ಜನ ವಿರೋಧಿ ಸರ್ವಾಧಿಕಾರಿ ಬಿಜೆಪಿ ಸೋಲಿಸಿ: ಡಾ. ಕೆ. ಪ್ರಕಾಶ್

0
210

ಹಟ್ಟಿ: ಈ ಲೋಕಸಭಾ ಚುನಾವಣೆಯಲ್ಲಿ ಮುಂದಿನ ದಿನಗಳಲ್ಲಿ ದೇಶದ ಮೇಲೆ ಸರ್ವಾಧಿಕಾರ ಹಾಗೂ ಜಾತಿ ಮತ್ತು ಲಿಂಗ ತಾರತಮ್ಯ ಹೇರದಂತೆ ತಡೆಯಲು, ಸರ್ವಾಧಿಕಾರಿ ಹಾಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ. ಪ್ರಕಾಶ್ ಕರೆ ನೀಡಿದ್ದಾರೆ.

ಹಟ್ಟಿ ಪಟ್ಟಣದ ಪೈ ಭವನದಲ್ಲಿ ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬಿಜೆಪಿಯನ್ನು ಹೀನಾಯವಾಗಿ ಸೋಲಿಸುವುದು ಮಾತ್ರವಲ್ಲಾ ದುಡಿಯುವ ಜನತೆಯನ್ನು ಸಂಕಷ್ಟಕ್ಕೀಡು ಮಾಡಿರುವ ಜಾಗತೀಕರಣ,ಉದಾರಿಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಕೋಮು ಸೌಹಾರ್ಧತೆ, ಪ್ರಜಾಪ್ರಭುತ್ವ ರಕ್ಷಿಸಿಕೊಳ್ಳಲು ವ್ಯಾಪಕವಾದ ಬಲಿಷ್ಠ ಹೋರಾಟದಲ್ಲಿ ತೊಡಗಬೇಕು ಎಂದು ಸಿಪಿಐಎಂ ಹೇಳಿದೆ.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ದೇಶದ ಜನತೆ 250 ಲಕ್ಷ ಕೋಟಿ ರೂ. ಗಳಿಗೂ ಅಧಿಕ ಮೊತ್ತದ ತೆರಿಗೆ ನೀಡಿದೆ. ಮೇಲೆ 115 ಲಕ್ಷ ಕೋಟಿ ರೂ.ಗಳ ಸಾಲದ ಭಾರವನ್ನು ಹೊತ್ತಿದೆ. ಆದಾಗಲೂ ದೇಶ ಅಭಿವೃದ್ಧಿ ಕಾಣಲಿಲ್ಲ. ಈ ಆಡಳಿತದಲ್ಲಿ ಶ್ರೀಮಂತರು ಭಾರೀ ಶ್ರೀಮಂತರಾದರೆ ಬಡವರು ಕಡುಬಡವರಾಗಿದ್ದಾರೆ. ಈಗಲೂ ದೇಶದಲ್ಲಿ ಹಸಿವಿನ ಅಥವಾ ಅಪೌಷ್ಟಿಕತೆಯ ಸಾವುಗಳು ನಿಮಿಷಕ್ಕೆ 10 ರಂತೆ ಮುಂದುವರೆದಿವೆ. ದಿನಕ್ಕೆ 35 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 2 ನಿಮೊಷಕ್ಕಬ್ಬ ಮಹಿಳೆ ಮತ್ತು ಪ್ರತಿ 10 ನಿಮಿಷಕ್ಕೊಬ್ಬ ದಲಿತ ದೌರ್ಜನ್ಯಕ್ಕೊಳಗಾಗುತ್ತಿದ್ದಾನೆ. ಕೋಮುವಾದಿ ಶಕ್ತಿಗಳು ಅಲ್ಪ ಸಂಖ್ಯಾತರ ಮೇಲೆ ವ್ಯಾಪಕ ದೌರ್ಜನ್ಯ ನಡೆಸುತ್ತಿವೆ ಎಂದರು.

ನಮ್ಮ ಹಿರಿಯರ ಅಪಾರ ತ್ಯಾಗ ಬಲಿದಾನಗಳಿಂದ ಬ್ರಿಟಿಷರನ್ನು ಮತ್ತು 500 ಸಂಸ್ಥಾನಗಳ ರಾಜಪದ್ದತಿಯ ವಿರುದ್ಧ ಹೋರಾಡಿ ಪಡೆದ ಈ ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಇಂದು ಬೆಳೆಯುತ್ತಿರುವ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಹಿಂದುತ್ವವಾದಿಗಳಿಂದ ಅಪಾಯದಲ್ಲಿವೆ ಎಂದು ವಿವರಿಸಿದರಲ್ಲದೆ ಅವುಗಳನ್ನು ಉಳಿಸಿಕೊಳ್ಳಲು ಬಿಜೆಪಿಯನ್ನು ಸೋಲಿಸಬೇಕು ಇದಕ್ಕಾಗಿ ಇಂಡಿಯಾ ಕೂಟದ ಅಭ್ಯರ್ಥಿ ಯನ್ನು ಗೆಲ್ಲಿಸುವುದು ಅಗತ್ಯವಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಕೆಜಿ ವೀರೇಶ್ ಮಾತನಾಡಿ ಅಚ್ಚೆ ದಿನ್ ಬರುತ್ತದೆ ಎಂದು ಹೇಳುತ್ತಲೆ. ಬೆಲೆ ಏರಿಕೆ ಮಾಡಿ ಜನರ ಬದುಕನ್ನು ದಿವಾಳಿ ಮಾಡಲಾಗಿದೆ ಎಂದರು.

ಲಿಂಗಸಗೂರು ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಪ್ರಾಸ್ತಾವಿಕವಾಗಿ ಮಾತನಾಡಿ,
ಧರ್ಮ ಆಧಾರದಲ್ಲಿ ಜಾತಿ ಜಗಳ, ಕೋಮು ಗಲಭೆಗಳ ಮೂಲಕ ದೇಶ ಹೊಡೆಯಲು ಯತ್ನಿಸುತ್ತಿವೆ. ಅಮರೇಶ್ವರ ನಾಯಕ ಕ್ಷೇತ್ರದ ಯಾವ ಊರಿಗೂ ಭೇಟಿ ನೀಡಿಲ್ಲ. ಜನರ ಮತ್ತು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿಲ್ಲ. ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ರಾಜಕಾರಣ ಮಾಡುತ್ತಿದ್ದಾರೆ. ಇವರನ್ನು ಈ ಬಾರಿ ಸೋಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗೋಣ ಎಂದರು.

ಈ ಸಂದರ್ಭದಲ್ಲಿ ಸಿಪಿಐ ಎಂ ಹಟ್ಟಿ ಶಾಖೆಯ ಕಾರ್ಯದರ್ಶಿ ಸಂಗಪ್ಪ ಸಾಗರದ್, ಸದಸ್ಯರಾದ ಅಮಿನುದ್ದಿನ್ ಸಾಶಿಹಾಳ, ಪೆಂಚಲಯ್ಯ, ನಿಂಗಪ್ಪ, ದಾವೂದ್, ನಾಗಮ್ಮ, ಯಂಕಮ್ಮ ಸೇರಿದಂತೆ ಅನೇಕರು ಪಕ್ಷದ ಕಾರ್ಯಕರ್ತರು ಉಪಸ್ಥತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here