ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು “ಕನ್ನಡ ಸಾಹಿತ್ಯ ಪರಿಷತ್ತು” ಮತ್ತು “ಸಂಜೆವಾಣಿ” ಪತ್ರಿಕೆಯೊಂದಿಗೆ ಜಂಟಿ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಲು ಮತ್ತು ವಿದ್ಯಾರ್ಥಿಗಳು ತಮ್ಮ ಪತ್ರಿಕೋದ್ಯಮ ಜ್ಞಾನ ವೃದ್ಧಿಸಲು ಪರಿಷತ್ತು ಹಾಗೂ ಪತ್ರಿಕೆ ಎರಡಕ್ಕೂ ಭೇಟಿಗೆ ಅನುವು ಮಾಡಿಕೊಡಲು ಎರಡು ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಿತು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರವಾಗಿ ಸಮಾಜ ವಿಜ್ಞಾನ ವಿಭಾಗದ ಡೀನ್ ಟಿ.ವಿ.ಶಿವಾನಂದನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಹಾಗೂ ಕಾರ್ಯದರ್ಶಿ ಶಿವರಾಜ್ ಅಂಡಗಿ ಅವರು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಸಂಜೆವಾಣಿ ಪತ್ರಿಕೆಯ ಪರವಾಗಿ ಸಂಪಾದಕ ಗಣೇಶ್ ಅವರು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
ಪರಿಷತ್ತಿನೊಂದಿಗಿನ ತಿಳಿವಳಿಕೆ ಪತ್ರವು ವಿದ್ಯಾರ್ಥಿಗಳು ಪರಿಷತ್ತಿನ ಕಛೇರಿಗೆ ಭೇಟಿ ನೀಡುವುದನ್ನು ಮತ್ತು ಅದು ಆಯೋಜಿಸುವ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಖಚಿತಪಡಿಸುತ್ತದೆ ಮತ್ತು ಪರಿಷತ್ತು ಆಯೋಜಿಸುವ ವಿಚಾರ ಸಂಕಿರಣಗಳು, ಸಮ್ಮೇಳನಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಜ್ಞಾನ ಸಂಪಾದಿಸಲು ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಸಂಜೆವಾಣಿಯೊಂದಿಗಿನ ತಿಳುವಳಿಕಾ ಒಪ್ಪಂದವು ವಿದ್ಯಾರ್ಥಿಗಳು ನಿಯಮಿತವಾಗಿ ಪತ್ರಿಕೆಯ ಕಛೇರಿಗೆ ಹಾಜರಾಗಲು ಮತ್ತು ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತರೊಂದಿಗೆ ಸಂವಹನ ನಡೆಸುವುದನ್ನು ಖಚಿತಪಡಿಸುತ್ತದೆ ಮತ್ತು ವಿಧ್ಯಾರ್ಥಿಗಳು ಪತ್ರಿಕೆಯ ವಿವಿಧ ಚಟುವಟಿಕೆಗಳಲ್ಲಿ ತರಬೇತಿಯನ್ನು ಪಡೆಯಬಹುದು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಕನ್ನಡ ಸಾಹಿತ್ಯ ಪರಿಷತ್ತು ಮತ್ತು “ಸಂಜೆವಾಣಿ” ಪತ್ರಿಕೆಯ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ.