ಸುರಪುರ: ಯಾವುದೆ ಮತದಾರ ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ ಅಥವಾ ಯಾವುದೆ ದೋಷವಿದ್ದರೆ ಅದನ್ನು ಸ್ವತಾ ಮತದಾರನೆ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಹಸೀಲ್ದಾರ ಸುರೇಶ ಅಂಕಲಗಿ ತಿಳಿಸಿದರು.
ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿ ಮಾತನಾಡಿ,ಚುನಾವಣಾ ಗುರುತಿನ ಚೀಟಿಯಲ್ಲಿನ ದೋಷ,ಮತದಾರರ ವಿಳಾಸ ಬದಲಾವಣೆ,ಮತದಾರರ ಹೆಸರು ಸೇರ್ಪಡೆ ಅಥವಾ ಹೆಸರು ಮತದಾರ ಪಟ್ಟಿಯಿಂದ ತೆಗೆಯುವುದು ಸೇರಿದಂತೆ ಯಾವುದೆ ಮತದಾರರ ದೂರನ್ನು ಈ ಮೊಬೈಲ್ ಯಾಪ್ ಮೂಲಕ ಸಲ್ಲಿಸಬಹುದು.ಪ್ರತಿಯೊಬ್ಬರು ಈ ಯಾಪ್‌ನ್ನು ತಮ್ಮ ಮೊಬೈಲಲ್ಲಿ ಅಳವಡಿಸಿಕೊಂಡರೆ ತಮ್ಮ ಮತ ಪಟ್ಟಿಯನ್ನು ಮತ್ತು ಮತದಾರರ ಪಟ್ಟಿಯಲ್ಲಿನ ಅಥವಾ ಗುರುತಿನ ಚೀಟಿಯಲ್ಲಿನ ದೋಷವನ್ನು ಗುರುತಿಸಲು ಸಹಾಯವಾಗುತ್ತದೆ.ಆದ್ದರಿಂದ ಎಲ್ಲರು ತಮ್ಮ ಮೊಬೈಲ್‌ನಲ್ಲಿ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಬಿಇಒ ನಾಗರತ್ನ ಓಲೆಕಾರ,ಕಂದಾಯ ನಿರೀಕ್ಷಕ ಗುರುಬಸಪ್ಪ,ಉಪನ್ಯಾಸಕ ಸುರೇಶ ಮಾಮಡಿ, ವಿಎ ಪ್ರದೀಪ ನಾಲ್ವಡೆ,ವೆಂಕಟೇಶ ಭಕ್ರಿ,ಗೃಹರಕ್ಷಕ ದಳದ ವೆಂಕಟೇಶ ಸುರಪುರ,ಭೀಮರಾಯ ಯಾದವ,ಬಸವರಾಜ ಮೇದಾರ,ರಡ್ಡಿ ದೇವರಬಾವಿ ಸೇರಿದಂತೆ ಅನೇಕರಿದ್ದರು.