ಜಾನಪದ ಸಂಸ್ಕøತಿ, ಪರಂಪರೆ ಉಳಿಸಿ, ಬೆಳೆಸುವುದು ಎಲ್ಲರ ಜವಾಬ್ದಾರಿ: ಕಲಾವಿದರಿಗೆ ಸತ್ಕಾರ

0
40

ಕಲಬುರಗಿ: ಶಿಷ್ಠ ಸಾಹಿತ್ಯಕ್ಕೆ ತಾಯಿಬೇರು, ನಮ್ಮ ದೇಶ ಭಾರತದ ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕøತಿ, ಪರಂಪರೆ ಭಾರತೀಯರ ಜೀವಾಳ. ಆಧುನೀಕರಣಕ್ಕೆ ಒಳಗಾಗಿ ನಮ್ಮತನ ಮರೆಯದೆ, ಜನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಜಾನಪದ ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ, ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ನಗರದ ಜಗತ್ ಬಡಾವಣೆಯ ಮೇಲಕೇರಿಯಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ’ಯ ವತಿಯಿಂದ ಶನಿವಾರ ಸಂಜೆ ಜರುಗಿದ ‘ಜಾನಪದ ಕಲಾ ಸಂಭ್ರಮ : ಕಲಾವಿದರಿಗೆ ಸತ್ಕಾರ, ಕಲಾ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕನ್ನಡ ಜಾನಪ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಜನಪದದಲ್ಲಿ ಎಲ್ಲಾ ಮೌಲ್ಯಗಳು ಅಡಗಿವೆ. ನಮ್ಮ ದೇಶದ ಪರಂಪರೆಯ ಪ್ರತಿಬಿಂಬ ಇದರಲ್ಲಿ ಕಾಣಬಹುದಾಗಿದೆ. ವಿದೇಶಿ ಸಂಸ್ಕøತಿಗೆ ಮಾರುಹೋಗದೆ, ನಮ್ಮ ದೇಶದ ಮೂಲ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಮುಂದಿನ ಜನಾಂಗಕ್ಕೆ ವರ್ಗಾಯಿಸಿದರೆ, ನಮ್ಮ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ. ಜಾನಪದ ಕಲೆ-ಕಲಾವಿದರ ಉಳಿವು-ಬೆಳವಣಿಗೆಗಾಗಿ ನಮ್ಮ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್ ಭಾಗವಹಿಸಿದ್ದರು.

ಜಾನಪದ ಕಲಾವಿದರಾದ ನಾಗಭೂಷಣ ಅಗಸ್ಥ್ಯತೀರ್ಥ, ರಾಜಶೇಖರ ಲಗಶೆಟ್ಟಿ, ಯೋಗಣ್ಣಗವಡ ಕೆ., ಮುರಗೆಪ್ಪ ಬಟಗೇರಿ, ಶಾಂತಾಬಾಯಿ ಅಗಸ್ಥ್ಯತೀರ್ಥ, ಜಗದೇವಿ ಪಾಟೀಲ, ಸರಸ್ವತಿ ಬುಳ್ಳಾ, ಪಾರ್ವತಿ ತೆಗನೂರ, ಮಹಾದೇವಿ ಅಗಸ್ಥ್ಯತೀರ್ಥ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here