ಆಳಂದ: ಬಟ್ಟರಗಾ ಗ್ರಾಮದ ಹಿಂದೂ-ಮುಸ್ಲಿಂ ಭಾಂದವರ ಆರಾಧ್ಯ ದೇವರಾದ ಹಜರತ್ ಸೈಯದ ಹುಸೇನಿ ಶಾಹವಲಿ ಉರ್ಪ ಮೌಲಾ ಅಲಿ ಜಾತ್ರೆಯೂ ಏ28 ರಿಂದ ಏ30 ವರೆಗೆ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ಪರವಾಗಿ ನಬೀಸಾಬ ಮುತ್ಯಾ ಅವರು ತಿಳಿಸಿದ್ದಾರೆ.
5028 ರಂದು ಗುರುವಾರ ಪಟ್ಟಣದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜಾತ್ರೆಯನ್ನು ವಿಭ್ರಂಮಣೆಯಿಂದ ನಡೆಯಲಿದ್ದು, ಧಂಗಾಪೂರ ಗ್ರಾಮದ ಮಾಜಿ ಶಾಸಕ ದಿ. ಶರಣಬಸಪ್ಪ ಮಾಲಿ ಪಾಟೀಲ್ ಅವರ ಮನೆಯಿಂದ ಗಂಧ ಹೊರಟು ಸಾಹೇಬರ ಮನೆಗೆ ತಲುಪಿ ಇಡೀ ರಾತ್ರಿ ವಿವಿಧ ಸಂಸ್ಕೃತಿಕ ಬೆಳಗಿನ ಕಾರ್ಯಕ್ರಮಗಳೊಂದಿಗೆ ಜಾವ 04.30ಕ್ಕೆ ದರ್ಗಾದ ಪೀಠಾಧಿಪತಿ ಸೈಯದ ಬಾಷಾ ಹುಸೇನಿ ಉರ್ಪ ಸೈಯದ ಋತುಬಿ ಹುಸೇನಿ ಸಜ್ಜಾದಾ ಹಸ್ತದಿಂದ ಗಂಧ ಲೇಪನ ಜರುಗಲಿದೆ.
29 ಸೋಮುವಾರದಂದು ದೀಪ ಬೆಳಗುವ ಕಾರ್ಯಕ್ರಮ, 30 ಮಂಗಳವಾರ ಜೀಯಾರತ ನಂತರ ಪ್ರಸಾದ ವಿತರಣೆ, ಸಾಯಂಕಾಲ 05 ಗಂಟೆಗೆ ಜಂಗೀ ಪೈಲ್ವಾನರ ಕುಸ್ತಿಗಳು, ದೀಪ ಮತ್ತು ಕುಸ್ತಿ ದಿವಸ ಗೀಗೀ, ಕವಾಲಿಗಳು ಇನ್ನಿತರ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಆಂಧ್ರಪ್ರದೇಶ, ಸೇರಿದಂತೆ ಮಹಾರಾಷ್ಟ್ರ ವಿವಿಧ ಭಾಗಗಳಿಂದ ಭಕ್ತಾಧಿಗಳು ದರ್ಶನ ಪಡೆಯಲಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಗ್ರಾಮಗಳ ಜಾತ್ರೆಯಲ್ಲಿ ಪಾಲ್ಗೊಂಡು ಭಾಷಾ ಮುತ್ಯಾ ಅವರ ದರ್ಶನ ಪಡೆಯಬೇಕೆಂದು ಅವರು ಹೇಳಿದಾರೆ.