ಧರ್ಮ- ಅಧರ್ಮದ ಯುದ್ಧದ ಚುನಾವಣೆ: ಕಾಂಗ್ರೆಸ್‌ ಗೆದ್ದಾಗಲೇ ಧರ್ಮಗೆದ್ದಂತೆ | ಶಾಸಕ ಡಾ. ಅಜಯ್‌ ಸಿಂಗ್‌

0
15

ಕಲಬುರಗಿ: ಈ ಬಾರಿಯ ಲೋಕಸಭೆ ಚುನಾವಣೆ ಕೇವಲ ಚುನಾವಣೆ ಅಲ್ಲ, ಧರ್ಮ ಹಾಗೂ ಅಧಮ್ರದ ನಡುವಿನ ಯುದ್ಧ. ಈ ಯುದ್ಧದಲ್ಲಿ ಜೇವರ್ಗಿ ಜನತೆ ಧರ್ಮದ ಪರವಾಗಿರುವ ಕಾಂಗ್ರೆಸ್‌ನ ಕೈಗೆ ಶಕ್ತಿ ತುಂಬಬೇಕು ಎಂದು ಡಾ. ಅಜಯ್‌ ಸಿಂಗ್‌ ಕರೆ ನೀಡಿದರು.

ಕಲಬುರಗಿ ಲೋಕಸಭೆ ಕಾಂಗ್ರೆಸ್‌ ಪ್ರಚಾರ ನಿಮತ್ತ ನಿನ್ನೆಯ ಬುಧವಾರ ಜೇವರ್ಗಿಯಲ್ಲಿ ಬೃಹತ್‌ ಕಾಂಗ್ರೆಸ್‌ ಸಮಾವೇಶ ನಡೆದ ಬೆನ್ನಲ್ಲೇ ಗುರುವಾರ ಮತ್ತೆ ಜೇವರ್ಗಿ ತಾಲೂಕಿನ ಮಂದೇವಾಲದಲ್ಲಿ ಕಾಂಗ್ರೆಸ್‌ ಪಕ್ಷದಕಾರ್ಯಕರ್ತರ ಬೃಹತ್ ಸಮಾವೇಶ ಸಂಘಟಿಸಲಾಗಿತ್ತು.

ಯಶಸ್ವಿಯಾಗಿ ನಡೆದ, ಪಕ್ಷದ ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿದ್ದ ಬೃಹತ್ತಾಗಿರುವಂತಹ ಮಂದೇವಾಲ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಜೇವರ್ಗಿ ಶಾಸಕರು, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌, ಈ ಲೋಕ ಸಮರ ಬರೀ ಚುನಾವಣೆಯಲ್ಲ, ಧರ್ಮ, ಅಧರ್ಮದ ನಡುವಿನ ಸಮರ, ಇಲ್ಲಿ ಕಾಂಗ್ರೆಸ್‌ ಕೈ ಬಲಗೊಂಡಾಗಲೇ ಧರ್ಮ ಗೆದ್ದಂತೆ ಎಂದು ನೀವೆಲ್ಲರೂ ಅರಿಯಬೇಕಿದೆ, ಅದಕ್ಕೇ ಕೈ ಹಿಡಿಯಿರಿ, ಧರ್ಮದ ಕೈ ಹಿಡಿದಂತಾಗುತ್ತದೆ ಎಂದು ಕ್ಷೇತ್ರದ ಜನತೆಗೆ ಕರೆ ನೀಡಿದರು.

Contact Your\'s Advertisement; 9902492681

ಕೈ ಮುಗಿದು ಜೇವರ್ಗಿ ಮಹಾ ಜನತೆ ಮುಂದೆ ಕಾಂಗ್ರೆಸ್‌ ಪರ ಮತ ಯಾಚಿಸಿದ ಡಾ. ಅಜಯ್‌ ಸಿಂಗ್‌ ಅ‍ವರು ನುಡಿದಂತೆ ನಡೆದಿದ್ದೇವೆ, ಪಂಚ ಗ್ಯಾರಂಟಿ ನೀಡಿದ್ದೇವೆ, ಯೋಜನೆಯ ಫಲ ನಿಮ್ಮ ಮನೆ, ಮನ ತಲುಪಿದೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ನೀಡಿ ಗೆಲ್ಲಿಸಬೇಕು, ಆ ಮೂಲಕ ಖರ್ಗೆ ಅವರ ಕೈ ಬಲ ಪಡಿಸಬೇಕು ಎಂದರು.

2019 ರಲ್ಲಿ ನಾವು ಮಾಡಿದ ತಪ್ಪು ಮರುಕಳಿಸಬಾರದು, ಈ ಬಾರಿ ಕೈ ಬಲಪಡಿಸೋಣವೆಂದು ನೀವೆಲ್ಲರು ಸಂಕಲ್ಪ ಮಾಡಬೇಕು. ಅದು ಮುಂದೆ ಹೆಮ್ಮರವಾಗಿ ಬೆಳೆಯುತ್ತ ಸಾಗಬೇಕು. ದೇಶಾದ್ಯಂತ ಕಾಂಗ್ರೆಸ್‌ ಅಲೆ ಇದೆ ಎಂದರು.

ಕೇಂದ್ರದಲ್ಲಿ ಖರ್ಗೆ ಅವರು ಮಂತ್ರಿ ಆಗಿದ್ದಾಗ, ತಂದೆಯವರಾದ ಧರಮ್ ಸಿಂಗ್ ಅವರು ಸಂಸದ ರು ಆಗಿದ್ದಾಗ ಕಲಂ 371 ಜೆ ಜಾರಿಗೆ ತಂದರು. ಇದು ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಿದೆ, ಇವೆಲ್ಲ ಯೋಜನೆಗಳ ಹರಿಕಾರರು ಖರ್ಗೆಯವರು. ಅವರ ಕೈ ಬಲ ಪಡಿಸಲು ನಾವು ನೀವೆಲ್ಲರೂ ಕಾಂಗ್ರೆಸ್ ಪಕ್ಷ ಗೆಲ್ಲಿಸೋದು ತುಂಬಾ ಅಗತ್ಯ ವಾಗಿದೆ ಎಂದು ಕೈ ಜೋಡಿಸಿ ಅಜಯ್ ಸಿಂಗ್ ಅವರು ಸೇರಿದ್ದ ಗಾಣಿಗ ಸಮಾಜ ಸೇರಿದಂತೆ ಇದ್ದಂತಹ ಎಲ್ಲಾ ಸಮಾಜ ಬಾಂಧವರಲ್ಲಿ ಕೋರಿದರು. ಧರ್ಮ- ಅಧರ್ಮದ ಯುದ್ಧದಲ್ಲಿ ಧರ್ಮ ಗೆಲ್ಲಬೇಕು, ಕಾಂಗ್ರೆಸ್‌ ಗೆದ್ದಾಗಲೇ ಧರ್ಮ ಗೆದ್ದಂತೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದರು.

ವೇದಿಕೆಯಲ್ಲಿದ್ದ ಸವದಿಯವರ ಬಗ್ಗೆ ಮಾತನಾಡಿದ ಡಾ. ಅಜಯ್‌ ಸಿಂಗ್‌, ಸವದಿಯವರು ರಾಜಕೀಯದಲ್ಲಿ ಹಿರಿಯ. ಅ‍ವರು ಅದಾಗಲೇ ಡಿಸಿಎಂ ಆಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಅವರಿಗೆ ಮುಂದೆ ಕಾಂಗ್ರೆಸ್‌ ಪಕ್ಷದಲ್ಲೇ ಸಿಎಂ ಆಗುವ ಯೋಗವೂ ಬರಲಿ ಎಂದು ಶುಭ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here