ವಿಶ್ವಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅನನ್ಯ: ಪ್ರೊ.ಎಚ್.ಬಿ.ಪಾಟೀಲ

0
40

ಕಲಬುರಗಿ: ಎಲ್ಲಾ ಜಾತಿ, ಧರ್ಮದವರನ್ನು ಒಂದೆಡೆ ಸೇರಿಸಿ, ಚರ್ಚಿಸಿ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಹಾಕಿದ ವಿಶ್ವದ ಪ್ರಥಮ ಸಂಸತ್‌ವೆನಿಸಿದ ’ಅನುಭವ ಮಂಟಪ’ವನ್ನು ಬಸವಣ್ಣನವರು ಸ್ಥಾಪಿಸಿ, ವಿಶ್ವಕ್ಕೆ ಕಲ್ಯಾಣ ಕರ್ನಾಟಕದ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ಕಾಳಗಿ ತಾಲೂಕಿನ ಟೆಂಗಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ಜರುಗಿದ ’ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ ಮತ್ತು ’ವಿಶ್ವಕರ್ಮ ಜಯಂತಿ’ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ನಮ್ಮ ಭಾಗ ಶರಣರು, ಸಂತರು, ಮಹಾತ್ಮರ ಬೀಡು. ಕಲೆ, ಸಾಹಿತ್ಯ, ಸಂಸ್ಕ್ರತಿ, ಅಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಕನ್ನಡದ ಪ್ರಥಮ ಗ್ರಂಥ ’ಕವಿರಾಜ ಮಾರ್ಗ’, ತೊಗರಿ ಕಣಜ, ಸಿಮೆಂಟ ಉತ್ಪಾದನೆ, ಶೈಕ್ಷಣಿಕ ಹಬ್ ಸೇರಿದಂತೆ ವಿವಿಧ ಕೊಡುಗೆಯು ಮರೆಯುವಂತಿಲ್ಲವೆಂದರು.
ದಾಸ್ಯದ ಸಂಕೇತದ ಹೆಸರಾದ ’ಹೈದ್ರಾಬಾದ ಕರ್ನಾಟಕ’ ಎಂಬ ಪ್ರದೇಶವನ್ನು ’ಕಲ್ಯಾಣ ಕರ್ನಾಟಕ’ವೆಂದು ಮರು ನಾಮಕರಣ ಮಾಡಿರುವುದು ಈ ಭಾಗದ ಜನತೆಗೆ ಹರ್ಷ ತಂದಿದೆ. ಈ ಪ್ರದೇಶದ ಸಮಗ್ರವಾದ ಇತಿಹಾಸವನ್ನು ಪಠ್ಯಕ್ಕೆ ಸೇರ್ಪಡೆಗೊಳಿಸುವುದು, ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಬೇಕಾಗಿದೆ. ಎಲ್ಲವೂ ಸರ್ಕಾರದಿಂದಲೇ ಕೆಲಸಗಳು ನಿರೀಕ್ಷಿಸುವುದು ಕೂಡಾ ತಪ್ಪು. ಈ ಭಾಗದ ಜನರು ನಾವು ಹಿಂದುಳಿದವರು, ನಮ್ಮಿಂದ ಉನ್ನತ ಸಾಧನೆ ಅಸಾಧ್ಯ ಎಂಬ ಮನೋಭಾವನೆಯನ್ನು ಬದಲಾಯಿಸಿಕೊಂಡು, ಸತತ ಪ್ರಯತ್ನ, ನಿಶ್ಚಿತ ಗುರಿಯೊಂದಿಗೆ ಕಾರ್ಯನಿರ್ವಹಿಸಿ ಉನ್ನತವಾದ ಸಾಧನೆಯನ್ನು ಮಾಡಿ ಬೇರೆ ಭಾಗದ ಜನರಿಗಿಂತ ನಾವು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎನ್ನುವದನ್ನು ಸಾಧಿಸಿ ತೋರಿಸಬೇಕಾಗಿದೆಯೆಂದು ನುಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಮಂಜುಳಾ ಪಾಟೀಲ ಮಾತನಾಡಿ, ವೆಂಕಟಪ್ಪ ನಾಯಕ, ಸರ್ದಾರ್ ಶರಣಗೌಡ ಇನಾಮದಾರ, ಸ್ವಾಮಿ ರಮಾನಂದ ತೀರ್ಥರು, ಧರ್ಮವೀರ ನೆಲೋಗಿಯಂತಹ ಅನೇಕ ಮಹನೀಯರ ಹೋರಾಟದ, ಸರ್ದಾರ ವಲ್ಲಭವಾಯಿ ಪಟೇಲ್ ಅವರಂಥಹ ಶ್ರಮದ ಫಲವಾಗಿ ನಮ್ಮ ಪ್ರದೇಶ ವಿಮೋಚನೆ ಹೊಂದಿತು. ಇಂಥಹ ಮಹನೀಯರ ಸ್ಮರಣೆ ಅಗತ್ಯವಾಗಿದೆಯೆಂದರು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಪಂಡಿತರಾವ ಬೇರನ್, ಸಿಬಿಸಿ ಉಪಾಧ್ಯಕ್ಷ ಧನಂಜಯರಾವ ಕುಲಕರ್ಣಿ, ಸದಸ್ಯರಾದ ವಿಜಯಕುಮಾರ ತುಪ್ಪದ, ಜಯರಾಜ ಮುದಿರಾಜ, ಅರ್ಜುನ ರಾಠೋಡ, ಪ್ರಮುಖರಾದ ಭೀಮಾಶಂಕರ ತೊನಸಳ್ಳಿ, ನಾಗರಾಜ ಮನ್ನಾಪೂರ, ಬಸವರಾಜ ಮಾಡಬೂಳ್, ಕಾಶಿನಾಥ ಕಾಳಗಿ, ಉಪನ್ಯಾಸಕರಾದ ಮಲ್ಲಿಕಾರ್ಜುನ ಕಡ್ಲಾ, ವಸುಂಧರಾ ದೇಶಪಾಂಡೆ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಸಿಬಿಸಿ ಪದಾಧೀಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here