ಕಲಬುರಗಿ: ಕಳೆದೆರಡುವರೆ ದಶಕದಿಂದ ಈ ಭಾಗದಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಶಹಾಬಾದ ತಾಲೂಕಿನ ತೊನಸನಹನಳ್ಳಿ (ಎಸ್.) ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ವತಿಯಿಂದ ಕೊಡಮಾಡುವ ಕಾಯಕ ರತ್ನ ಪ್ರಶಸ್ತಿಯನ್ನು ಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಗಳವರು ನೀಡಿ ಗೌರವಿಸಿದರು.
ಎಲೆಮರೆಯ ಕಾಯಿಯಂತೆ ಅಲ್ಲಲ್ಲಿ ಅಡಗಿದ ಪ್ರತಿಭೆಗಳನ್ನು ಹುಡುಕಿ ಅವರಿಗೆ ವೇದಿಕೆ ನೀಡಿ, ಗೌರವಿಸಿ ಮುಖ್ಯ ವಾಹಿನಿಗೆ ಪರಿಚಯಿಸುವ ಕಾರ್ಯ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಕಳೆದ ಸುಮಾರು ವರ್ಷಗಳಿಂಡ ಮಾಡುತ್ತಾ ಬರುತ್ತಿದ್ದಾರೆ. ತೇಗಲತಿಪ್ಪಿ ಅವರ ಕಾರ್ಯಕ್ರಮಗಳ ಪ್ರವಾಹ ನಿತ್ಯ ನಿರಂತರವಾಗಿ ಹರಿಯುತ್ತಿರುವುದನ್ನು ಕಂಡ ಜಿಲ್ಲೆಯ ಜನತೆ ಇವರನ್ನು ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಬತ್ತದ ಉತ್ಸಾಹ ಕನ್ನಡಕ್ಕಾಗಿ ದುಡಿಯಬೇಕೆಂಬ ಉತ್ಕಟ ಹಂಬಲಕ್ಕೆ ಜನರು ಬೆಂಬಲವಾತಿ ನಿಂತು ಕನ್ನಡ ಕಟ್ಟುವ ಕಾಯಕದಲ್ಲಿ ಜೊತೆಗಿದ್ದು ಸಹಕರಿಸುತ್ತಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಮೆಚ್ಚು ಮಾತುಗಳು ಮತ್ತು ಚುಚ್ಚು ಮಾತುಗಳಿಗೆ ಹೆಚ್ಚಿನ ಗಮನ ಹರಿಸದೆ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿರುವ ಕಾರಣಕ್ಕಾಗಿ ಶ್ರೀಮಠದ ವತಿಯಿಂದ ಗುರುವಾರ ಶ್ರೀಮಠದ ಆವರಣದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ತೇಗಲತಿಪ್ಪಿ ಅವರಿಗೆ `ಕಾಯಕ ರತ್ನ’ ಪ್ರಶಸ್ತಿಯನ್ನು ನೀಡಿ ಆಶೀರ್ವಾದಿಸಿದರು.