ಶಹಾಬಾದ: ದೇಶದ ಆರ್ಥಿಕ ಪರಿಸ್ಥಿತಿ, ಮೋದಿಯ ಜನಪರ ಯೋಜನೆಗಳು, ಇಡೀ ವಿಶ್ವದ ಗಮನಸೆಳೆದಿದ್ದು ದೇಶವನ್ನು ಮುನ್ನಡೆಸುವ ಏಕೈಕ ಶಕ್ತಿ ಮೋದಿಯವರಿಗಿದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲಾ ಅಲ್ಲದೆ ಕಲಬುರಗಿಯಿಂದ À ಡಾ.ಉಮೇಶ ಜಾಧವ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಅವರು ಬುಧವಾರ ಲೋಕಸಭಾ ಚುನಾವಣೆಯ ನಿಮಿತ್ತ ನಗರದ ಶಂಕರ-ಪಾರ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಆಯೋಜಿಸಲಾದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ವಿಶ್ವಮಟ್ಟದಲ್ಲಿ ಭಾರತವನ್ನು ವಿಶ್ವಗುರುನಾಗಿಸುವ ದೆಸೆಯಲ್ಲಿ ಪ್ರಧಾನಿ ಮೋದಿಯವರು ಕೈಗೊಂಡಿರುವ ರಾಜ ತಾಂತ್ರಿಕ ವಿಷಯಗಳಿಂದ ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದೆ.
ಮೋದಿಯವರ ಜನಪರ ಹಾಗೂ ಪಾರದರ್ಶಕ ಆಡಳಿತದ ಜತೆಗೆ ದೇಶದ ಸಂಸ್ಕøತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ, ಕೋಟ್ಯಂತರ ಜನರ ಆಶಯವಾಗಿದ್ದ ರಾಮ ಮಂದಿರ ನಿರ್ಮಾಣ ಸೇರಿ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ಲಕ್ಷ ಲೀಡ್ ಕೊಡುವ ಮೂಲಕ ಮೋದಿಯವರ ಕೈ ಬಲ ಪಡಿಸಲು ಶ್ರಮವಹಿಸಬೇಕಿದೆ ಎಂದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಮರ್ಥರು ಎಂಬುದು ದೇಶದ ಜನತೆಗೆ ಮನವರಿಕೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಜನಪರ ಆಡಳಿತವನ್ನು ಮೆಚ್ಚಿರುವ ದೇಶದ ಜನರು ಮತ್ತೇ ಮೋದಿ ಅವರನ್ನು ಪ್ರದಾನಿ ಮಾಡಲು ಮುಂದಾಗಿದ್ದಾರೆ.
ಅದೇ ರೀತಿ ಕರ್ನಾಟದಲ್ಲಿಯೂ ಸಹ ಮೋದಿ ಅಲೆ ಜೋರಾಗಿದೆ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಇಟ್ಟುಕೊಂಡು ಅಭಿವೃದ್ದಿ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದೆ. ಕಳೆದ 10 ತಿಂಗಳಆಡಳಿತ ಶೂನ್ಯವಾಗಿದೆ. ರೈತ ಪರವಾದ ಒಂದು ಯೋಜನೆಯನ್ನು ಜಾರಿ ಮಾಡಿಲ್ಲ. ಆದ್ದರಿಂದ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರಿಗೆ ಮತನೀಡಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ವಿರೋದಪಕ್ಷದ ಉಪನಾಯಕ ಸುನೀಲ ವಲ್ಯಾಪೂರೆ ಮಾತನಾಡಿ, ದೇಶದ ಮುಂದಿನ ಭವಿಷ್ಯ ನೋಡಿಕೊಂಡು ಮತದಾನ ಮಾಡಿ. ಎಪ್ಪತ್ತು ವರ್ಷಗಳ ಅವಧಿಯಲ್ಲಿ ಮಾಡಲಾರದ ಸಾಧನೆಗಳನ್ನು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೇವಲ ಹತ್ತು ವರ್ಷಗಳ ಮೋದಿ ಸರಕಾರ ಮಾಡಿ ತೋರಿಸಿದೆ.ವಿಶ್ವಮೆಚ್ಚುವ ನಾಯಕನ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ, ಅಣವೀರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ, ಅರುಣ ಪಟ್ಟಣಕರ, ನಾಗರಾಜ ಮೇಲಗಿರಿ, ಅನೀಲ ಬೊರಗಾಂವಕರ, ಕಲ್ಲೋಳಿ ಕುಸಾಳೆ, ರವಿ ರಾಠೋಡ, ಜಗದೇವ ಸುಬೇದಾರ, ತಿಮ್ಮಾಬಾಯಿ ಕುಸಾಳೆ, ಪಾರ್ವತಿ ಪವಾರ, ಸಿದ್ರಾಮ ಕಂಸಾಳೆ, ದಿನೇಶ ಗೌಳಿ, ಮಹಾದೇವ ಗೊಬ್ಬೂರಕರ, ಚಂದ್ರಕಾಂತ ಗೊಬ್ಬೂರಕರ,ನಾರಾಯಣ ಕಂದಕೂರ, ಶಿವಕುಮಾರ ಇಂಗಿನಶೆಟ್ಟಿ,ಬಸವರಾಜ ಬಿರಾದಾರ ಸೇರಿದಂತೆ ಅನೇಕ ಮುಖಂಡರು, ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.
ದೇವದಾಸ ನಿರೂಪಿಸಿದರು, ನಿಂಗಣ್ಣ ಹುಳಗೋಳಕರ್ ಸ್ವಾಗತಿಸಿದರು, ಅಣವೀರ ಇಂಗಿನಶೆಟ್ಟಿ ಪ್ರಾಸ್ತಾವಿಕ ನುಡಿದರು, ಲತಾ ಸಂಜೀವ ವಂದಿಸಿದರು.