ಸ್ವಾಭಿಮಾನಿ ಬದುಕು ಜೀವನ ನಡೆಸಿ: ಮಲ್ಲಿಕಾರ್ಜುನ್ ಮುಕ್ಕಾ

0
19

ಕಲಬುರಗಿ: ವಿಠ್ಠಲ್ ಹೇರೂರ್ ಅವರ 72ನೇ ಜನ್ಮ ದಿನದ ಅಂಗವಾಗಿ ಕಲಬುರ್ಗಿ ನಗರದ ಮಹರ್ಷಿ ವೇದವ್ಯಾಸ್ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಕಲ್ಬುರ್ಗಿ ಆಶ್ರಯದಲ್ಲಿ ಸ್ವಾಭಿಮಾನಿ ವಿಠಲ ಹೇರೂರ ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯದಲ್ಲಿ ಮಾನ್ಯ ವಿಠ್ಠಲ ಹೇರೂರರವರ 72ನೇ ಜನ್ಮದಿನ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ತಳವಾರ್ ಸಾಯಿಬಣ್ಣ ಅವರು ಉದ್ಘಾಟಿಸಿ ಮಾತನಾಡುತ್ತಾ ಸ್ವಾಭಿಮಾನಿ ವಿಠ್ಠಲ ಹೇರೂರವರು ಎಲ್ಲ ಸಮುದಾಯಗಳ ಹಾಗೂ ಕೋಲಿ ಕಬ್ಬಲಿಗ ತಳವಾರ ಸಮೂಹ ಸಮುದಾಯಗಳ ಜನರಿಗೆ ಜೀವಮಾನದಲ್ಲಿ ಅರಿವನ್ನು ಮೂಡಿಸುತ್ತ ಹೋರಾಡುತ್ತಾ ಎಚ್ಚರಿಕೆಯನ್ನು ನೀಡಿ ಸುಭದ್ರ ಸಮಾಜದ ನಿರ್ಮಾಣಕ್ಕೆ ಅವರ ಚಿಂತನೆ ಹೋರಾಟ ನಾವು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೇರಣಾ ಟ್ರಸ್ಟ್ ಅಧ್ಯಕ್ಷರು ಡಾ. ಮಲ್ಲಿಕಾರ್ಜುನ್ ಮುಕ್ಕ ಅವರು ಮಾತನಾಡಿ ಸ್ವಾಭಿಮಾನಿ ವಿಠ್ಠಲ ಹೇರೂರವರ ಹೆಸರಿನ ಮೆಟ್ರಿಕ್ ನಂತರದ ವಸತಿ ನಿಲಯವು ಕಳೆದ ಐದು ವರ್ಷಗಳಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಉನ್ನತ ಶಿಕ್ಷಣ ಪಡೆಯಲು ವಸತಿ ನಿಲಯ ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಸಮಾಜದ ಸಹಕಾರಿಗಳು ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರ ನೀಡುತ್ತಿರುವುದು ಈ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆಯ ಸಮುದಾಯದ ಸಹಕಾರ ನೀಡಿದ ಕೊಡುಗೆ ದಾನಿಗಳಿಗೆ ಸ್ವಾಭಿಮಾನಿ ವಿಠ್ಠಲ ಹೇರೂರು ಜನ್ಮದಿನದ ನಿಮಿತ್ಯವಾಗಿ ಅವರಿಗೂ ಸನ್ಮಾನಿಸ ಸತ್ಕರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಲಬುರ್ಗಿ ಜಿಲ್ಲೆ ಕೋಲಿ ಕಬ್ಬಲಿಗ ನೌಕರರ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಲ್ಲಪ್ಪ ತಳವಾರ್ ನಿರೂಪಿಸಿದರು, ಸೋಮರಾಯ ನಾಗಾವಿ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹರ್ಷಿ ವೇದ ವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಪದಾಧಿಕಾರಿಗಳು ಹಾಗು ಸದಸ್ಯರು ಸೇರಿದಂತೆ ಇತರರು ಹಾಗು ವಸತಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಶರಣಬಸಪ್ಪ ದೊಡ್ಮನಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here