ಕಲಬುರಗಿ: ‘ನಗರದ ಜೇವರ್ಗಿ ಕಾಲೊನಿಯ ಎನ್‌ಜಿಒ ಬಡಾವಣೆಯ ಮಾಕಾ ಲೇಔಟ್‌ನಲ್ಲಿ 891ನೇ ಬಸವ ಜಯಂತಿ ಪ್ರಯುಕ್ತ ಮೇ10ರಿಂದ 20ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಗಜ್ಯೋತಿ ಬಸವೇಶ್ವರಸೇವಾ ಸಮಿತಿ ಅಧ್ಯಕ್ಷ ಅಯ್ಯಣ್ಣ ನಂದಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 10ರಿಂದ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ ನಡೆಯುವ ಪ್ರವಚನ ಕಾರ್ಯಕ್ರಮವನ್ನು ಸಂಜಯ ಮಾಕಲ್ ಉದ್ಘಾಟಿಸುವರು. 10ರಂದು ಬೆಳಗ್ಗೆ 8 ಗಂಟೆಗೆ ಷಟಸ್ಥಲ ಧ್ವಜಾರೋಹಣ, 8.10ಕ್ಕೆ ಬಸವ ಮಂಟಪ ಉದ್ಘಾಟನೆ, 8.20ಕ್ಕೆ ಬಸವ ಪುತ್ಥಳಿ ಅನಾವರಣ ಆಗಲಿದೆ. 8.30ಕ್ಕೆ ವಚನ ವಾಚನಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.
8.40ಕ್ಕೆ ನಡೆಯುವ ರಕ್ತದಾನ ಶಿಬಿರವನ್ನು ಪ್ರೊ. ಬಾಬುರಾವ ಶೇರಿಕಾರ ಉದ್ಘಾಟಿಸುವರು. ನೀಲಮ್ಮನ ಬಳಗ ಶರಣೆಯರಿಂದ ವಚನಗಳ ಹಾಗೂ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. 9 ಗಂಟೆಗೆ ಬಸವ ತೊಟ್ಟಿಲು ಕಾರ್ಯಕ್ರಮ ಆಯೋಜಿಸಿದ್ದು, ಮೇ11ರಿಂದ 20ರವರೆಗೆ ಯೋಗ ಗುರು ನಿರಂಜನ ದೇವರಿಂದ ಉಚಿತ ಯೋಗ ಶಿಬಿರ ನಡೆಯಲಿದೆ ಎಂದು ಹೇಳಿದರು.
ಪರಮೇಶ್ವರ ಶೆಟಗಾರ, ಹಣಮಂತ ಐನೋಳ್ಳಿ, ಡಾ.ಸಂಜೀವಕುಮಾರ ಶೆಟಗಾರ, ಶಿವಕುಮಾರ ಧರ್ಮಗೊಂಡ, ಬಾಬುರಾವ ಶೇರಿಕಾರ ಇತರರು ಇದ್ದರು.