ಪರಸ್ಪರ ಶಿಷ್ಟಾಚಾರ ಪದ್ಧತಿ ಅವಶ್ಯಕ: ಖಾಜಾ ಬಂದಾ ನವಾಜ್ ದರ್ಗಾದ ಮಹಫಿಲ್ ನಲ್ಲಿ ಸೂಫಿ ಸಂದೇಶ

0
46

ಕಲಬುರಗಿ: ದೊಡ್ಡವರಿಗೆ ಗೌರವಿಸುವುದು, ಸಮಾನ ವಯಸ್ಕರಲ್ಲಿ ಮರ್ಯಾದೆ ಮತ್ತು ಪ್ರೀತಿ ಯ ಮನೋಭಾವ ಮತ್ತು ಚಿಕ್ಕವರಲ್ಲಿ ಶಿಷ್ಟಚಾರದ ಪದ್ಧತಿ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಅರೇಬಿಕ್ ವಿಭಾಗದ ಮಾಜಿ ಮುಖ್ಯಸ್ಥರಾದ ಮುಸ್ತಫಾ ಶರೀಫ್ ಅವರು ಹಜರತ್ ಖಾಜಾ‌ ಬಂದಾ ನವಾಜ್ (ರ.ಅ) ಕುರಿತು ಹೇಳಿದರು.

ಶನಿವಾರ ಹಜರತ್ ಖಾಜಾ ಬಂದಾ ನವಾಜ್ 620ನೇ ಉರುಸ್ ನಿಮಿತ್ತವಾಗಿ ದರ್ಗಾದ ಸಮಾಖಾನದಲ್ಲಿ ನಡೆದ ಸೆಮಿನಾರ ಕಾರ್ಯಕ್ರಮದಲ್ಲಿ ಉಪಸ್ಥಿತಿ ಗಣ್ಯರಿಂದ ಕಳೆದ ವರ್ಷದ ಸೆಮಿನಾರನ ಭಾಷಣ ಒಳಗೊಂಡ ‘ ಶಹಾಬಾಜ ಬುಕ’ ಬಿಡುಗಡೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಅಜ್ಮೀರನ ಖಾಜಾ ಗರೀಬ್ ನವಾಜ್ ದರ್ಗಾದ ಪೀಠಾಧಿಪತಿಗಳಾದ ಸಜ್ಜದೇ ನಶೀನರ ಸುಪುತ್ರ ಹಜರತ್ ಫಜಲೂಲ್ ಅಮೀನ್ ಸಾಹೇಬ್ ಅವರು ಕಾರ್ಯಕ್ರಮದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

ಉರ್ದು ಕವಿ ತಯ್ಯಬ್ ಯಾಕೂಬಿ ನಾಥ ಪ್ರಸ್ತುತ ಪಡಿಸಿದರು. ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಗಣ್ಯರನ್ನು ಸ್ವಾಗತಿಸಿದರು. ಜನಾಬ್ ಹಮೀದ್ ಅಕ್ಮಲ್ ಹಾಗೂ ಕೆಬಿಎನ್ ದರ್ಗಾದ ಕಾರ್ಯದರ್ಶಿ
ಅಬ್ದುಲ್ ಬಸೀದ ಉರ್ದು ಕವಿತೆ ವಾಚಿಸಿದರು. ಅಬ್ದುಲ್ ಬಸೀದ ವಂದಿಸಿದರು. ಕೆಬಿಎನ ವಿಶ್ವ ವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಡಾ. ಹಮಿದ ಅಕ್ಬರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಉರ್ದು ಕವಿಗಳು ಹಾಗೂ ಅಪಾರ ಭಕ್ತರು ಹಾಜರಿದ್ದರು. ಭಕ್ತಾದಿಗಳು ನಮಾಜ್ ಎ ಜೂಹುರ್, ನಮಾಜ ಎ ಆಸ್ರ್, ನಮಾಜ ಎ ಮಕ್ರಿಬ್, ನಮಾಜ ಎ ಇಶಾ ವ್ಯಕ್ತಪಡಿಸಿದರು. ರಾತ್ರಿ 9.30 ರಿಂದ ತಡರಾತ್ರಿ ವರೆಗೆ ಕವ್ವಾಲಿ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here