ಬಡ ಮಕ್ಕಳು ಸರ್ಕಾರಿ ಹುದ್ದೆ ಸಂಪಾದಿಸುವುದೆ ನನ್ನ ಆಸೆ : ಎಮ್.ವಿ. ಸದಾಶಿವ

0
85

ಚಿಕ್ಕಬಳ್ಳಾಪುರು: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಮಕ್ಕಳ ಭವಿಷ್ಯಕ್ಕೆ ಉತ್ತಮ ವಿದ್ಯಾಭ್ಯಾಸ ಮತ್ತು ಕ್ರೀಡೆ, ಆಟ-ಪಾಠ ದೊಂದಿಗೆ ಈಗಿನ ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಎಂದು ಶ್ರೀ ಶಿರಡಿ ಸಾಯಿ ಎಜುಕೇಷನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷ ಡಾ. ಎಮ್.ವಿ. ಸದಾಶಿವ (ಮಂಚನಬಲೆ) ತಿಳಿಸಿದರು.

ಅವರು ಜಿಲ್ಲೆಯ ಮಂಚನಬಲೆಯ ಶ್ರೀ ಶಿರಡಿ ಸಾಯಿ ಎಜುಕೇಷನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯ ಇಟ್ಟಪನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಲೇಖನಗಳ ವಿತರಣಾ ಕಾರ್ಯಕ್ರಮ” ಹಮ್ಮಿಕೊಂಡು ಬಡ ಮಕ್ಕಳಿಗೆ ಲೇಖನಗಳು ಮತ್ತು ಪುಸ್ತಕಗಳನ್ನು ಉಚಿತವಾಗಿ ಟ್ರಸ್ಟ್ ವತಿಯಿಂದ ನೀಡಿ ಮಾತನಾಡಿ,
ಶಾಲೆಯಲ್ಲಿ ಕಲಿತ ಪಾಠ ಎಂದಿಗೂ ಮರೆಯಬಾರದು, ಇಲ್ಲಿನ ಪುಸ್ತಕದ ಪಾಠ ಕೇವಲ ಪರೀಕ್ಷೆಗೆ ಮಾತ್ರವಲ್ಲ ಅದರಲ್ಲಿರುವ ವಿಷಯಗಳನ್ನು ತಿಳಿದುಕೊಂಡು ಭವಿಷ್ಯದಲ್ಲಿ ಅದನ್ನು ಉಪಯೋಗಿಸಿಕೊಂಡು ನಿಮ್ಮ ಬುದ್ದಿ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳನ್ನು ಸರ್ಕಾರಿ ಹುದ್ದೆಗಳಲ್ಲಿ ನೋಡುವುದೆ ನನ್ನ ಆಸೆಯಾಗಿದೆ ಎಂದು ಮಕ್ಕಳಗೆ ಸಲಹೆ ನೀಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿ ಎಜುಕೇಷನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ನ ಕಾರ್ಯದರ್ಶಿ ಸುರೇಶ.ಎನ್, ಖಜಾಂಚಿ ಅಶ್ವತ್ ಕುಮಾರ್ ಹಾಗೂ ಶಾಲೆಯ ಶಿಕ್ಷಕರು ಸೇರಿದಂತೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here