ಸುರಪುರ:ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಗುಡ್ ಫ್ರೈಡೆ ಆಚರಣೆ

0
25

ಸುರಪುರ:ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರಿಂದ ಯೆಸ್ತು ಕ್ರಿಸ್ತನನ್ನು ಶಿಲುಭೆಗೇರಿಸಿದ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಭಕ್ತಿ ಭಾವ ದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕ್ರೈಸ್ತ ಸಮಾಜದ ಜಿಲ್ಲಾ ಮೇಲ್ವಿಚಾರಕರಾದ ರೆವÉರೆಂಡ್ ಎಸ್.ಸತ್ಯಮಿತ್ರ ಅವರು ಮಾತನಾಡಿ,ಸಪ್ತ ವಾಕ್ಯಗಳಲ್ಲಿ ಒಂದಾದ ತಂದೆಯೇ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತೇನೆ ಎಂದು ದೈವ ಸಂದೇಶ ನೀಡಿ,ಜಗತ್ತಿನಲ್ಲಿ ಶಾಂತಿ ನೆಲೆಸಲು,ಯೇಶು ಕ್ರಿಸ್ತನು ಸಾರಿದ ಶಾಂತಿ ಸಂದೇಶ ಅವರ ತ್ಯಾಗ,ಪ್ರೀತಿ ಹಾಗೂ ಆದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿದೆ,ನಾವೆಲ್ಲರು ಆತನ ತ್ಯಾಗವನ್ನು ಸ್ಮರಿಸೋಣ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಥಾವiಸ್ ಮ್ಯಾಥ್ಯೂ ಅವರು, ಯೇಸು ಕ್ರಿಸ್ತನು ಶಿಲುಬೆಯ ಮೇಲೆ ನುಡಿದ ಸಪ್ತ ವಾಕ್ಯಗಳಾದ ತಂದೆಯೇ ಅವರಿಗೆ ಕ್ಷಮಿಸು ಎನ್ನುವ ವಿಷಯದ ಕುರಿತು ಮಾತನಾಡಿದರು,ಅಲ್ಲದೆ ಪ್ರಭು ಕುಮಾರಿ ಅವರು,ಈ ಹೊತ್ತೆ ನನ್ನ ಸಂಗಡ ಪರದೈಸಿನಲ್ಲಿರುವೆ ಎನ್ನುವ ವಿಷಯದ ಕುರಿತು ಹಾಗೂ ಮನೊರಮಾ ಸತ್ಯಮಿತ್ರ ಅವರು,ನನ್ನ ದೇವರೆ ಯಾಕೆ ನನ್ನ ಕೈ ಬಿಟ್ಟಿದ್ದಿ ಕುರಿತು ಲಲಿತ ದೇವಪುತ್ರ ನನಗೆ ನೀರಡಿಕೆಯಾಗಿದೆ ಕುರಿತು ಸುನಿಲಾ ಶಾಂತಕುಮಾರ,ತೀರಿತು ಕುರಿತು ಪಾಲ್ ನಾಯ್ಕ್ ಅವರು ಉಪನ್ಯಾಸ ನೀಡಿದರು.

ವಿಶೇಷ ಪ್ರಾರ್ಥನೆಗಳು ಹಾಗೂ ಭಕ್ತಿ ಪೂರ್ವಕವಾಗಿ ಆರಾಧನೆಗಳು ಜರುಗಿದವು.ಕಾರ್ಯಕ್ರಮದಲ್ಲಿ ಸಭೆಯವರಾದ ವಸಂತಕುಮಾರ,ದೇವಪುತ್ರ,ಜಯಪ್ಪ,ಅಮಿತ್ ಪಾಲ್,ಧರ್ಮಣ್ಣ,ಮಾನುವೆಲ್‍ರಾಜ್,ಜೈರಾಜ್,ರಮೇಶಪಾಲ್,ಇಮಾನುವೆಲ್,ವಿಜಯಕುಮಾರ,ಜಸ್ಟಿನ್ ಜಿಮ್ಮಿ,ಥಾಮಸ್ ಮ್ಯಾಥ್ಯೂ,ಡೇವಿಡ್ಸಿ ಮಿಯೊನ್,ಸೋನಕುಮಾರಿ,ಸುಕುಮಾರಿ,ಸುಮತಿ,ಚಂದ್ರ ಮ್ಯಾಥ್ಯೂ,ಸಾಗರಿಕ,ಸುಜಾತಾ,ಅನಿತಾ,ಜೋವಿತಾ,ಶಾಲಿನಿ,ಶೋಭಾ,ಸುನಿತಾ,ಸ್ಟೆಲ್ಲಾ,ಸರಿತಾ,ರೆಬೆಕ್ಕಾ,ಶೋಭಾ,ರತ್ನಮ್ಮ,ಪವಿತ್ರ,ಸೌಮ್ಯ,ನಿಖಿಲ್,ಎಲಿಯಾ,ಪಿನಿಹಾಸ್,ಸಂದೀಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here