ಕಲಬುರಗಿ: ಹಿಂದುಳಿದ ಮಾದಿಗ ಸಮಾಜದ ಅಬಿವೃದ್ಧಿಯ ಜತೆಗೆ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಶಾಮ ನಾಟೀಕರ್ ಅವರ ಸಮಾಜ ಮುಖಿ ಸೇವೆ ಶ್ಲಾಘನೀಯ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಹೇಳಿದರು.
ಸೂಪರ್ ಮಾರುಕಟ್ಟೆ ಕನಾ9ಟಕ ಬೀದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಶುಕ್ರವಾರ ಅಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಅವರ 117ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಮಾದಿಗ ಸಮಾಜದ ಕೋರ ಕಮೀಟಿ ಸದಸ್ಯರಾದ ಶಾಮ ನಾಟೇಕರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಹಾಮಾರಿ ಕೋವಿಡ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆರವು ನೀಡಿದ ನಾಟೀಕರ್ ಅವರು, ಅಪತಭಾಂದವರಾಗಿ ಎಲ್ಲರ ನೋವಿಗೆ ಸ್ಪಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟೇಕರ, ಅಸಂಘಟಿತ ವಲಯಕ್ಕೆ ಸೇರಿದ ಬೀದಿ ಬದಿ ವ್ಯಾಪಾರಿಗಳನ್ನು ಸಂಘಟಿಸಿ ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸೂರ್ಯವಂಶಿ ಅವರು ಸೇವೆ ಎಲ್ಲರಿಗೂ ತಿಳಿದಿರುವ ವಿಷಯ ಎಂದು ಹೇಳಿದರು.
ಜಯಂತೋತ್ಸವ ಸಮಿತಿ ಅಧ್ಯಕ್ಷ ದತ್ತು ಭಾಸಗಿ, ಉಮೇಶ್ ಮಾಳಗಿ, ಬಸವರಾಜ ಬಡಿಯಳ ಮತ್ತು ತಿಮ್ಮೇಶ ಬಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಯ9ಕ್ರಮ ದಲ್ಲಿ ರೋಹಿತ್ ಮಂಗನೂರ, ಚಂದ್ರಹಾಸ ಜಿದ್ರಿ, ಡಾ. ವೇದಮೂರ್ತಿ, ರಾಘವೇಂದ್ರ ರಾಮದಾಸ್, ವೆಂಕಟೇಶ್, ಬಾಬು ಪರಿಟ, ರಮಾಬಾಯಿ, ಸಂತೋಷಮ್ಮ, ಲಕ್ಷ್ಮೀ ಬಾಬ್ಜೀ, ಶರಣು, ಗೋಪಾಲ ನಾಟೀಕರ್ ಸೇರಿದಂತೆ ಹಲವರಿದ್ದರು.