ಸುರಪೂರ: ತಾಲೂಕಿನ ಕೆಂಭಾವಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗ್ರಾಮೀಣ ಪ್ರತಿಭೆ ಕು-ಮಧು ತಂದೆ ಬಸವರಾಜ ಯಾಳಗಿ,ಯಾವುದೇ ಟ್ಯೂಷನ್ ಮತ್ತು ಕೋಚಿಂಗ್’ಗೆ ಹೋಗದೆ ಕಡು ಬಡತನದಲ್ಲಿ ಓದಿ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ಶೇಕಡಾ 85% (509/600) ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಪ್ರಥಮಸ್ಥಾನ ಪಡೆದಿದ್ದಾರೆ.
ಈ ಮೂಲಕ ಊರಿಗೆ ಕೀರ್ತಿ ತಂದಿದ್ದಾಳೆ,ಉತ್ತಮ ಫಲಿತಾಂಶಕ್ಕಾಗಿ ಚಿಕ್ಕಪ್ಪನವರಾದ ಪ್ರೊ: ರಮೇಶ ಬಿ ಯಾಳಗಿ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕ ವೃಂದ ಮತ್ತು ಗ್ರಾಮದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.