ಮತ ಸೈನಿಕರಾಗಿ ರಾಷ್ಟ್ರ ರಕ್ಷಣೆಗೆ ಮುಂದಾಗಿ: ಡಾ. ಉಮೇಶ್ ಜಾಧವ್

0
52

ಅಫಜಲಪುರ; ರಾಷ್ಟ್ರದ ಅಖಂಡತೆ ಮತ್ತು ಭದ್ರತೆಗಾಗಿ ಪ್ರತಿಯೊಬ್ಬ ಭಾರತೀಯನು ಮತ ಸೈನಿಕರಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಮನವಿ ಮಾಡಿದರು.

ಅಫಜಲಪುರ ತಾಲೂಕಿನ ಅತನೂರು ಮಹಾಶಕ್ತಿ ಕೇಂದ್ರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ನಾವೆಲ್ಲರೂ ಗಡಿಯಲ್ಲಿ ಹೋಗಿ ರಾಷ್ಟ್ರದ ರಕ್ಷಣೆ ಮಾಡಲು ಸಾಧ್ಯವಿಲ್ಲ ಆದರೆ ರಾಷ್ಟ್ರದ ರಕ್ಷಣೆಗೆ ಮತ್ತು ಸಮಗ್ರತೆಯನ್ನು ಕಾಪಾಡಿ ಅಭಿವೃದ್ಧಿಯನ್ನು ಸಾಧಿಸಲು ಪ್ರತಿಯೊಬ್ಬರೂ ಕೂಡ ಮತ ಸೈನಿಕರಾಗಿ ಮೇ ಏಳರಂದು ಪ್ರಬುದ್ಧತೆಯಿಂದ ಮತ ಚಲಾಯಿಸಿ ರಾಷ್ಟ್ರದ ಗೌರವವನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿವೃದ್ಧಿಯ ಹರಿಕಾರನೆಂದು ಜಗತ್ತೇ ಕೊಂಡಾಡುತ್ತಿರುವಾಗ ಮೋದಿ ಅವರು ಐದು ಕೆಲಸ ಮಾಡಿ ಇದನ್ನು ತೋರಿಸಲಿ ಎಂದು ಪ್ರಶ್ನೆ ಹಾಕುವ ಕಾಂಗ್ರೆಸ್ಸಿಗರಿಗೆ ನೂರಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ತೋರಿಸಲು ಸಾಧ್ಯ ಎಂದು ಸವಾಲೆಸದರು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಮೋದಿ ಸರ್ಕಾರ ಬಂದ ಮೇಲೆ ಅದ್ಭುತ ಪ್ರಗತಿಯನ್ನು ಸಾಧಿಸಲಾಗಿದೆ.

ಕಲ್ಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆಯನ್ನು ನಾವೇ ಪ್ರಾರಂಭಿಸಿರುವುದಾಗಿ ಜಂಬ ಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಒಂದು ಸಾವಿರದ ಎಂಟುನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ನಿರ್ಮಿಸಿದರಲ್ಲಿ ಭ್ರಷ್ಟಾಚಾರದ ವಾಸನೆ ಬಡಿದಿದೆ. ಇದರ ಬಗ್ಗೆ ಸಿಬಿಐಗೆ ದೂರು ಸಲ್ಲಿಸಲಾಗಿದ್ದು ತನಿಖೆ ಪ್ರಗತಿಯ ಹಂತದಲ್ಲಿದೆ. ಇದು ಕಾಂಗ್ರೆಸ್ಸಿನ ನಿಜ ಬಣ್ಣಕ್ಕೆ ಸಾಕ್ಷಿಯಾಗಿದೆ. ಆದರೆ 900 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಪಾರ್ಲಿಮೆಂಟ್ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರ್ಮಾಣ ಮಾಡಿ ಈ ಕಾರ್ಯವನ್ನು ಎರಡು ವರ್ಷದಲ್ಲಿ ಮುಗಿಸಿ ಇಡೀ ಜಗತ್ತೇ ಕಣ್ಣೆತ್ತಿ ನೋಡುವಂತೆ ಮಾಡಿದರು.

ಜಗತ್ತಿನ ನಾಯಕರು ಮೋದಿ ಅವರ ಆಡಳಿತವನ್ನು ಮೆಚ್ಚಿ ವಿಶ್ವ ನಾಯಕನೆಂದು ಗುರುತಿಸಿ ಸಲಹೆ ಮಾರ್ಗದರ್ಶನ ಪಡೆಯುತ್ತಿರುವಾಗ ಹೆಮ್ಮೆಯ ಪ್ರಧಾನಿಯವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ತನ್ನ ಸಣ್ಣತನವನ್ನು ತೋರಿಸಿದ್ದಾರೆ.

ಚೀನಾ ಆಕ್ರಮಣವೆಸೆಗಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಫೀಮು ಕುಡಿದು ಮಲಗಿದ್ದರು ಎಂದು ಮೂದಲಿಸಿ ಗೌರವಾನ್ವಿತ ಪ್ರಧಾನ ಮಂತ್ರಿ ಸ್ಥಾನಕ್ಕೂ ಗೌರವ ಕೊಡದೆ ಸಂವಿಧಾನವನ್ನು ಹೀಯಾಳಿಸಿದಂತಾಗಿದೆ. ಭಾರತದಲ್ಲಿ ಸಂವಿಧಾನಕ್ಕೆ ಅತ್ಯಂತ ಹೆಚ್ಚಿನ ಗೌರವ ಕೊಟ್ಟು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅತ್ಯುನ್ನತ ಸ್ಥಾನ ನೀಡುತ್ತಿರುವವರು ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ ಎಂದು ಹೇಳಿದರು.

ಭಾರತದ ಗೌರವವನ್ನು ಜಗತ್ತಮೇ.7ರಂದು ಪೂಜೆ ಸಲ್ಲಿಸಿ ಮತಗಟ್ಟೆಗೆ ತೆರಳಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಭಾರತೀಯ ಜನತಾ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ ಎಂದು ಹೇಳಿದರು.

*ಕಾಂಗ್ರೆಸ್ಸಿನ ಗ್ಯಾರಂಟಿಯಿಂದಾಗಿ ಕುಡಿನೀರು ಸಿಗದಷ್ಟು ದುರಂತ: ಮಾಲೀಕಯ್ಯ ಗುತ್ತೇದಾರ್*

ಕಾಂಗ್ರೆಸ್ ಸರಕಾರವು ಗ್ಯಾರೆಂಟಿಗಾಗಿ ಎಲ್ಲಾ ಹಣ ನೀಡಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದೆ ರಾಜ್ಯದ ಜನತೆಗೆ ಮೋಸ ಮಾಡಿದೆ. ಕುಡಿಯಲು ನೀರು ಕೊಡಲು ಸಾಧ್ಯವಾಗದೆ ಸರಕಾರವು ದಿವ್ಯ ಮೌನವಹಿಸಿದೆ. ಎಂದು ದೂರಿದರು.

ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಜನರು ನೀರು ಕೊಡಿ ಎಂದು ಬೇಡಿಕೆ ಮುಂದಿಟ್ಟದ್ದು ನ್ಯಾಯೋಚಿತವಾಗಿದೆ. ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಸರಕಾರಕ್ಕೆ ಕೇಳಬೇಕಾದ ಪ್ರಶ್ನೆ ಇದಾಗಿದ್ದು ಮತ ಬೇಟೆಗೆ ಕಾಂಗ್ರೆಸ್ ಬಂದಾಗ ಪ್ರಶ್ನೆ ಎತ್ತಿ ಎಂದು ಕಿವಿ ಮಾತು ಹೇಳಿದರು.ನೀರಿಗಾಗಿ ಜೆಡಿಎಸ್ ನ ಶಿವಕುಮಾರ್ ನಾಟಿಕಾರ್ 13 ದಿನಗಳ ಕಾಲ ಜನತೆಯ ಸಲುವಾಗಿ ಉಪವಾಸ ಮುಷ್ಕರ ಹೂಡಿದರು.

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗದೆ ಹತ್ತು ತಿಂಗಳಲ್ಲಿ ರಾಜ್ಯವನ್ನು ದುಃಸ್ಥಿತಿಗೆ ತಳ್ಳಿದೆ. ಇದರ ವಿರುದ್ಧ ಪ್ರಜ್ಞಾವಂತ ಮತದಾರರು ಈ ಬಾರಿ ತಕ್ಕ ಪಾಠ ಕಲಿಸುವುದರ ಮೂಲಕ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರಕ್ಕೆ ಸರಿಯಾದ ಉತ್ತರ ಕೊಡಬೇಕಾಗಿದೆ ಎಂದರು.

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಬಿಜೆಪಿ ಎಲ್ಲರ ಆಯ್ಕೆ ಆಗಲಿ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾಲರಾಜ ಗುತ್ತೇದಾರ್, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಡಾ.ಇಂದಿರಾ ಶಕ್ತಿ, ವಿದ್ಯಾಸಾಗರ್ ಮಂಗಳೂರೆ, ಶಾಂತಪ್ಪ ಕೂಡ್ಲಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here