ವೈದ್ಯರ ನಿರ್ಲಕ್ಷ್ಯತನದಿಂದಲೇ ಮಗುವಿನ ಸಾವು : ಕರವೇ ಆರೋಪ

0
93

ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವಾಗಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮತ್ತು ಗೋಳಾ(ಕೆ) ಗ್ರಾಮಸ್ಥರು ಆಸ್ಪತ್ರೆ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದರು.

ಗೋಳಾ (ಕೆ) ಗ್ರಾಮದ ಗರ್ಭಿಣಿ ಬಸಮ್ಮ ಸಾಬಣ್ಣ ಅವರು 7 ತಿಂಗಳಿಂದ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಹೇಳಿದ ಹಾಗೆ ಚಿಕಿತ್ಸೆ ಮತ್ತು ಸ್ಕ್ಯಾನಿಂಗ್ ಕೂಡ ಮಾಡಿಸಿದ್ದಾರೆ. 8ನೇ ತಿಂಗಳಿಗೆ ಇವರು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಕಳುಹಿಸಿದ್ದರು.

Contact Your\'s Advertisement; 9902492681

ಜಿಲ್ಲಾ ಆಸ್ಪತ್ರೆಯವರು ಮಗುವಿನ ತಪಾಸಣೆ ಮಾಡಿ, ಮಗುವಿನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ ಬಳಿಕ ಮಗುವಿಗೆ ಗಡ್ಡೆಯಾಗಿದ್ದು, ಮಗು ಬದುಕುವದಿಲ್ಲ. ಮನೆಗೆ ತೆಗೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ಮನೆಗೆ ತಂದಾಗ ಮಗು ಮೃತಪಟ್ಟಿದೆ ತಿಳಿಸಿದರು.

ಪ್ರಾರಂಭಿಕ ಹಂತದಲ್ಲಿ ನಿಗಾವಹಿಸಿದ್ದರೇ ಮಗು ಉಳಿಯುತ್ತಿತ್ತು.ಆದರೆ ನಿರ್ಲಕ್ಷ್ಯ ವಹಿಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ಕೂಡಲೇ ಅಮಾನತು ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕುಟುಂಬಸ್ಥರು ಆಸ್ಪತ್ರೆ ಎದುರು ಧರಣಿ ಕುಳಿತರು. ಸ್ಥಳಕ್ಕೆ ಜಿಲ್ಲಾ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಬರುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.

ನಂತರ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಮೇಲಾಧೀಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ.ವೀರನಾಥ ಕನಕ, ಡಾ.ಜಮೀಲ್ ಹಾಜರಿದ್ದರು.

ಕರವೇ ತಾಲ್ಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಮುಖಂಡ ಬಸವರಾಜ ಮಯೂರ, ಉಪಾಧ್ಯಕ್ಷ ಮಹೇಶ ಕಾಂಬಳೆ, ಕಾರ್ಯದರ್ಶಿ ಮಹೇಶ ಹರ್ಲಕಟ್ಟಿ,, ನಿಂಗಪ್ಪ ಕನಗನಳ್ಳಿ, ಗ್ರಾ.ಪಂ. ಸದಸ್ಯ ಶ್ರೀಕಾಂತ ಗಂಗಬೊ, ಪ್ರಭು ಚವ್ಹಾಣ್, ಸಾಗರ ಬಂದೂಕ, ಶಿವು ಸುಬೇದಾರ, ಸುರೇಶ ಹೈಯಾಳಕರ, ಶಶಿ ಪೂಜಾರಿ, ಆಂಜನೇಯ ಕುಂಬಾರ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here