ನಾಳೆ ಮಹಾದಾಸೋಹೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವ

0
28

ಚಿತ್ತಾಪುರ: ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ದಿನಾಂಕ 28 ಏಪ್ರಿಲ್ 2024 ಸಾಯಂಕಾಲ 6:30ಕ್ಕೆ ಭವ್ಯ ರಥೋತ್ಸವ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ತಿಳಿಸಿದ್ದಾರೆ.

ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ವತಿಯಿಂದ ಶುಕ್ರವಾರ ಸಾಯಂಕಾಲ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,ದಿನಾಂಕ 24 ಬುಧವಾರದಿಂದ ನಂದಿ ಬಸವಣ್ಣ ಮೂರ್ತಿ ಸ್ಥಾಪನೆ ನಿಮಿತ್ತ ಪ್ರತಿ ಸಾಯಂಕಾಲ 5:30ಕ್ಕೆ ವಿಶೇಷ ಪೂಜೆ ಮತ್ತು ಹೋಮ ಕಾರ್ಯಕ್ರಮ ನಡೆಯುತ್ತಿದೆ.

Contact Your\'s Advertisement; 9902492681

ದಿ.28ರಂದು ರವಿವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಕಂಬಳೇಶ್ವರ ಸಂಸ್ಥಾನ ಮಠದಿಂದ ಕಳಸ ಮೆರವಣಿಗೆ ನಂತರ ಕಳಸಾರೋಹಣ ಹಾಗೂ ನಂದಿ ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಸಾಯಂಕಾಲ 4 ಗಂಟೆಗೆ ಪ್ರಭುರಾಜ್ ರೇಶ್ಮಿ ಇವರ ಮನೆಯಿಂದ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಹಾಗೂ ರಾಜಶೇಖರ್ ರೆಡ್ಡಿ ದೇಶಮುಕ್ ಮನೆಯಿಂದ ಕುಂಭದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯುವುದು ನಂತರ ಸಾಯಂಕಾಲ 6:30ಕ್ಕೆ ಭವ್ಯ ರಥೋತ್ಸವ ನಡೆಯಲಾಗುವುದು.

ರಥೋತ್ಸವದ ನಂತರ ಪಿಯುಸಿಯಲ್ಲಿ 90% ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಸನ್ಮಾನ ಸಮಾರಂಭ ನಂತರ ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕಾಳಗಿ, ಪುರಸಭೆ ಸದಸ್ಯ ಶ್ರೀನಿವಾಸ್ ರೆಡ್ಡಿ ಪಾಲಪ್ ಪ್ರಮುಖರಾದ ಬಸವರಾಜ ಹೂಗಾರ್, ಸಿದ್ದರಾಮಯ್ಯ ಗೊಂಬಿಮಠ್, ಸಂತೋಷ್ ಹಾವೇರಿ, ಪ್ರಲಾದ್ ವಿಶ್ವಕರ್ಮ, ಶಿವಲಿಂಗಪ್ಪ ಬೇನೂರ್, ಮಹಾದೇವ ಅಂಗಡಿ, ಶರಣು ಸೂಲಳ್ಳಿ ರುದ್ರಪ್ಪ, ರಾಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here