ಶಹಾಬಾದ: ರೈತ ಬಾಂಧವರು ಪಹಣಿಗೆ ಆಧಾರ್ ಜೊಡಣೆ ಕಡ್ಡಾಯ

0
36

ಶಹಾಬಾದ: ತಾಲೂಕಿನ ರೈತ ಬಾಂಧವರು ಸರರದ ನಿರ್ದೇಶನದಂತೆ ತಮ್ಮ ಜಮೀನಿನ ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡುವದು ಕಡ್ಡಾಯವಾಗಿದೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹಾಗೂ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ತಿಳಿಸಿದ್ದಾರೆ.

ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ಆರ್.ಟಿ.ಸಿ ಗೆ ತಮ್ಮ ಆಧಾರ್ ಕಾರ್ಡ ಸಂಖ್ಯೆ ಜೋಡಿಸಬೇಕು ಇದಕ್ಕಾಗಿ ಸರ್ಕಾರದ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿದೆ. ಇದನ್ನು ತಮ್ಮ ಮೊಬೈಲ್ ನಿಂದಲೇ ಮನೆಯಲ್ಲೇ ಕುಳಿತು ಮಾಡಬಹುದು ಅಥವಾ ತಮ್ಮ ಗ್ರಾಮದ ಗ್ರಾಮಸಹಾಯಕ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಮತ್ತು ರೈತಸಂಪರ್ಕಕೇಂದ್ರಗಳಿಗೆ ಭೇಟಿನೀಡಿ ಪ್ರಕ್ರಿಯೆಪೂರ್ಣಗೊಳಿಸಬಹುದು.

Contact Your\'s Advertisement; 9902492681

ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ತೊಂದರೆ ಉಂಟಾಗಲಿದೆ. ಸರ್ಕಾರವು ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿಯನ್ನು ಬಳಸಿ ಮುಂದಿನ ಪ್ರಕ್ರಿಯೆ ಆಧಾರ ಕಾರ್ಡ ಸಂಖ್ಯೆ ನಮೂದಿಸಿ ಆಧಾರಗೆ ಜೊಡಣೆಯಾಗಿರುವ ಮೊಬೈಲ್ ನಂಬರ್‍ಗೆ ಒಟಿಪಿ ಬಂದಿರುದನ್ನು ನಮೂದಿಸಿ ನಂತರ ಫೆÇೀಟೊ ಕ್ಲಿಕ್ಕಿಸಿದ ನಂತರ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್‍ಗೆ ಸಂದೇಶ ಬರುತ್ತದೆ.

ಆರ್‍ಟಿಸಿ ಆಧಾರ ಲಿಂಕ್ ಮಾಡಿಕೊಂಡಿದ್ದಲ್ಲಿ ಪ್ರಯೋಜನಗಳಾದ ಆರ್.ಟಿ.ಸಿ ಗೆ ಆಧಾರ ಲಿಂಕ್ ಮಾಡುವದರಿಂದ ಜಮೀನಿನ ದಾಖಲೆಗಳನ್ನು ಇನಷ್ಟು ಸುರಕ್ಷಿತ ಹಾಗೂ ಭೂ ದಾಖಲೆಗಳನ್ನು ಪಡೆಯುವದು ಸುಲಭವಾಗುತ್ತದೆ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸರಳವಾಗುವದು. ಖಾತೆ ವಿವಾದಗಳನ್ನು ತಪ್ಪಿಸಲು ಅನುಕೂಲ. ಸಾಲ ಪ್ರಕ್ರಿಯೆ ಸುಲಭವಾಗಿ ರೈತರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ತಾಲೂಕಿನ ಎಲ್ಲಾ ರೈತ ಬಾಂಧವರು ಸರ್ಕಾರದ ನಿರ್ದೇಶನದಂತೆ ಆಧಾರ ಸಂಖ್ಯೆಯನ್ನು ಪಹಣಿ ಪತ್ರಿಕೆಯಲ್ಲಿ ಜೋಡಣೆ ಮಾಡುವ ಕಾರ್ಯವನ್ನು ಸ್ವಯಂ ಪ್ರೇರಿತವಾಗಿ ಒಂದು ಆಧಾರ ಸಂಖ್ಯೆ ಜೋಡಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here