ಕಲಬುರಗಿಯಲ್ಲಿ 13,06,119 ಜನರಿಂದ ಮತದಾನ: ಶೇ.62.24ರಷ್ಟು ಮತದಾನ

0
29

ಕಲಬುರಗಿ: ಗುಲಬರ್ಗಾ ಲೋಕಸಭಾ (ಪ.ಜಾ) ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಮತದಾರರ ಪೈಕಿ 6,62,834 ಪುರುಷರು, 6,43,254 ಮಹಿಳೆಯರು ಹಾಗೂ 31 ಇತರೆ ಸೇರಿ ಒಟ್ಟು 13,06,119 ಜನ ಮತ ಚಲಾಯಿಸಿದ್ದು, ಅಂತಿಮವಾಗಿ ಶೇ.62.24 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

34-ಅಫಜಲಪೂರ ವಿಧಾನಸಭಾ ಕ್ಷೇತ್ರದಲ್ಲಿ 1,21,355 ಪುರುಷ, 1,15,917 ಮಹಿಳೆ, ಇತರೆ 20 ಸೇರಿ ಒಟ್ಟು 2,37,292 ಮತದಾರರಿದ್ದು, ಇದರಲ್ಲಿ 80,832 ಪುರುಷ, 74,198 ಮಹಿಳೆ, ಇತರೆ 4 ಸೇರಿ 1,55,034 ಮತದಾರರು ಮತ ಚಲಾಯಿಸಿದ್ದು, ಶೇ.65.33ರಷ್ಟು ಮತದಾನವಾಗಿದೆ.

Contact Your\'s Advertisement; 9902492681

35-ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ 1,25,373 ಪುರುಷ, 1,22,392 ಮಹಿಳೆ, ಇತರೆ 24 ಸೇರಿ ಒಟ್ಟು 2,47,789 ಮತದಾರರಿದ್ದು, ಈ ಪೈಕಿ 82,346 ಪುರುಷ, 76,301 ಮಹಿಳೆ, ಇತರೆ 6 ಸೇರಿ 1,58,653 ಜನ ಮತ ಮತದ ಹಕ್ಕು ಚಲಾಯಿಸಿದ್ದು, ಶೇ.64.03ರಷ್ಟು ಮತದಾನವಾಗಿದೆ.

39-ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 1,26,825 ಪುರುಷ, 1,28,386 ಮಹಿಳೆ, ಇತರೆ 6 ಸೇರಿ ಒಟ್ಟು 2,55,217 ಮತದಾರರಿದ್ದು, ಇದರಲ್ಲಿ 77,666 ಪುರುಷ, 78,482 ಮಹಿಳೆ, ಇತರೆ 2 ಸೇರಿ 1,56,150 ಮತ ಚಲಾಯಿಸಿದ್ದು, ಇಲ್ಲಿ ಶೇಕಡಾವಾರು ಮತದಾನ ಪ್ರಮಾಣ 61.18 ರಷ್ಠಾಗಿದೆ.

40-ಚಿತ್ತಾಪೂರ ವಿಧಾನಸಭಾ ಕ್ಷೇತ್ರದಲ್ಲಿ 1,23,063 ಪುರುಷ, 1,23,910 ಮಹಿಳೆ, ಇತರೆ 16 ಸೇರಿ ಒಟ್ಟು 2,46,989 ಮತದಾನಕ್ಕೆ ಅರ್ಹತೆ ಪಡೆದಿದ್ದು, ಇದರಲ್ಲಿ 75,508 ಪುರುಷ, 74,079 ಮಹಿಳೆ, ಇತರೆ 2 ಸೇರಿ 1,49,589 ಜನ ಮತ ಚಲಾವಣೆ ಮಾಡಿದ್ದು, ಶೇ.60.57ರಷ್ಟು ಮತದಾನವಾಗಿದೆ.

41-ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 1,14,179 ಪುರುಷ, 1,17,678 ಮಹಿಳೆ, ಇತರೆ 32 ಸೇರಿ ಒಟ್ಟು 2,31,889 ಮತದಾರರಿದ್ದು, ಈ ಪೈಕಿ 79,922 ಪುರುಷ, 79,378 ಮಹಿಳೆ, ಇತರೆ 3 ಸೇರಿ 1,59,303 ಜನ ಮತ ಚಲಾಯಿಸಿದ್ದಾರೆ. ಇಲ್ಲಿ ಮತದಾನ ಪ್ರಮಾಣ ಶೇ.68.70 ರಷ್ಟಾಗಿದೆ.

ಅದೇ ರೀತಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1,37,031 ಪುರುಷ, 1,31,585 ಮಹಿಳೆ, ಇತರೆ 35 ಸೇರಿ ಒಟ್ಟು 2,68,651 ಮತದಾರರಿದ್ದು, ಇದರಲ್ಲಿ 84,807 ಪುರುಷ, 80,883 ಮಹಿಳೆ, ಇತರೆ 3 ಸೇರಿ ಒಟ್ಟು 1,65,693 ಜನ ಮತ ಚಲಾಯಿಸಿದ್ದು, ಶೇ.61.68ರಷ್ಟು ಮತದಾನವಾಗಿದೆ.

44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,43,775 ಪುರುಷ, 1,47,283 ಮಹಿಳೆ, ಇತರೆ 55 ಸೇರಿ ಒಟ್ಟು 2,91,113 ಮತದಾರರಿದ್ದು, ಇದರಲ್ಲಿ 84,160 ಪುರುಷ, 83,274 ಮಹಿಳೆ, ಇತರೆ 4 ಸೇರಿ ಒಟ್ಟು 1,67,438 ಜನ ಮತ ಹಾಕಿದ್ದು, ಶೇ.57.52ರಷ್ಟು ಮತದಾನವಾಗಿದೆ.

45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1,58,358 ಪುರುಷ, 1,60,810 ಮಹಿಳೆ, ಇತರೆ 94 ಸೇರಿ ಒಟ್ಟು 3,19,262 ಮತದಾರರಿದ್ದು, ಈ ಪೈಕಿ 97,593 ಪುರುಷ, 96,659 ಮಹಿಳೆ, ಇತರೆ 7 ಸೇರಿ ಒಟ್ಟು 1,94,259 ಮತ ಚಲಾಯಿಸಿದ್ದು, ಇಲ್ಲಿ ಶೇ.60.85ರಷ್ಟು ಮತದಾನವಾಗಿದೆ.

ಕ್ಷೇತ್ರದಾದ್ಯಂತ ಲಿಂಗವಾರು ಮತದಾನ ಪ್ರಮಾಣ ನೋಡಿದಾಗ ಪುರುಷರು ಶೇ.63.13, ಮಹಿಳೆಯರು ಶೇ.61.38 ಹಾಗೂ ಇತರೆ ಶೇ.10.93 ರಷ್ಟು ಸೇರಿ ಒಟ್ಟಾರೆ ಶೇ.62.24 ಜನ ಮತದ ಹಕ್ಕು ಚಲಾಯಿಸಿದ್ದಾರೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here