ಬಾಬೂಜಿ ಅವರದ್ದು ಶುದ್ಧ ಮನಸ್ಸಿನ ವ್ಯಕ್ತಿತ್ವ : ಪ್ರೊ. ಮೇಧಾವಿನಿ ಕಟ್ಟಿ

0
37

ಕಲಬುರಗಿ: ಡಾ. ಬಾಬು ಜಗಜೀವನರಾಮ್ ಅವರು ಸಾಮಾಜಿಕ ನ್ಯಾಯ ಹೋರಾಟಗಾರ ಮಾತ್ರವಲ್ಲದೇ, ಒಬ್ಬ ಅಪ್ರತಿಮ ಸಂಸದೀಯ ಪಟುವಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಆದರಿಂದಲೇ ಮಹಾತ್ಮಗಾಂಧಿ ಅವರು ಇವರನ್ನು ಅಪ್ಪಟ ಶುದ್ಧ ಮನಸ್ಸಿನ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದಲ್ಲಿರುವ ರಾಧಾಕೃಷ್ಣ ಸಭಾಂಗಣದಲ್ಲಿ ಡಾ. ಬಾಬು ಜಗಜೀವನರಾಮ್ ಅಧ್ಯಯನ ಹಾಗೂ ವಿಸ್ತರಣಾ ಸಂಸ್ಥೆಯ ವತಿಯಿಂದ ಡಾ. ಬಾಬು ಜಗಜೀವನರಾಮ್ 117ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಬಾಬುಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಜಾತ್ಯಾತೀತ ಮತ್ತು ಸಮಾನತೆ ತತ್ವಗಳನ್ನು ಅಳವಡಿಸಿಕೊಂಡು ನೊಂದವರ ಬದುಕಿನಲ್ಲಿ ಬದಲಾವಣೆ ತರಲು ಅವಿರತ ಶ್ರಮಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಡಿದ ಮಹಾನ್ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದರು.

Contact Your\'s Advertisement; 9902492681

ಕೇಂದ್ರ ಸರ್ಕಾರದಲ್ಲಿ ಸಮರ್ಥ ಮಂತ್ರಿಯಾಗಿ ಹಾಗೂ ಉಪಪ್ರಧಾನ ಮಂತ್ರಿಯಾಗಿ ಅತ್ಯುತ್ತಮ ಆಡಳಿತ ನಡೆಸಿದ ಬಾಬುಜಿ ಅವರು ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಅನುಭವಿಸಿ ಅತ್ಯುತ್ತಮ ಆಡಳಿತ ನಡೆಸಿದರು. ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ನೊಂದ ಹಾಗೂ ದುರ್ಬಲ ಸಮುದಾಯಗಳ ಪರ ಧ್ವನಿಗೂಡಿಸಿದರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಮತ್ತು ವಿಶಿಷ್ಠ ರಾಜಕೀಯ ಜೀವನದಲ್ಲಿ ನೊಂದವರ ಬದುಕನ್ನು ಸುಧಾರಿಸಲು ಹೋರಾಡಿದರು. ಜಾತೀಯತೆ ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ನೀಡಲು ಶ್ರಮಿಸಿದರು. ಇವರ ಜೀವನ ಮೌಲ್ಯಗಳು ಯುವಜನಾಂಗದ ಬದುಕಿಗೆ ಪ್ರೇರಣೆಯಾಗಿದೆ ಎಂದರು.

ಬಾಬು ಜಗಜೀವನರಾಮ್ ಅವರು ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಕಾರ್ಮಿಕರು, ಮಹಿಳೆಯರ ಬದುಕನ್ನು ಸುಧಾರಿಸಿದ್ದಾರೆ.

ಆಹಾರ ಸ್ವಾವಲಂಬನೆಗೆ ಒತ್ತು ನೀಡಿ ಹಸಿರು ಕ್ರಾಂತಿಯನ್ನು ಯಶಸ್ವಿಯಾಗಿ ಜಾರಿಗೆ ತಂದರು. ಇವರ ಜೀವನ ಮತ್ತು ಸಾಧನೆ ಹಾಗೂ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅವಶ್ಯಕತೆಯಿದೆ. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಇವರು ದೇಶಕ್ಕೆ ನೀಡಿದ ಸೇವೆ ಅನನ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ ವೇದಿಕೆಯಲ್ಲಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆ ನಿರ್ದೇಶಕ ಪ್ರೊ. ಕೆ. ಲಿಂಗಪ್ಪ ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಐಕ್ಯೂಎಸಿ ನಿರ್ದೇಶಕ ಪ್ರೊ. ಕೆರೂರ್, ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಕೆಳಮನಿ, ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಂ. ನಡುವಿನಮನಿ, ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳ ಅಂಬೇಕರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಜಿ. ಕಣ್ಣೂರು, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿಂಗಣ್ಣ, ಪತ್ರಿಕೋದ್ಯಮ ವಿಭಾಗದ ಡಾ. ಕೆ. ಎಂ. ಕುಮಾರಸ್ವಾಮಿ, ಪರೀಕ್ಷಾ ವಿಭಾಗದ ಮುಖ್ಯ ಅಧೀಕ್ಷಕ ಬಿ.ಎಂ. ರುದ್ರವಾಡಿ, ಹಣಕಾಸು ವಿಭಾಗದ ಸಹಾಯಕ ಅಧೀಕ್ಷಕ ಪ್ರಕಾಶ್ ಹದನೂರಕರ,ಮಲ್ಟಿ ಮೀಡಿಯಾ ಸಿಬ್ಬಂದಿ ಶರಣು ನಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here