ಸುರಪುರ: ಇಲ್ಲಿಯ ತಹಸಿಲ್ದಾರ್ ಕಚೇರಿಯಲ್ಲಿನ ಸುರಪುರ ವಿಧಾನಸಭಾ ಉಪ ಚುನಾವಣೆಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಿ.ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರ ರಾಜಾ ವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಸಿದರು.ಒಂದೇ ಬಾರಿಗೆ ಎರಡು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ನಮಪತ್ರಕ್ಕೆ ಸೂಚಕರಾಗಿ ರಾಜಶೇಖರಗೌಡ ಹಾಗು ಭೀಮರಾಯ ಅವರು ಸಹಿ ಮಾಡಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ರಾಜಶೇಖರ,ಚಂದ್ರಶೇಖರ ದಂಡಿನ್,ವೆಂಕಟೇಶ ಹೊಸ್ಮನಿ,ಅಬ್ದುಲ್ ಗಫೂರ್ ನಗನೂರಿ,ಭೀಮರಾಯ ಮೂಲಿಮನಿ,ರವಿಚಂದ್ರ ಸಾಹುಕಾರ,ದಾನಪ್ಪ ಕಡಿಮನಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ 1,15,42,316 ರೂಪಾಯಿಗಳ ಮೌಲ್ಯದ ಆಸ್ತಿ ವಿವರ ನಾಮಪತ್ರದೊಂದಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಮಾತನಾಡಿ,ನಮ್ಮ ಸರಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ತಂದೆ ದಿ.ರಾಜಾ ವೆಂಕಟಪ್ಪ ನಾಯಕ ಅವರು ಮಾಡಿರುವ ಅಭಿವೃಧ್ಧಿ ಕಾರ್ಯಗಳಿಗೆ ಕ್ಷೇತ್ರದಲ್ಲಿ ಜನರು ತುಂಬಾ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಅಲ್ಲದೆ ಎಲ್ಲಿಯೇ ಪ್ರಚಾರಕ್ಕೆ ಹೋಗುವಾಗ ನನ್ನ ಜೊತೆಯಲ್ಲಿ ನಮ್ಮ ತಂದೆಯವರು ಇದ್ದಾರೆ ಎನ್ನುವ ಭಾವನೆಯಲ್ಲಿ ಹೋಗುತ್ತೇನೆ,ಜನರು ಕೂಡ ನಮ್ಮ ತಂದೆಗೆ ತೋರಿಸಿದಂತ ಬೆಂಬಲವನ್ನೆ ನೀಡುತ್ತಿದ್ದಾರೆ,ಈ ಹಿಂದೆ ನಮ್ಮ ತಂದೆಯ ಚುನಾವಣೆ ಸಂದರ್ಭದಲ್ಲಿ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಿದ್ದೆ,ಈಗ ನನ್ನ ಚುನಾವಣೆಗೂ ಜನರು ನಮ್ಮ ತಂದೆಗೆ ನೀಡಿದಷ್ಟೆ ಬೆಂಬಲ ಉತ್ಸಾಹ ತೋರುತ್ತಿರುವುದು ನೋಡಿದಾಗ ಗೆಲುವು ಗ್ಯಾರಂಟಿ ಎನ್ನುವ ಖಾತರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ರಾಜಾ ಸಂತೋಷ ಕುಮಾರ ನಾಯಕ,ಹಣಮಂತ್ರಾಯ ಮಕಾಶಿ,ವೆಂಕಟೇಶ ದಳವಾಯಿ ಸೇರಿದಂತೆ ಅನೇಕರಿದ್ದರು.