ನೇಕಾರರ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಸಂಸದ ಜಾಧವ್ ಗೆ ಮನವಿ

0
89

ಕಲಬುರಗಿ: ಪಿಎಂ ಮಿತ್ರ ಯೋಜನೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ, ನೇಕಾರರ ನಿರದ್ಯೋಗ ಸಮಸ್ಯೆ ಪರಿಹಾರ ದೊರಯುತದೆ, ಈ ಪ್ರದೇಶಕ್ಕೆ ಅನುಕೂಲವಾಗುವಂತೆ ಜಾರಿ ಗೊಳಿಸಲು ನೇಕಾರ ಪ್ರಕೋಷ್ಠ ದ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ ಕೋರಿದರು

ನೇಕಾರ ಕಚೇರಿಗೆ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರಿಗೆ ಸನ್ಮಾನಿಸಿ ಮಾತನಾಡಿದರು. ಬಿಜೆಪಿಯ ಹಿರಿಯ ಕಾರ್ಯಕರ್ತ ರೇವಣಸಿದ್ದಪ್ಪ ಗಡ್ಡದ ಮತ್ತು ನೇಕಾರ ಪ್ರಕೋಷ್ಠದ ಜೇ ಎಸ್. ವಿನೋದ ಕುಮಾರ ಸ್ವಾಗತಿಸಿದರು.

Contact Your\'s Advertisement; 9902492681

ಮುಂದಿನ ಜೂನ್ ನಲ್ಲಿ ಮತ್ತೆ ಸಂಸದರಾಗಿ ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ ಮಾಡಲು ನಾವು ಸಹಕರಿಸುತೇವೆ ಮತ್ತು ನಿಮ್ಮನ್ನು ಮತ್ತೆ  ಸಂಸದರನ್ನಾಗಿ ಆಯ್ಕೆ ಗೊಳಿಸಲು ಶ್ರಮಿಸಲು ಕೋರಿದ ಸಂಸದರು ಈ ಯೋಜನೆ ನನ್ನ ಜೀವನದ ಕನಸು, ಸಾಕಾರ ಗೊಳಿಸಲು ಮಾನ್ಯ ಬಸವರಾಜ ಬೊಮ್ಮಾಯಿ ನೇಕಾರ ಸಮುದಾಯವನ್ನು ಒಂದು ಕಣ್ಣು ಎಂದು ಪರಿಗಣಿಸಿ, ಪಕ್ಷದ ಘೋಷಣೆಯಂತೆ, ನೇಕಾರ  ಮತ್ತು ರೈತ ನಮ್ಮ ಎರಡು ಕಣ್ಣುಗಳು ಎಂದು ತಿಳಿದು ಸಹಕರಿಸಿದ್ದಾರೆ. ಅಲ್ಲದೆ ಮಾರ್ಚ್ ನಲ್ಲಿ ಶಂಖುಸ್ಥಾಪನೆ ಗೊಳಿಸಿದ್ದಾರೆ, ಅಲ್ಲದೆ ಮಾನ್ಯ ಪ್ರಧಾನ ಮಂತ್ರಿ ಗಳು ಕೂಡಾ ರಾಷ್ಟ್ರದ ನೇಕಾರರನ್ನು ಪ್ರೋತ್ಸಾಹಿಸಲು ಆಗಸ್ಟ್ 7 ಕೈಮಗ್ಗ ದಿನವನ್ನಾಗಿ ಆಚರಿಸಲು ಆದೇಶಿಸಿದ್ದಾರೆ ಎಂದು ಹೇಳಿದರು.

ಕೊನೆಯಲ್ಲಿ ಸತೀಶ ಜಮಖಂಡಿ ವಂದಿಸಿದರು. ನೇಕಾರ ಕಾರ್ಯಕರ್ತರ ಸಭೆಯಲ್ಲಿ ಕುಶಾಲ ಯಡವಳ್ಳಿ, ಮಲ್ಲಿನಾಥ ಕುಂಟೋಜಿ, ಚಂದ್ರಶೇಖರ್ ಮ್ಯಾಳಗಿ,  ಹಿರಿಯ ವಕೀಲ ವಿಜಯಕುಮಾರ್ ಪಾಟೀಲ್, ಕಮಲಾಪೂರ್ ನೇಕಾರ ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್ ಗೌಡಗೋಳ ಡಾ. ಬಸವರಾಜ ಚನ್ನಾ, ಶ್ರೀನಿವಾಸ ಬಲಪೂರ, ರಾಜು ಕೋಷ್ಟಿ, ಜೇನವೆರಿ ಶರಣ ಪ್ರಸಾದ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here