ಸುರಪುರ: ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ಘಟಕ ಮತ್ತು ಶ್ರೀ ಶ್ರೀ ರೂರಲ್ ಡೆವಲಪ್ಮೆಂಟ್ ಪ್ರೋಗ್ರಾಮ್(ಎಸ್.ಎಸ್.ಆರ್.ಡಿ.ಪಿ) ವತಿಯಿಂದ ಯುವಕ/ಯುವತಿಯರಿಗಾಗಿ ಕೌಶಲ್ಯಾಭಿವೃಧ್ಧಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಸಂಯೋಜಕಿ ಶಿಲ್ಪಾ ಆವಂಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ,ಯಾದಗಿರಿ ಜಿಲ್ಲೆ ಸೇರಿದಂತೆ ಕರ್ನಾಟಕದ ಯುವಕ/ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ತರಬೇತಿಯಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ಆರ್ಥಿಕವಾಗಿ,ಸಾಮಾಜಿಕವಾಗಿ,ಮಾನಸಿಕವಾಗಿ,ಸಮಾಜದ ಹಿತಕ್ಕಾಗಿ ಪ್ರೇರಣೆಯಾಗಲು ಇದೊಂದು ಉತ್ತಮವಾದ ಸುವರ್ಣಾವಕಾಶವಾಗಿದ್ದು ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಕೌಶಲ್ಯಾಭಿವೃಧ್ಧಿಯಲ್ಲಿ ಸೋಲಾರ್ ಮತ್ತು ಎಲೆಕ್ಟ್ರೀಕಲ್ ಟ್ರೈನಿಂಗ್,ಮೊಬೈಲ್ ರಿಪೇರಿ,ಡ್ರೋಣ್ ಟ್ರೈನಿಂಗ್,ಕಂಪ್ಯೂಟರ್ ಟ್ರೈನಿಂಗ್,ಮಾಡರ್ನ್ ಕಾರ್ಪೆಂಟ್ರ್ ಟ್ರೈನಿಂಗ್,ಬ್ರಿಡ್ಜ್ ಪ್ರೋಗ್ರಾಮ್,ಡಿ.ಜಿ.ಮೆಕ್ಯಾನಿಕಲ್ ಪ್ರೋಗ್ರಾಮ್,3ಡಿ ಡಿಜಿಟಲ್ ಪ್ರಿಂಟಿಂಗ್ ಮುಂತಾದ ಸುಮಾರು 30ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳು ಹೊಂದಿವೆ,ತರಬೇತಿ ಪೂರ್ಣಗೊಂಡ ನಂತರ ಪ್ರಮಾಣ ಪತ್ರವನ್ನು ಮತ್ತು ಉದ್ಯೋಗವನ್ನು ನೀಡಲಾಗುತ್ತದೆ ಅಥವಾ ಸ್ವಂತ ಉದ್ಯೋಗವನ್ನು ಕೈಗೊಳ್ಳಬಹುದು,ಎಲ್ಲಾ ತರಬೇತಿ ಕಾರ್ಯಕ್ರಮಗಳು ಊಟ ವಸತಿಯೊಂದಿಗೆ ಲಭ್ಯವಿದೆ ಎಂದು ತಿಳಿಸಿದರು.
ತರಬೇತಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟನ್ರ್ಯಾಷನಲ್ ಸೆಂಟರ್,21ನೇ ಕಿ.ಮೀ,ಕನಕಪುರ ರೋಡ್ ಉದಯಪುರ ಬೆಂಗಳೂರ ಇಲ್ಲಿ ನಡೆಯಲಿದೆ.ಆಸಕ್ತರು ಮೋ:7337798811 ಸಂಪರ್ಕಿಸಬಹುದು ಎಂದು ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಸಂಯೋಜಕಿ ಶಿಲ್ಪಾ ಆವಂಟಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.