“ಏಪ್ರಿಲ್ 21ಕ್ಕೆ ಸರ್ವಜ್ಞ ಸ್ಕಾಲರ್‍ಶಿಪ್ ಅಡ್ಮಿಶನ್ ಟೆಸ್ಟ್”

0
21

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿಯೇ ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ನೀಡುತ್ತಾ ಫಲಿತಾಂಶದಲ್ಲಿ ಪ್ರಗತಿಯ ಕಡೆಗೆ ಸಾಗುತ್ತಿರುವ, ಈ ವರ್ಷ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಹಾಗೂ ಕಲ್ಯಾಣ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ಪ್ರಥಮ ರ್ಯಾಂಕ್ ಪಡೆದ ಸರ್ವಜ್ಞ ಶಿಕ್ಷಣ ಸಂಸ್ಥೆಯ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜು ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಸರ್ವಜ್ಞ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಸರ್ವಜ್ಞ ಸ್ಕಾಲರ್‍ಶಿಪ್ ಅಡ್ಮಿಶನ್ ಟೆಸ್ಟ್ ನಡೆಯಲಿದೆ ಎಂದು ಪ್ರೊ. ಚನ್ನಾರಡ್ಡಿ ಪಾಟೀಲ ತಿಳಿಸಿದ್ದಾರೆ.

ಜಸ್ಟಿಸ್ ಶಿವರಾಜ ಪಾಟೀಲರ ಆಶೀರ್ವಾದ ಮತ್ತು ಅವರ ಆಶಯದಂತೆ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲರು, ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಅವರು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಪಿಯು ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕೆಂಬ ಹಂಬಲದೊಂದಿಗೆ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡಪ್ರತಿಭಾವಂತ ಮಕ್ಕಳಿಗೆ ರಿಯಾಯಿತಿ ಶುಲ್ಕದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ರವಿವಾರ ಏಪ್ರಿಲ್ 21ಕ್ಕೆ ಬೆಳಿಗ್ಗೆ 09:30 ರಿಂದ 10:30 ರವರೆಗೆ ಅಥವಾ ಸಾಯಂಕಾಲ 04 ಗಂಟೆಯಿಂದ 05 ಗಂಟೆವರೆಗೆ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಎಸ್‍ಎಸ್‍ಎಲ್‍ಸಿ/ಸಿಬಿಎಸ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಆಹ್ವಾನಿಸಲಾಗಿದೆ.

Contact Your\'s Advertisement; 9902492681

ಪರೀಕ್ಷೆ ಸುಸೂತ್ರವಾಗಿ ನಡೆಯಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಏಪ್ರಿಲ್ 14 ರಂದು ನಡೆದ ಪರೀಕ್ಷೆಯಲ್ಲಿ ಸಾವಿರಕ್ಕೂ ಹೆಚ್ಚು ಪರೀಕ್ಷೆ ಬರೆದಿದ್ದು, ಏಪ್ರಿಲ್ 21ಕ್ಕೆ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯುತ್ತಮ ಅಂಕ ಪಡೆದ 100 ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ ನೀಡಲಾಗುವುದು ಹಾಗಾಗಿ ಈ ಕೊನೆಯ ಸದಾವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸರ್ವಜ್ಞ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಅತ್ಯುತ್ತಮ ವೈದ್ಯರು, ಇಂಜಿನಿಯರರು, ಕೃಷಿಪಂಡಿತರು, ರಾಷ್ಟ್ರನಿರ್ಮಾತೃ ಶಿಕ್ಷಕರಾಗಿ ರೂಪುಗೊಂಡಿದ್ದಾರೆ. ಉನ್ನತ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಪಡೆದು ಅನೇಕ ಆಂಗ್ಲ ಹಾಗೂ ಕನ್ನಡ ಮಾಧ್ಯಮದ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳೂ ಕೂಡ ನಗರ ವಿದ್ಯಾರ್ಥಿಗಳೊಂದಿಗೆ ಸರಿಸಮನಾಗಿ ಸರ್ವಜ್ಞ ಕಾಲೇಜಿನಲ್ಲಿ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಸರ್ವಜ್ಞ ಸ್ಕಾಲರ್‍ಶಿಪ್ ಅಡ್ಮಿಶನ್ ಟೆಸ್ಟ್‍ಗೆ ನೋಂದಾಯಿಸಲು 9844488138 ಅಥವಾ 8050057184ಗೆ ಎಸ್‍ಎಮ್‍ಎಸ್ ಅಥವಾ ಕರೆಮಾಡಲು ಸೂಚಿಸಲಾಗಿದೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here