ಕಲಬುರಗಿ: ಜನರು ಹೆಚ್ಚಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಪೆಟ್ರೋಲಿಯಂನ ಉತ್ಪನ್ನವಾಗಿದೆ. ಪ್ಲಾಸ್ಟಿಕ್ ಮರುಬಳಕೆ ಹೆಚ್ಚು ಮಾರಕವಾಗಿದೆ. ಅದರ ವಿಷಕಾರಿ ಅಂಶಗಳಿಂದ ಪರಿಸರ ಮತ್ತು ಜೀವಸಂಕುಲದ ಮೇಲೆ ವೈಪರೀತ್ಯ ಪರಿಣಾಮ ಬೀರುತ್ತಿದ್ದು ಆರೋಗ್ಯಕರ ಸಮಾಜಕ್ಕೆ ಇದು ಒಳ್ಳೆಯದಲ್ಲ. ಆದರಿಂದ ಯುವ ಜನಾಂಗಕ್ಕೆ ಪರಿಸರ ಕುರಿತು ವೈಜ್ಞಾನಿಕ ಶಿಕ್ಷಣ ನೀಡಬೇಕು. ಪರಿಸರ ಸಂರಕ್ಷಣೆ ಮತ್ತು ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ವಿಜ್ಞಾನ, ಕಲಾ, ಮಾನವಿಕ ವಿಷಯಗಳು, ಭಾμÉಗಳು ಸಾಮಾಜಿಕ ವಿಜ್ಞಾನ, ಶಿಕ್ಷಣ, ಕಾನೂನು ಮತ್ತು ವಾಣಿಜ್ಯ ನಿಕಾಯದ ಡೀನ್ ಡಾ. ನಿಷತ್ ಆರೀಫ್ ಹುಸೈನಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವಜಲ ದಿನ, ವಿಶ್ವ ಗುಬ್ಬಚ್ಚಿಗಳ ದಿನ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಹೆಸರಿನಲ್ಲಿ ಕೈಗಾರಿಕೆಗಳ ಕಚ್ಚಾ ವಸ್ತುಗಳು ಹಾಗೂ ರಾಸಾಯನಿಕ ಪದಾರ್ಥಗಳಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಪರಿಸರ ಹಾನಿಯಿಂದ ನೈಸರ್ಗಿಕ ಸಂಪನ್ಮೂಲ ಸಂಪೂರ್ಣ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಪರಿಸರ, ಪ್ರಾಣಿ ಮತ್ತು ಪಕ್ಷಿ ಸಂಕುಲ ಸಂರಕ್ಷಣೆ ಮತ್ತು ಪೋಷಣೆಗೆ ಆಧ್ಯತೆ ನೀಡುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದ ಅವರು ಮಹಿಳೆಯರನ್ನು ಪುರುಸ ಸಮಾಜ ಗೌರವಿಸಬೇಕು. ಮಹಿಳೆಯರು ತಾಯಿ ಸ್ಥಾನವನ್ನು ಪಡೆದು ಕುಟುಂಭ ಮತ್ತು ಸಮಾಜವನ್ನು ಬೆಳೆಗುತ್ತಿದ್ದಾರೆ.
ಅವರಲ್ಲಿ ಹೆಚ್ಚು ಆತ್ಮಸ್ಥೈರ್ಯ ಮನೋಭಾವವಿದೆ. ಅವರನ್ನು ಅವಮಾನಿಸುವ ಮತ್ತು ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಆದರಿಂದ ಮಹಿಳೆಯರ ದಿನಾಚರಣೆಯನ್ನು ಪುರುಷರಿಂದ ಆಚರಿಸಿಸಲ್ಪಟ್ಟರೆ ಅದಕ್ಕೆ ಹೆಚ್ಚು ಗೌರವ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಯಚೂರು ಕೃಷಿ ಮಹಾವಿದ್ಯಾಲಯದ ಮಣ್ಣು ಮತ್ತು ನೀರು ಪರೀಕ್ಷಾ ನಿರ್ವಹಣಾ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಮಲ್ಲಿಕಾರ್ಜುನ್ ರೆಡ್ಡಿ ಮಾತನಾಡಿ ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುತ್ತದೆ. ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲಿನ್ಯ, ನೀರಿನ ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು ಮತ್ತು ಪ್ರೇರೇಪಿಸುವುದು ಈ ದಿನ ಉದ್ದೇಶವಾಗಿದೆ.
ನೀರನ್ನು ಸಮರ್ಪಕ ಬಳಕೆಯನ್ನು ನಿರ್ವಹಿಸುವುದು ಬಹಳ ಮುಖ್ಯ. ಇಂದಿನ ದಿನಗಳಲ್ಲಿ 700 ರಿಂದ 800 ಮಿ.ಮೀ. ಮಳೆಯಾಗುತ್ತದೆ. ಬೋರ್‍ವೆಲ್ ರೀಚಾರ್ಜ್‍ಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಬೋರ್ವೆಲ್‍ಗಳ ಮರುಪೂರ್ಣಗೊಳಿಸಿ ವರ್ಷವಿಡಿ ಕೊಳೆವೆ ಬಾವಿಗಳಲ್ಲಿ ನೀರು ಶೇಖರಣೆಗೊಳ್ಳುತ್ತದೆ.
ಬೇಸಿಗೆ ಕಾಲದಲ್ಲಿಯೂ ಸಹ ನೀರು ಬತ್ತುವುದಿಲ್ಲ. ಮೇಲ್ಚಾವಣಿಯ ಮಳೆ ನೀರನ್ನು ನೇರವಾಗಿ ಸಂಗ್ರಹಿಸಿ ವರ್ಷಪೂರ್ಣ ಉಪಯೋಗ ಮಾಡಬಹುದು. ಹೀಗೆ ಮಾಡಿದರೆ ನಮಗೆ ಕಾಪೆರ್Çರೇಷನ್ ಮೇಲೆ ಅವಲಂಬನೆ ಆಗುವ ಅವಶ್ಯಕತೆ ಇಲ್ಲ ಅಥವಾ ಕೊಳವೆ ಬಾವಿಯನ್ನು ಅನಾವಶ್ಯಕವಾಗಿ ಕೊರೆಯುವ ಅವಶ್ಯಕತೆ ಇರುವುದಿಲ್ಲ ಎಂದು ವಿವರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ನಾವು ಕೇಳಿಲ್ಲ. ಈಗ ಕಲಬುರಗಿಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿರುವುದನ್ನು ನಾವು ಕಾಣುತ್ತಿದ್ದೇವೆ.
ಆಧುನೀಕರಣದ ಹೆಸರಿನಲ್ಲಿ ಮಾನವ ನಿರ್ಮಿತ ಚಟುವಟಿಕೆಗಳಿಂದ ಪರಿಸರ ಹಾಳಾಗುತ್ತಿದೆ. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯಬೇಕು. ಮುಖ್ಯವಾಗಿ ಪರಿಸರ ಸಂರಕ್ಷಣೆ ಮತ್ತು ಪೋಷಣೆ ಎಲ್ಲರ ಹೊಣೆಯಾಗಬೇಕು. ಮಹಿಳೆಯರನ್ನು ಪ್ರಕೃತಿ ಮಾತೆಗೆ ಹೋಲಿಕೆ ಮಾಡಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಕೆ. ವಿಜಯಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ಮಹಿಳಾ ದಿನವನ್ನು ಇಂದು ದೇಶದಾದ್ಯಂತ ಆಚರಿಸಿ ಗೌರವಿಸಲಾಗುತ್ತಿದೆ. ಆಧುನೀಕರಣ ಮತ್ತು ನಗರೀಕರಣದಿಂದ ಪರಿಸರದ ಮೇಲೆ ವೈಪರೀತ್ಯ ಪರಿಣಾಮ ಬೀರುತ್ತಿದೆ. ಪರಿಸರ ಸಂರಕ್ಷಿಸಿದರೆ ಮಾತ್ರವೇ ಜೀವ ಸಂಕುಲ ಉಳಿಯಲಿದೆ. ಪಕ್ಷಿ ಮತ್ತು ಪ್ರಾಣಿ ಸಂಕುಲವನ್ನು ಸಂರಕ್ಷಣೆ ಮಾಡಲು ಜನರ ಸಹಬಾಗಿತ್ವ ಮುಖ್ಯ. ವಿಶ್ವವಿದ್ಯಾಲಯ ಆವರಣದಲ್ಲಿ ಪಕ್ಷಿ ಮತ್ತು ಪ್ರಾಣಿಗಳಿಗೆ ನೀರು ಮತ್ತು ಧಾನ್ಯ ಒದಗಿಸಲು ಮಣ್ಣಿನ ಮುಚ್ಚಳ ಗಿಡ ಮರಗಳಿಗೆ ತೂಗಿ ಹಾಕಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯೆ ಡಾ. ಸಿ. ಸುಲೋಚನಾ, ಕಲಾ ನಿಕಾಯದ ಡೀನ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಅಬ್ದುಲ್ ರಬ್ ಉಸ್ತಾದ್ ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಸಿದ್ದಪ್ಪ, ಶ್ರೀಮತಿ ಅನಿತಾ ವಿಜಯಕುಮಾರ್, ಎಸ್ ಬಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರಾಂಶುಪಾಲರಾದ ಪ್ರೊ. ರಾಮಕೃಷ್ಣ ರೆಡ್ಡಿ, ಪತ್ರಿಕೋದ್ಯಮ ವಿಭಾಗದ ಡಾ. ಕೆ.ಎಂ. ಕುಮಾರಸ್ವಾಮಿ, ಮಲ್ಟಿ ಮೀಡಿಯಾ ಸಿಬ್ಬಂದಿ ಶರಣು ನಾವಿ, ಕೆಬಿಎನ್ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ ಅಂಗವಾಗಿ ಖಾಜಾ ಬಂದಾನವಾಝ್ ವಿಶ್ವವಿದ್ಯಾಲಯದ ವಿಜ್ಞಾನ, ಕಲಾ, ಮಾನವಿಕ ವಿಷಯಗಳು, ಭಾμÉಗಳು ಸಾಮಾಜಿಕ ವಿಜ್ಞಾನ, ಶಿಕ್ಷಣ, ಕಾನೂನು ಮತ್ತು ವಾಣಿಜ್ಯ ನಿಕಾಯದ ಡೀನ್ ಡಾ. ನಿಷತ್ ಆರೀಫ್ ಹುಸೈನಿ, ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ವಿಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯೆ ಡಾ. ಸಿ. ಸುಲೋಚನಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಾಣಿಶಾಸ್ತ್ರ ವಿಭಾಗದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ವಿವಿಧ ವಿಭಾಗಗಳ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಪ್ರಕಾಶ್ ಕರಿಯಜ್ಜನವರ್ ವಂದಿಸಿದರು. ಸಾನಿಯ ತಬಸುಮ್, ಪ್ರಪುಲ್ಲ ಕುರ್ಮಲ್ ಕಾರ್ಯಕ್ರಮ ನಿರ್ವಹಿಸಿದರು. ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ವಿಶ್ವವಿದ್ಯಾಲಯ ಆವರಣದ ವಿವಿಧ ವಿಭಗಗಳ ಪರಿಸರ ವಾತಾವರಣದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಬಿರು ಬಿಸಿಲು ತಾಪದಿಂದ ತತ್ತರಿಸುತ್ತಿರುವ ಪಕ್ಷಿಗಳಿಗೆ ಆಶ್ರಯ ನೀಡಲು ಮುತುವರ್ಜಿ ವಹಿಸಿದ್ದಾರೆ. ದೇಶಿ ಮಾದರಿಯಲ್ಲಿ ಗಿಡ ಮರಗಳಿಗೆ ಮಣ್ಣಿನ ಮುಚ್ಚಳಗಳನ್ನು ತೂಗಿ ಹಾಕಿ ಅವುಗಳಿಗೆ ದಾನ್ಯ, ನೀರು ಹಾಕಿ ಪಕ್ಷಿ ಸಂಕುಲವನ್ನು ಪೋಷಿಸುತ್ತಿರುವುದು ನಿಜಕ್ಕೂ ಉತ್ತಮ ಕೆಲಸವಾಗಿದೆ. ಪರಿಸರದ ಜೊತೆಗೆ ಪ್ರತಿ ದಿನ ಆ ಮಣ್ಣಿನ ಮುಚ್ಚಳಗಳಿಗೆ ನೀರು ಧಾನ್ಯ ಹಾಕುವ ಕಾರ್ಯವನ್ನು ನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ಮಾದರಿ ಕೆಲಸ
ಪ್ರೊ. ದಯಾನಂದ ಅಗಸರ, ಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ.