`ವೈಜ್ಞಾನಿಕ ನೆಲೆಯ ಜಾನಪದ ಚಿಂತಕ ಡಾ.ಹಿ.ಶಿ.ರಾ’

0
198

ಕಲಬುರಗಿ: ಜಾನಪದವನ್ನು ವೈಜ್ಞಾನಿಕ ನೆಲೆಯಲ್ಲಿ ಚಿಂತನೆ ನಡೆಸಿದ ಮೊದಲಿಗರು ಎಂದರೆ ಡಾ.ಹಿ.ಶಿ. ರಾಮಚಂದ್ರೇಗೌಡರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶ್ರೀಮತಿ ಪಿಲ್ಲೂ ಹೋಮಿ ಇರಾಣಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ನಡೆದ ಜಾನಪದ ಸರಣಿ ಕಾರ್ಯಕ್ರಮದಲ್ಲಿ ಜಾನಪದ ತಜ್ಞರಾದ ಡಾ.ಹಿ.ಶಿ.ರಾ. ಅವರ ಬದುಕು – ಬರಹ ಕುರಿತು ಉಪನ್ಯಾಸ ನೀಡಿದ ಅವರು, ದೇಶಿ-ವಿದೇಶಿ ಚಿಂತನೆಯನ್ನು ಸ್ಥಳೀಯ ವಿದ್ಯಮಾನಗಳ ಜೊತೆಗೆ ಲೇಪಿಸಿ ಜಾನಪದವನ್ನು ವ್ಯಾಖ್ಯಾನಿಸುವ ಜ್ಞಾನಿಯಾಗಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಹೊಸತನ್ನು ಅರಿಯುವ ಹಿನ್ನೆಲೆಯಲ್ಲಿ ನಮ್ಮ ಕಾಲಘಟ್ಟದ ಸಂವೇದನೆಗಳ ಜೀವಪರ ಪ್ರತಿಪಾದಕರಾಗಿದ್ದು, ಜಾನಪದ ಉಳಿಸುವ ನಿಟ್ಟಿನಲ್ಲಿ 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಸಾಧನೆಗೆ ಹಿಡಿದ ಕನ್ನಡಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಪ್ರಾಧ್ಯಾಪಕಿ ಡಾ.ಸುಜಾತಾ ಜಂಗಮಶೆಟ್ಟಿ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಮುಖ್ಯ ಅತಿಥಿಯಾಗಿದ್ದರು. ಲಿಂಗರಾಜ ಸಿರಗಾಪುರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎಂ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಉಪನ್ಯಾಸಕಿ ಡಾ.ಸವಿತಾ ಸಿರಗೋಜಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕು.ನಿಖಿತಾ ವಂದಿಸಿದರು. ಕು.ಮಹಾಲಕ್ಷ್ಮಿ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಭೀಮಣ್ಣ ಬೋನಾಳ, ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ, ಶಿವಾನಂದ ಮಠಪತಿ, ಶಿವಕುಮಾರ ಪಾಟೀಲ ಕನಗನಹಳ್ಳಿ, ಸೋಮಶೇಖರ ನಂದಿಧ್ವಜ, ಅಮರಪ್ರಿಯ ಹಿರೇಮಠ ಇತರರಿದ್ದರು.

ಮಹಿಳೆಯರು ಪುರುಷರಷ್ಟೇ ಸಮಾನಳು. ಯಾವುದಕ್ಕೂ ಹೆದರಬೇಕಿಲ್ಲ. ಸಮ ಸಮಾಜ ನಿರ್ಮಾಣಕ್ಕೆ ಶರಣರು ಕಲ್ಪಿಸಿಕೊಟ್ಟಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. – ಡಾ.ಸುಜಾತಾ ಜಂಗಮಶೆಟ್ಟಿ, ಕನ್ನಡ ಪ್ರಾಧ್ಯಾಪಕರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here