ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಇತ್ತೀಚೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ವಿಠ್ಠಲ್ ಯಾದವ್ ಅವರಿಗೆ ಸ್ವಗ್ರಾಮದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು. ಗ್ರಾಮದಲ್ಲಿನ ವಿಠ್ಠಲ್ ಯಾದವ್ ಅವರ ಅಭಿಮಾನಿಗಳು ಹಾಗೂ ಮುಖಂಡರು ಬೃಹತ್ ಗಾತ್ರದ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಭಾಗವಹಿಸಿದ್ದರು.
ಸನ್ಮಾನ ಸ್ವೀಕರಿಸಿದ ನಂತರ ವಿಠ್ಠಲ್ ಯಾದವ್ ಮಾತನಾಡಿ, ದಿ. ರಾಜಾ ವೆಂಕಟಪ್ಪ ನಾಯಕ ಅವರ ರಾಜಕೀಯ ಜೀವನ ಪ್ರಾರಂಭಗೊಂಡಿದ್ದೇ ಪೇಠ ಅಮ್ಮಾಪುರ ದಿಂದ ಅವರು ಮಂಡಲ ಪ್ರಧಾನರಾಗಿದ್ದಾಗ ನಾನು ಮಂಡಲ ಸದಸ್ಯನಾಗಿದ್ದೆ ನನಗೂ ಮತ್ತು ದಿ.ಆರ್‍ವಿಎನ್ ಅವರಿಗೂ 35ವರ್ಷಗಳ ಒಡನಾಟ ಇತ್ತು ಎಂದು ನೆನಪಿಸಿಕೊಂಡ ಕ್ಷೇತ್ರದ ಅಭಿವೃದ್ಧಿಯ ಕಳಕಳಿ ಹೊಂದಿದ್ದ ಅವರು ಜಾತಿ ಹಾಗೂ ಮತ ಬೇಧವಿಲ್ಲದೇ ಎಲ್ಲರನ್ನು ತೆಗೆದುಕೊಂಡು ಹೋಗುವ ಶಕ್ತಿ ಅವರಲ್ಲಿತ್ತು ಅವರೊಬ್ಬ ಅಪರೂಪದ ರಾಜಕಾರಣಿ ಅಂತಹ ವ್ಯಕ್ತಿ ನಮಗೆ ಸಿಗುವದಿಲ್ಲ ಎಂದ ಅವರ ಗರಡಿಯಲ್ಲಿ ಪಳಗಿದ ನಾನು ತಾಪಂ ಅಧ್ಯಕ್ಷ ಹಾಗು ಅಪೆಕ್ಸ್ ಬ್ಯಾಂಕ್ ನಿರ್ದೇಶಕಗಳಂತಹ ಸ್ಥಾನ ಸಿಗಲು ಇಂದು ಇಂತಹ ರಾಜಕೀಯ ಉನ್ನತ ಸ್ಥಾನ ಸಿಗಲು ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದ ದಿ.ಆರ್‍ವಿಎನ್ ಅವರೇ ಕಾರಣ ಎಂದು ಅವರು ಹೇಳಿದರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ನುಡಿದಂತೆ ನಡೆದುಕೊಂಡಿದ್ದೇವೆ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಸರಕಾರದ ಸಾಧನೆಗಳನ್ನು ತಿಳಿಸಬೇಕು ಎಂದು ಕರೆ ನೀಡಿದರು.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು ಇತ್ತೀಚೆಗೆ ನಮ್ಮನ್ನು ಅಗಲಿದ ರಾಜಾ ವೆಂಕಟಪ್ಪ ನಾಯಕ ಅವರು ಪೇಠ ಅಮ್ಮಾಪುರ ಗ್ರಾಮವು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಯ ಅಪಾರ ಕಾಳಜಿ ಹೊಂದಿದ್ದರು ಅವರ ನಿಧನದ ಪ್ರಯುಕ್ತ ನಡೆಯುತ್ತಿರುವ ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತೆರವಾದ ಅವರ ಸ್ಥಾನವನ್ನು ತುಂಬಲು ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಹಗಲಿರುಳು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವೆಂಕಾರೆಡ್ಡಿ ಬೋನಾಳ, ರಾಮುನಾಯಕ ಅರಳಹಳ್ಳಿ ಹಾಗೂ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಮಾತನಾಡಿದರು.ಪ್ರಮುಖರಾದ ನದೀಮುಲ್ಲಾ ಇನಾಂದಾರ,ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ, ಹಣಮಗೌಡ ಪೋಲಿಸ್‍ಪಾಟೀಲ,ದೂಡ್ಡ ದೇಸಾಯಿ,ಭೀಮಣ್ಣ ಪ್ಯಾಟಿ,ಚಂದಪ್ಪ ಯಾದವ್,ನಿಂಗಣ್ಣ ಮಾವಿನಮಟ್ಟಿ,ಎಸ್.ಎಂ.ಮುಲ್ಲಾ,ಭೀಮರೆಡ್ಡಿ ಕೋಳಿಹಾಳ,ವೆಂಕಟೇಶ ಬೇಟೆಗಾರ,ರಮೇಶ ದೊರೆ,ಉಸ್ಮಾನ ಪಾಶಾ,ಸೋಫಿಸಾಬ ನಾಗರಾಳ, ಸಿದ್ದು ವಾಗಣಗೇರಿ, ಪ್ರಕಾಶ ಯಾದವ್, ಮಹೇಶ ಯಾದವ್,ಹಣಮಂತ ನಾಯಕ ಟಣಕೇದಾರ ಸೇರಿದಂತೆ ಅನೇಕರು ಇದ್ದರು. ವೆಂಕಟೇಶ ಕುರಿ ನಿರೂಪಿಸಿ ವಂದಿಸಿದರು.