ಕಲಬುರಗಿ: ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಹೆಣ್ಣು ಗಂಡು ಎಂಬ ಭೇದ ಭಾವ ಬೇಡ ಮಹಿಳೆಯರಿಂದಲೇ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಭೀಮರಾವ್ ಟಿ.ಟಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಡಾ. ರಾಜಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘದಿಂದ ಭಾನುವಾರ ಆಯೋಜಿಸಿದ್ದ ತೃತೀಯ ವಾರ್ಷಿಕೋತ್ಸವ ವಿಶ್ವ ಮಹಿಳಾ ದಿನಾಚರಣೆ ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಾ. ಪುನೀತ್ ರಾಜಕುಮಾರ್ ಅವರ 49ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಹೆಣ್ಣು ಬುರ್ಣ ಹತ್ಯೆ ತಡೆಯಬೇಕು ಹೆಣ್ಣು ಅಬಲ್ಲೆ ಅಲ್ಲ ಸಬಲೇ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಹೊಂದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಸಂಘದ ಅಧ್ಯಕ್ಷರಾದ ಪೆÇ್ರ. ರಮೇಶ್ ಬಿ.ಯಾಳಗಿ ಹೇಳಿದರು.
ಈ ಸಂದರ್ಭದಲ್ಲಿ ಡಾ. ಸುನಿಲ್ ಕುಮಾರ್ ಒಂಟಿ, ಸತೀಶ್ ಕಾಂಟ್ರಾ, ರವಿ ಸಿಂಗೆ, ರಾಜಶೇಖರ್ ಮುಸ್ತಾರಿ, ಸಾಬಣ್ಣ ದಂಡಿನವರ್, ಶಿವಶರಣಪ್ಪ ಪೆÇೀಲಿಸ್ ಪಾಟೀಲ್, ಶರಣಮ್ಮ ಹೆಬ್ಬಾಡಿ, ಶರಣು ಟಿಟಿ, ಸುರೇಶ್ ಸ್ವಾಮಿ, ಕಾರ್ಯಕ್ರಮ ಆಯೋಜಕರು ಹಾಗೂ ಸಂಘದ ಕಾರ್ಯದರ್ಶಿಗಳಾದ ಯಲ್ಲಾಲಿಂಗ ಝ ದಂಡಿನ್ ಸ್ವಾಗತಿಸಿದರು.