ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರುಗಳ ದಿನಾಚರಣೆ

0
87

ಸುರಪುರ: ನೀರಾವರಿ ಯೋಜನೆಯ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ ಸರ್.ಎಂ.ವಿಶ್ವೇಶ್ವರಯ್ಯ ಅವರು ವಿಶ್ವಕ್ಕೆ ಮಾದರಿ.ಅವರ ಮಾರ್ಗದರ್ಶನದಲ್ಲಿ ಇಂದಿನ ಎಲ್ಲ ಎಂಜಿನಿಯರುಗಳು ನಡೆಯುತ್ತಿದ್ದಾರೆ.ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆಯೆ ಆಗಬೇಕು ಎಂದು ಗುರುಕುಲ ವಿದ್ಯಾಸಂಸ್ಥೆಯ ಅಧ್ಯಕ್ಷ ಸೋಮಶೇಖರ ಶಾಬಾದಿ ಕರೆ ನೀಡಿದರು.

ನಗರದ ರಂಗಂಪೇಟಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಶ್ರೀ ಗುರುಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಹಾಗೂ ಯೋಗಿ ಆದಿತ್ಯ ಸೇವಾ ಟ್ರಸ್ಟ್ ಬೋನ್ಹಾಳ ಹಮ್ಮಿಕೊಂಡಿದ್ದ ಎಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಗಳು ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಪ್ರತಿಫಲ ತಾನಾಗಿಯೇ ಸಿಗುತ್ತದೆ ಮತ್ತು ನಿಮ್ಮ ಗುರಿ ತಲುಪಲು ಇದು ಅನೂಕುಲವಾಗುತ್ತದೆ. ಕನಸಿನ ಬೆನ್ನು ಹತ್ತಿ ನಿರಂತರ ಅಧ್ಯಯನದಿಂದ ಕಾಲೇಜಿಗೆ ಕೀರ್ತಿ ತರುವಂತೆ ಅಭ್ಯಾಸ ಮಾಡಬೇಕು ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಮಾತನಾಡಿ ಬಡತನದಲ್ಲಿ ಬೆಳೆದುಬಂದ ವಿಶ್ವೇಶ್ವರಯ್ಯ ಕಠಿಣ ಶ್ರಮದಿಂದ ಭಾರತರತ್ನದಂತಹ ಉನ್ನತ ಪದವಿಗೆ ಏರಿದರು.ಸಮಯ ಪರಿಪಾಲನೆ ದೂರದೃಷ್ಟಿ ಯೋಚನೆಗಳು ಅದ್ಬುತ್ ಕೌಶಲ್ಯ ಅವರಲ್ಲಿ ಮನೆ ಮಾಡಿದ್ದವು.ಅವರಂತೆ ಪ್ರತಿಯೊಬ್ಬ ವಿದ್ಯಾರ್ಧಿಗಳು ದೃಢ ಸಂಕಲ್ಪ ಮಾಡಿಕೊಂಡು ತಾಳ್ಮೆ ಮತ್ತು ಸಂಯಮದಿಂದ ನಡೆದು ಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸುನ್ನು ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಸಹನಾ ಸಗರ ಮತ್ತು ಅಂಬಿಕಾ ನಿರೂಪಿಸಿ ಇಂದ್ರ ವಂದಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಮತ್ತು ಪ್ರಬಂದ ಕಾರ್ಯಕ್ರಮಗಳು ನೆಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here