ಗುರುಮಠಕಲ್ ಜೆಡಿಎಸ್ ಶಾಸಕರ ಮನೆಯಲ್ಲಿ ಚುನಾವಣಾ ರಣತಂತ್ರ ಚರ್ಚೆ

0
60

ಯಾದಗಿರಿ: ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಉಮೇಶ್ ಜಾಧವ್ ಗೆಲುವಿನ ಬಗ್ಗೆ ಚರ್ಚಿಸಲು ಕಲಬುರಗಿ ಜಿಲ್ಲಾ ಜೆಡಿಎಸ್ ನಾಯಕರ ದಂಡು ಯಾದಗಿರಿಯಲ್ಲಿರುವ ಗುರುಮಠಕಲ್ ಶಾಸಕರಾದ ಶರಣಗೌಡ ಪಾಟೀಲ್ ಕಂದಕೂರ ಅವರ ಮನೆಗೆ ಸೋಮವಾರ ಭೇಟಿ ನೀಡಿತು. ಹಲವಾರು ಮಹತ್ವದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರೆಂದು ಮೂಲಗಳು ಹೇಳಿವೆ.

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುಮಠಕಲ್ ಕ್ಷೇತ್ರವು ಸೇರಿಕೊಂಡಿದ್ದು ಅಲ್ಲಿ ಜೆಡಿಎಸ್ ಶಾಸಕರಿದ್ದು ಇಲ್ಲಿ ಮೈತ್ರಿ ಧರ್ಮ ಕಾಪಾಡಿ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್ ಸಂಪೂರ್ಣ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು, ರಾಜ್ಯ ನಾಯಕರು, ಅಭ್ಯರ್ಥಿ ಡಾ.ಜಾಧವ್ ಅವರು ಜೆಡಿಎಸ್ ಪಕ್ಷವನ್ನು ಸಮಾನ ಪ್ರತಿನಿತ್ಯ ನೀಡುವುದರ ಮೂಲಕ ಬೆಂಬಲ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣಾ ಪ್ರಚಾರ, ಮತದಾರರ ಓಲೈಕೆ, ಇತ್ಯಾದಿ ರಣತಂತ್ರಗಳ ಬಗ್ಗೆ ಶಾಸಕ ಶರಣಗೌಡ ಅವರೊಂದಿಗೆ ಜಿಲ್ಲಾ ಜೆಡಿಎಸ್ ನಾಯಕರು ಸುಧೀರ್ಘ ಚರ್ಚೆ ನಡೆಸಿದರೆಂದು ಪಕ್ಷದ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಯಾದಗಿರಿ ಜಿಲ್ಲಾ ಜೆಡಿಎಸ್ ಹಿರಿಯ ನಾಯಕ ವಿಶ್ವನಾಥ ಸಿರವಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ, ಯುವ ನಾಯಕರಾದ ಶಿವಕುಮಾರ ನಾಟೀಕಾರ, ಕೃಷ್ಣಾರೆಡ್ಡಿ ಇತರರು ಶಾಸಕ ಕಂದಕೂರ ಜತೆ ಜಾಧವ್ ಗೆಲುವಿನ ಕುರಿತು ಚರ್ಚಿಸಿದ್ದಾರೆ.

ಶಾಸಕರಿಗೆ ಭೇಟಿಯಾಗಿದ್ದರೆ ನಮ್ಮನ್ನ ಭೇಟಿಯಾಗಿಲ್ಲಾ ನಾವು ಯಾವರೀತಿಯಲ್ಲಿ ಚುನಾವಣೆ ಮಾಡಬೇಕು ನಮ್ಮನ್ನ ಬಿಜೆಪಿಯವರು ಯಾವರೀತಿ ಬಳಸಿಕೊಂಡು ಹೋಗುತ್ತಾರೆ ಎನ್ನುವದರ ಬಗ್ಗೆ ಶರಣಾಗೌಡರು ಗುರಮುಠಕಲ್ ಕ್ಷೇತ್ರದ ಅಭಿಪ್ರಾಯಗಳನ್ನು hdk ಅವರ ಜೊತೆ ಚರ್ಚಿಸಿ ತಿಳಿಸಲು ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾದವ್ ಯಾದಗಿರಿಗೆ ಭೇಟಿ ನೀಡಿ ಜೆಡಿಎಸ್ ಶಾಸಕರನ್ನು ಹಾಗೂ ಮುಖಂಡರನ್ನು ಭೇಟಿಯಾಗಿ ಚುನಾವಣಾ ಕಣದಲ್ಲಿ ಸಮನ್ವಯದಿಂದ ಕಾರ್ಯತಂತ್ರ ರೂಪಿಸಲು ಮಾತುಕತೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here