ಕಲಬುರಗಿಗೆ ಮೋದಿ ಆಗಮನ ಹಿನ್ನೆಲೆ ವಾಡಿ ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಸಭೆ

0
60

ವಾಡಿ: 16 ಮಾರ್ಚ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ನಗರಕ್ಕೆ ಆಗಮಿಸಲಿರುವುದರಿಂದ ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಮಹಾಶಕ್ತಿ ಕೇಂದ್ರ ವತಿಯಿಂದ ಪೂರ್ವ ಭಾವಿ ಸಭೆ ನಡೆಯಿತು.

ಚಿತ್ತಾಪುರ ಮತಕ್ಷೇತ್ರದ ಲೋಕಸಭಾ ಚುನಾವಣೆ ಉಸ್ತುವಾರಿ ಶರಣಪ್ಪ ತಳವಾರ ಮಾತನಾಡಿ ಪ್ರಧಾನಿಯವರ ಆಗಮನ ಸಂತಸ ತಂದಿದೆ. ಪ್ರಧಾನಿ ಮೋದಿ ಅಂದರೆ ಅಭಿವೃದ್ದಿಗೆ ಮತ್ತೊಂದು ಹೆಸರು. ಚುನಾವಣೆ ರಣ ಕಹಳೆಗೆ ನಮ್ಮ ಕಲಬುರಗಿ ಆಯ್ಕೆ ಮಾಡಿದ್ದು 400ಕ್ಕಿಂತ ಹೆಚ್ಚಿನ ಲೋಕಸಭಾ ಸದಸ್ಯರ ಗೆಲುವಿಗೆ ಈ ನಗರ ಸಾಕ್ಷಿಯಾಗಲಿದೆ ಎಂದರು.

Contact Your\'s Advertisement; 9902492681

ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆಯಿದೆ.ಆದ್ದರಿಂದ ಪಕ್ಷದ ಕಾರ್ಯಕರ್ತರು ಹಬ್ಬದ ವಾತರಣದಂತೆ ಕಲಬುರಗಿಯಲ್ಲಿ ಮೂಡಿಸಿ,ಮೋದಿ ಜಿ ಅವರಿಗೆ ಹೆಚ್ಚಿನ ಹುಮ್ಮಸ್ಸು ನೀಡುವತ್ತಾ ನಾವೆಲ್ಲರೂ ಈ ಸಮಾವೇಶದ ಯಶಸ್ವಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ತಾಲ್ಲೂಕ ಮಂಡಲದ ನೂತನ ಅಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ,ವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.

ಮಾಜಿ ತಾಲ್ಲೂಕು ಮಂಡಲ ಅಧ್ಯಕ್ಷರಾದ ನೀಲಕಂಠ ಪಾಟೀಲ, ತಾಲೂಕು ಎಸ್ ಸಿ ಮೊರ್ಚಾ ಅದ್ಯಕ್ಷರಾದ ರಾಜು ಮುಕ್ಕಣ್ಣ,ವಾಡಿ ಪಟ್ಟಣದ ಎಸ್ ಸಿ ಮೊರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,  ಮುಖಂಡರಾದ ವಿಠಲ ನಾಯಕ, ಸಿದ್ದಣ್ಣ ಕಲಶೆಟ್ಟಿ,ರಾಮಚಂದ್ರ ರೆಡ್ಡಿ,ಶಿವಶಕಂರ ಕಾಶೇಟ್ಟಿ,ಹರಿ ಗಲಾಂಡೆ,ಗಿರಿಮಲ್ಲಪ್ಪ ಕಟ್ಟಿಮನಿ,ಯಮನಪ್ಪ ನವನಳ್ಳಿ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ, ಕಿಶನ ಜಾದವ,ಅಂಬಾದಾಸ ಜಾದವ,ಪ್ರಮೋದ ಚೋಪಡೆ,ಭರತ ರಾಠೋಡ,ದತ್ತ ಖೈರೆ,ಮಹಮ್ಮದ್ ಇರ್ಫಾನ್, ಮಹೇಶ್ ಕುರಕುಂಟಾ,ಸನ್ನಿ ವಾಲಿಯ,ಅರ್ಜುನ ದಹಿಹಂಡೆ, ವಿಶ್ವ ತಳವಾರ,ರಮೇಶ್ ಜಾಧವ,ನೀರ್ಮಲಾ ಇಂಡಿ, ಯಂಕಮ್ಮಗೌಡಗಾಂವ, ಉಮಾದೇವಿ ಗೌಳಿ,ಶರಣಮ್ಮ ಯಾದಗಿರಿ, ಮಲ್ಲಿಕಾರ್ಜುನ ಸಾತಕೇಡ, ಬಸವಾಜ ಪಗಡಿಕರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here