗಳನ್ನು ಕಾಪಾಡುವ ಸಂವಿಧಾನವನ್ನು ಇಷ್ಟ ಪಡುತ್ತಾರೆಯೇ?
ಇಂತಹ ಸಂವಿಧಾನ ವಿರೋಧಿಗಳನ್ನು ದೂರ ಇಡದಿದ್ದರೆ, ಭಾರತದ ಭವಿಷ್ಯದ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.