ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದೇವದಾಸಿಯರು, ಮಂಗಳಮುಖಿಯರಿಂದ ಪ್ರತಿಭಟನೆ

0
18

ಕಲಬುರಗಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ಮತ್ತು ದೇವದಾಸಿ ಪದ್ದತಿ ನಿರ್ಮೂಲನೆ ಹಾಗೂ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಮಂಗಳಮುಖಿಯರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ದೇವದಾಸಿಯರು ಮತ್ತು ಮಂಗಳಮುಖಿಯರು ಗುರುವಾರ ಜಗತ್ ವೃತ್ತದ ಅಂಬೇಡ್ಕರ್ ಪ್ರತಿಮೆಯ ಆವರಣದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು.

ಮಾರುತಿ ಗಂಜಗಿರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೋಪಾಲ್ ಗಾರಂಪಳ್ಳಿ, ಸಂದೀಪ್ ಭರಣಿ, ಶರಣು ನಾಟೀಕಾರ್, ಮಾರುತಿ ಜಾಧವ್, ಸತೀಶ್ ನಾವದಗಿ, ಸಿರಾಜ್ ನಾಯಿಕೋಡಿ, ಕೃಷ್ಣ ಗೋಪಾಲ್, ರಾಜು ತೋಡಿ ಚಿಮ್ಮಾಯಿದ್ಲಾಯಿ, ಮೌನೇಶ್ ಮುಸ್ತರಿ, ಉಮೇಶ್ ಶೇಖರ್, ಸುಭಾಷ್ ತಾಡಪಳ್ಳಿ, ದ್ರೌಪದಿ ಚಿಮ್ಮನಚೋಡ್, ಶೈಲಜಾರೆಡ್ಡಿ ಚಂದಾಪೂರ್, ಲಾಲಮ್ಮ, ಮಾಯಮ್ಮ, ಭಾಗ್ಯವಂತಿ, ಗುಂಡಮ್ಮ, ವಿಜಯ್ ತಾಡಪಳ್ಳಿ, ಗಿರಿಮಲ್ಲಪ್ಪ ಹಸರಗುಂಡಗಿ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಹಾಗೂ ಗ್ರಾಮದಲ್ಲಿ ದೇವದಾಸಿಯರ ಕುರಿತು ಸಮೀಕ್ಷೆ ಮಾಡಿ ಅವರಿಗೆ ಪ್ರಮಾಣಪತ್ರ ಕೊಟ್ಟು ಸರ್ಕಾರದಿಂದ ಸೌಲಭ್ಯ ಒದಗಿಸುವಂತೆ, ಜಿಲ್ಲೆಯಲ್ಲಿನ ಎಲ್ಲ ತಾಲ್ಲೂಕುಗಳಲ್ಲಿರುವ ಮಂಗಳಮುಖಿಯರಿಗೆ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು.

ಚಿಂಚೋಳಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಗಳು ಅಪೂರ್ಣ ಮಾಡಿದ್ದು, ಮನೆ, ಮನೆಗೆ ನೀರು ಪೂರೈಕೆ ವಿಫಲವಾಗಿದೆ. ಮಹಾತ್ವಾಕಾಂಕ್ಷಿ ಯೋಜನೆಯನ್ನು ದಾರಿ ತಪ್ಪಿಸಿರುವ ಗುತ್ತಿಗೆದಾರರಿಗೆ ಕಪ್ಪು ಪಟ್ಟಿಗೆ ಸೇರಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದಲ್ಲಿ ಅಕ್ರಮ ಇಸ್ಪೀಟ್ ಅಡ್ಡಾ, ಮಟಕಾ ಯಾವುದೇ ಅಧಿಕಾರಿಗಳ ಭಯ ಇಲ್ಲದೇ ನಿರ್ಭಯವಾಗಿ ನಡೆಯುತ್ತಿವೆ. ಮರಳು ಮಾಫಿಯಾದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here