ಹೊರ ಗುತ್ತಿಗೆ ನೌಕರರಿಗೆ ಅನುದಾನ, ವೇತನ ನೀಡಲು ಆಗ್ರಹ

0
35

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರ ಗುತ್ತಿಗೆ ನೌಕರರಿಗೆ ಕಳೆದ ಮೂರ್ನಾಲ್ಕು ತಿಂಗಳ ವೇತನ ಪಾವತಿ ಮಾಡಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.

ಮೇಲಾಗಿ ಚಿಂಚೋಳಿ, ಒಂಟಿ ಚಿಂತಾ, ಪಾಲತ್ಯಾ ತಾಂಡಾ ಈ ಮೂರು ಆಶ್ರಮ ಶಾಲಾ ನೌಕರರಿಗೆ 18 ತಿಂಗಳ ವೇತನ ಪಾವತಿ ಆಗಿರುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

Contact Your\'s Advertisement; 9902492681

ಪ್ರತಿ ತಿಂಗಳು ನೌಕರರಿಗೆ ಇಪಿಎಫ್ ಮತ್ತು ಇಎಸ್ಐ ಸರಿಯಾದ ರೀತಿ ಕಟ್ಟಿರುವುದಿಲ್ಲ. ವೇತನ ಪಾವತಿ ಮಾಡುವ ಏಜೆನ್ಸಿಯವರು ಪ್ರತಿ ತಿಂಗಳು 1000-1500 ವೇತನ ಕಡಿಮೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟ ಏಜೆನ್ಸಿಯಿಂದಾಗಿ ನೌಕರರು ತುಂಬಾ ಅನುಭವಿಸುತ್ತಿದ್ದು, ಕೂಡಲೇ ಈ ಏಜೆನ್ಸಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಕಪ್ಪು ಪಟ್ಟಿಗೆ ಸೇರಿಸಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸಮಾಜ ಕಲ್ಯಾಣ, ಬಿಸಿಎಂ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಹೊರ ಗುತ್ತಿಗೆ ನೌಕರರಿಗೆ ವೇತನ ನೀಡುವುದಕ್ಕೆ ಕೋಟ್ಯಂತರ ರೂ. ಅನುದಾನ ಬರಬೇಕಾಗಿದ್ದು, ಸಂಕಷ್ಟಸಲ್ಲಿರುವ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಗಮನ ಹರಿಸಿ ಸರ್ಕಾರದಿಂದ ಬಾಕಿ ವೇತನ ಬಿಡುಗಡೆ ಮಾಡಿಸಬೇಕು ಎಂದು ಅವರು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಮೇಘರಾಜ ಖಠಾರೆ, ಜಿಲ್ಲಾಧ್ಯಕ್ಷ ಪರುಶುರಾಮ ಹಡಲಗಿ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here