ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ: ಶಾಸಕ ರಾಜುಗೌಡ ಅಭಿಮತ

0
57

ಸುರಪುರ: ದೇಶದ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದು ಮುಂದಿನ ಪ್ರಜೆಗಳಾಗಲಿರುವ ಮಕ್ಕಳನ್ನು ತಿದ್ದಿ ತೀಡಿ ದೇಶದ ಉತ್ತಮ ಪ್ರಜೆಗಳಾನ್ನಾಗಿ ರೂಪಿಸಿ ದೇಶವನ್ನು ಅಭಿವೃದ್ಧಿ ಪತದಲ್ಲಿ ಸಾಗಿಸುವ ಜವಾಬ್ದಾರಿ ಶಿಕ್ಷಕರ ಕೈಯಲ್ಲಿ ಇದೆ ಎಂದು ಶಾಸಕ ರಾಜುಗೌಡ ಹೇಳಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಿಕ್ಷಕರಿಗೆ ಹೆಚ್ಚಿನ ಘನತೆ ಹಾಗೂ ಗೌರವ ಸ್ಥಾನವಿದ್ದು ದೇವರುಗಳಿಗಿಂತ ಗುರುಗಳಿಗೆ ಹೆಚ್ಚಿನ ಸ್ಥಾನ ಇದೆ ಎಂದ ಅವರು, ಹಿಂದಿನ ದಿನಗಳಲ್ಲಿ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ-ಭಕ್ತಿ ಇತ್ತು ಆದರೆ ಇಂದು ಶಿಕ್ಷಕರನ್ನು ವಿದ್ಯಾರ್ಥಿಗಳು ಗೆಳೆಯರಂತೆ ನಡೆದುಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳಿದರು.

Contact Your\'s Advertisement; 9902492681

ಶಿಕ್ಷಕರು ಶಿಲ್ಪಿಗಳಿದ್ದಂತೆ ಶಿಲೆಗಳಂತಿರುವ ಮಕ್ಕಳನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡುವ ಗುರುತರ ಜಬಾಬ್ದಾರಿ ಶಿಕ್ಷಕರದ್ದಾಗಿದೆ ಇಂದಿನ ಶಿಕ್ಷಣ ಪದ್ಧತಿ ಬದಲಾವಣೆಗೊಳ್ಳುವುದು ಅವಶ್ಯಕ ಮಕ್ಕಳನ್ನು ೧ ನೇ ತರಗತಿಯಿಂದ ೧೦ನೇ ತರಗತಿಗೆ ಬರುವತನಕ ಫೇಲ್ ಮಾಡುವಂತಿಲ್ಲ ಎಂಬ ಪದ್ಧತಿ ಕೈಬಿಡಬೇಕು ಇದರಿಂದ ಮಕ್ಕಳಲ್ಲಿ ಕಲಿಯಬೇಕು ಎಂಬ ಆಸಕ್ತಿ ಹುಟ್ಟಿಸುತ್ತದೆ ಒಂದು ವೇಳೆ ೧ನೇ ತರಗತಿಯಿಂದ ಪಾಸ್ ಮಾಡುತ್ತಾ ಹೋದಲ್ಲಿ ಏನೂ ಕಲಿಯದ ಮಕ್ಕಳು ಕೂಡಾ ೧೦ನೇ ತರಗತಿಗೆ ಬಂದು ತೊಂದರೆ ಅನುಭವಿಸುವಬೇಕಾಗುತ್ತದೆ ಹತ್ತನೇ ತರಗತಿ ಫಲಿತಾಂಶ ಕಡಿಮೆ ಬರಲು ಇದು ಕೂಡಾ ಒಂದು ಕಾರಣವಾಗುತ್ತದೆ ಎಂದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಅನ್ಯ ಕೆಲಸಗಳ ಜವಾಬ್ದಾರಿ ಹೆಚ್ಚಾಗಿದ್ದು ಇದರು ಸರಿಯಲ್ಲ ಶಿಕ್ಷಕರಿಗೆ ಅನ್ಯ ಕೆಲಸಗಳಿಗೆ ಹಚ್ಚದೇ ಕೇವಲ ಓದು ಬರಹ ಕಲಿಸುವ ಕರ್ತವ್ಯಕ್ಕೆ ಸೀಮಿತಿಗೊಳಿಸಿದಲ್ಲಿ ಶಿಕ್ಷಣದ ಗುಣಮಟ್ಟ ಮತ್ತಷ್ಟು ಹೆಚ್ಚಾಗುವುದು ಎಂದರು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಕಡಿಮೆ ಬಂದಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಹೆಚ್ಚು ಶ್ರಮಪಡಬೇಕು ಹಾಗೂ ಮಕ್ಕಳ ಫಲಿತಾಂಶ ಬರುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಕ್ಕಳೊಂದಿಗೆ ಪಾಲಕರು ಹಾಗೂ ಸಂಬಂಧಿಕರು ಪರೀಕ್ಷಾ ಕೇಂದ್ರಕ್ಕೆ ಬಂದು ನಿಲ್ಲುತ್ತಾರೆ ಇದು ಸರಿಯಲ್ಲ ಈಗಿನಿಂದಲೇ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.

ಜಿ ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ವೃತ್ತಿ ಅಕ್ಷರ ಕಲಿಸಿದ ಗುರುಗಳಿಗೆ ಎಂತಹ ದೊಡ್ಡ ವ್ಯಕ್ತಿಗಳಾಗಿರಲಿ ತಲೆಬಾಗಿ ನಮಸ್ಕರಿಸುತ್ತಾರೆ ಈ ಗೌರವ ಬೇರೆ ಯಾರಿಗೆ ಸಿಗುವದಿಲ್ಲ ಸಮಾಜದಲ್ಲಿ ಶಿಕ್ಷಕ ಸ್ಥಾನಕ್ಕೆ ಗೌರವ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಈ ಸಾಲಿನಲ್ಲಿ ನಿವೃತ್ತಿಗೊಂಡ ಶಿಕ್ಷಕರು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಶಿಕ್ಷಕರು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಸವಲಿಂಗ ದೇವರು ಸಾನಿಧ್ಯ ವಹಿಸಿದ್ದರು, ವೇದಿಕೆಯಲ್ಲಿ ಜಿ ಪಂ ಸದಸ್ಯ ಮರಿಲಿಂಗಪ್ಪ ನಾಯಕ, ತಾ ಪಂ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ, ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ, ಕಿಶೋರಚಂದ ಜೈನ, ಸುರೇಶ ಸಜ್ಜನ್, ಹೆಚ್.ಸಿ.ಪಾಟೀಲ, ದೊಡ್ಡ ದೇಸಾಯಿ ಗೋನಾಲ, ಯಲ್ಲಪ್ಪ ಕುರಕುಂದಿ, ಎ.ಪಿ.ಎಮ್.ಸಿ. ಸದಸ್ಯ ದುರಗಪ್ಪ ಗೋಗಿಕೇರಿ, ಡಿ.ಡಿ.ಪಿ.ಐ ಶ್ರೀಶೈಲ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಅಮರೇಶ, ಬಿಸಿಯೂಟ ಸಹಾಯಕ ನಿರ್ದೇಶಕ ಮೌನೇಶ ಕಂಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ, ತಾಲೂಕು ಅಧ್ಯಕ್ಷ ಸೋಮರೆಡ್ಡಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ದರಬಾರಿ, ಯಲ್ಲಪ್ಪ ಕಾಡ್ಲೂರ, ಆರ್.ಕೆ.ಕೋಡಿಹಾಳ ಹಾಗೂ ಇತರರು ಉಪಸ್ಥಿತರಿದ್ದರು. ಬಿ.ಇ.ಓ ನಾಗರತ್ನ ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಮಾಳಪ್ಪ ಹುಲ್ಲಿಕೇರಿ ಸ್ವಾಗತಿಸಿರು ಶರಣಬಸವ ಗೋನಾಲ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here