ಹುಬ್ಬಳ್ಳಿಯ ಯುವತಿ ಕೊಲೆ ಪ್ರಕರಣ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

0
74

ಕಲಬುರಗಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಹುಬ್ಬಳ್ಳಿಯಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಚ್ಚಿ ಕೊಂದು ಹಾಕಿದ ಘಟನೆಯನ್ನು ತೀವ್ರವಾಗಿ ಖಂಡಿಸಿ. ಅಪರಾಧಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರಾದರೂ ತಕ್ಷಣವೇ ಕಾನೂನಿನ ಪ್ರಕ್ರಿಯೆ ನಡೆಸಿ ಕೊಲೆಗಡುಕನನ್ನು ಉಗ್ರವಾದ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘಟನೆಯ ರಾಜ್ಯ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ಕೆ ನೀಲಾ ಜಂಟಿಯಾಗಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂಥ ಬರ್ಬರಿಕ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಶಿಕ್ಷೆ ನೀಡುವಲ್ಲಿ ವಿಳಂಬ ಮಾಡಬಾರದು. ಯುವತಿಯ ಕುಟುಂಬದ ಜೊತೆ ಮಹಿಳಾ ಸಂಘಟನೆ ನಿಲ್ಲುತ್ತದೆ. ಯುವಕ ಮತ್ತು ಯುವತಿ ಪರಸ್ಪರ ಪರಿಚಿತರು ಎಂದು ಮಾಧ್ಯಮಗಳ ವರದಿ ಇದೆ. ವಿವಾಹವಾಗಲು ನಿರಾಕರಿಸಿದಳೆಂದು ಕೊಲೆಯಾಗಿದೆ ಎನ್ನಲಾಗಿದೆ. ಇಲ್ಲಿ ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಪಾಳೆಯಗಾರಿ ಮನೋಭಾವ ಕಣ್ಣಿಗೆ ರಾಚುತ್ತಿದೆ. ಮಹಿಳೆಯೊಬ್ಬಳ ಆಯ್ಕೆ ಸ್ವಾತಂತ್ರ್ಯ ಅಥವಾ ನಿರಾಕರಣೆಯ ಸ್ವಾತಂತ್ರ್ಯ ವನ್ನು ಒಪ್ಪದ ಈ ತೆರನ ದಾರ್ಷ್ಟ್ಯ ಎಲ್ಲೆಲ್ಲೂ ಕಾಣ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಇದನ್ನು ಹೀನ ಅಪರಾಧವನ್ನಾಗಿ ಪರಿಗಣಿಸಬೇಕು. ಮತ್ತು ಅಪರಾದಕ್ಕೆ ತಕ್ಕ ಶಿಕ್ಷೆಗೆ ಗುರಿಪಡಿಸುವಲ್ಲಿ ಯಾವುದೇ ಹಿಂದೇಟು ಹಾಕಬಾರದು ಎಂದು ತಿಳಿಸಿದ್ದಾರೆ.

ಇಂಥ ಘಟನೆಗಳಿಗೆ ಧರ್ಮ ಜಾತಿಗಳ ಬಣ್ಣ ಬಳೆದು ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳಬಾರದು. ಅಪರಾಧವನ್ನು ಅಪರಾಧವೆಂದು ಪರಿಗಣಿಸಿ ಕೊಲೆಗಡುಕನಿಗೆ ತಕ್ಷಣವೇ ಉಗ್ರವಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಘಟನೆಯ ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here