ಕಸಾಪದಿಂದ ತತ್ವಪದ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕಡಕೋಳದ ಮಠದ ಡಾ. ರುದ್ರಮುನಿ ಶಿವಾಚಾರ್ಯರು ಆಯ್ಕೆ

0
86

ಕಲಬುರಗಿ: ನಮ್ಮ ಅಂತರಂಗದ ದರ್ಶನವನ್ನು ಮಾಡಿಸುವಂತಿರುವ ತತ್ವಪದಕಾರರ ತತ್ವಪದಗಳಲ್ಲಿನ ತಿರುಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏಪ್ರೀಲ್ ತಿಂಗಳಾಂತ್ಯದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಯಡ್ರಾಮಿ ತಾಲೂಕಿನ ಕಡಕೋಳ ಶ್ರೀ ಮಡವಾಳೇಶ್ವರ ಮಹಾಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕಡಕೋಳದ ಶ್ರೀಮಠದ ಪ್ರಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನೂರಾರು ಸಾಹಿತ್ಯಪ್ರೇಮಿಗಳ ಸಮ್ಮುಖದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು ರವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸತ್ಕರಿಸಿ ಅಧಿಕೃತ ಆಹ್ವಾನ ನೀಡಲಾಯಿತು.

Contact Your\'s Advertisement; 9902492681

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ತತ್ವಪದಗಳು ಹಾಗೂ ತತ್ವಪದಕಾರರ ಬಹುದೊಡ್ಡ ಪರಂಪರೆಯೇ ಇದೆ. ಕಲುಷಿತಗೊಂಡಿರುವ ಸಮಾಜವನ್ನು ಶುದ್ಧಗೊಳಿಸುವ ಕಾರ್ಯವನ್ನು ಅನೇಕ ತತ್ವಪದಕಾರರು ಮಾಡಿದ್ದಾರೆ. ತತ್ವಪದಗಳು ಜಾತಿ, ಮತ, ದರ್ಮ ಮತ್ತು ಅವುಗಳ ಆಚರಣೆ ಕುರಿತು ವಸ್ತುನಿಷ್ಠ ನಿರಾಕರಣೆ ತೋರುವ ಪ್ರತಿಭಟನಾ ಕಾವ್ಯದ ಸಿಡಿಮದ್ದಿನ ನುಡಿಗಟ್ಟುಗಳಾಗಿವೆ. ಅನೇಕ ತತ್ವಪದಕಾರರು ನಮ್ಮ ಭಾಗದಲ್ಲಿ ಆಗಿ ಹೋಗಿದ್ದಾರೆ. ಅಂಥವರನ್ನು ಇಂಥ ಸಮ್ಮೇಳನಗಳ ಮೂಲಕ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಪರಿಷತ್ತು ಹಮ್ಮಿಕೊಂಡಿರುವ ಈ ಸಮ್ಮೇಳನದ್ದಾಗಿದೆ ಎಂದರು.

ಚಿಗರಳ್ಳಿ ಮಠದ ಮರುಳಶಂಕರ ದೇವರಪೀಠ ದ ಪೂಜ್ಯಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಜೀ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ,ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಕಸಾಪ ಯಡ್ರಾಮಿ ಅಧ್ಯಕ್ಷ ನಾಗಪ್ಪ ಸಜ್ಜನ್, ಜೇವರ್ಗಿ ಅಧ್ಯಕ್ಷ ಎಸ್ ಕೆ ಬಿರಾದಾರ, ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತರಾಯ ಬಿರಾದಾರ ಅರಳಗುಂಡಗಿ, ಮಲ್ಲಿನಾಥಗೌಡ ಯಲಗೋಡ, ಕೆ.ಜಿ. ಬಿರಾದಾರ ವಸ್ತಾರಿ, ಮಲ್ಲಣ್ಣಗೌಡ ಪಾಟೀಲ ಕುಳಗೇರಿ, ಮಹಾಂತಪ್ಪ ಹವಳಗಿ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ರೇವಣಸಿದ್ಧಯ್ಯ ಜಿ ಪುರಾಣಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರ ಪರಿಚಯ: ಡಾ. ರುದ್ರಮುನಿ ಶಿವಾಚಾರ್ಯರು ಕಡಕೋಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಾಶಿಯ ಜಂಗಮವಾಡಿಯಲ್ಲಿ ವ್ಯಾಸಂಗ ಮಾಡಿ, ಯೋಗ ಮತ್ತು ಧ್ಯಾನದ ಮೂಲಕ ಸಿದ್ಧಿಯನ್ನು ಸಾಧಿಸಿ ಕಡಕೋಳ ಮಡಿವಾಳಪ್ಪ ನವರ ದಾರ್ಶನಿಕತೆಯಲ್ಲಿ ಮುನ್ನಡೆದಿದ್ದಾರೆ. ಶ್ರೀಗಳು ವಿಧಾಯಕ ಕಾರ್ಯಕ್ರಮಗಳ ಮೂಲಕ ಕಡಕೋಳ ಮತ್ತು ಸುತ್ತಮುತ್ತಲಿನ ಗ್ರಾಮದ ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಕಾಯಕದಲ್ಲೂ ನಿರತರಾಗಿದ್ದಾರೆ.

ವೀರೇಶ್ವರ ಪ್ರಕಾಶನದ ಮೂಲಕ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೆರವಿನಿಂದಲೂ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ಅನೇಕ ಅನುಭವಿ ಸಾಹಿತಿಗಳ ಮೂಲಕ ಕಡಕೋಳ ಮಡಿವಾಳಪ್ಪ ಮತ್ತು ಇನ್ನಿತರ ಅನೇಕ ತತ್ವಪದಕಾರರ ಕುರಿತು ಕಾರ್ಯಕ್ರಮಗಳ ಆಯೋಜನೆ ಮೂಲಕ ಅವರನ್ನು ಪರಿಚಯಿಸಿದ್ದಾರೆ.

ತತ್ವಪದಕಾರರಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ ಮತ್ತು ಕಡಕೋಳ ಮಡಿವಾಳಪ್ಪ ನವರು ತಪಸ್ಸು ಮಾಡಿದ ಸ್ಥಳಗಳನ್ನು ಗುರುತಿಸಿ ಪುನರುತ್ಥಾನದ ಮೌಲಿಕ ಕಾರ್ಯ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here